
ಮಂಗಳೂರು, (ಏಪ್ರಿಲ್ 09): ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ 1 ಫಲಿತಾಂಶ ಪ್ರಕಟವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಆಳ್ವಾಸ್ ಕಾಲೇಜಿನ ದಿಶಾ, ವಾಣಿಜ್ಯ ವಿಭಾಗದಲ್ಲಿ (ಕಾಮರ್ಸ್) 600ಕ್ಕೆ 600 ಅಂಕ ಗಳಿಸಿ ದಕ್ಷಿಣ ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದಿದ್ದಾರೆ. ಪರೀಕ್ಷೆ ನಡೆಯುತ್ತಿದ್ದಾಗಲೇ ತಾಯಿಯನ್ನು ಕಳೆದುಕೊಂಡು ಮನಸ್ಸಿನಲ್ಲಿ ದುಃಖ, ಕಣ್ಣಲ್ಲಿ ನೀರು ತುಂಬಿಕೊಂಡು ಧೃತಿಗೆಡದೇ ಪರೀಕ್ಷೆ ಬರೆದು ಈಗ ಕರ್ನಾಟಕದ ಟಾಪರ್ ಆಗಿ ಹೊರಹೊಮ್ಮಿದ್ದಾಳೆ. ಈ ಮೂಲಕ ಮಾದರಿಯಾಗಿದ್ದಾಳೆ. ಇನ್ನು ದಿಶಾ ಸಾಧನೆಗೆ ಕುಟುಂಬಸ್ಥರು, ಕಾಲೇಜು ಆಡಳಿತ ಮಂಡಲಿ ಶುಭಾಶಯಗಳನ್ನ ತಿಳಿಸಿದೆ.