
ರಾಜ್ಕುಮಾರ್ ಅವರ ಪುಣ್ಯಸ್ಮರಣೆ ಏಪ್ರಿಲ್ 12ರಂದು ನಡೆಯಲಿದೆ. ಈ ಸಂದರ್ಭದಂದು ಅವರನ್ನು ಎಲ್ಲರೂ ಸ್ಮರಿಸಿಕೊಳ್ಳುತ್ತಿದ್ದಾರೆ. ಅವರು ಇಲ್ಲದೆ ಬರೋಬ್ಬರಿ 20 ವರ್ಷಗಳು ಕಳೆದಿವೆ. ಏಪ್ರಿಲ್ 12ರ , 2006ರಲ್ಲಿ ರಾಜ್ಕುಮಾರ್ ಅವರು ಅನಾರೋಗ್ಯದಿಂದ ಮೃತಪಟ್ಟರು. ರಾಜ್ಕುಮಾರ್ ಅವರು ಹುಟ್ಟಿದ್ದು ಗಾಜನೂರಿನಲ್ಲಿ. ಆ ಊರಿನ ಬಗ್ಗೆ ಅವರಿಗೆ ಅಪಾರವಾದ ಪ್ರೀತಿ ಇತ್ತು. ಇದನ್ನು ಅನೇಕ ಬಾರಿ ಅವರು ಹಂಚಿಕೊಂಡಿದ್ದರು.
ರಾಜ್ಕುಮಾರ್ ಕೃಷಿ ಹಿನ್ನೆಲೆ ಕುಟುಂಬದಿಂದ ಬಂದವರು. ಗಾಜನೂರಿನಲ್ಲಿ ಸಣ್ಣ ಮನೆ ಹೊಂದಿದ್ದ ಅವರು ಅಲ್ಲಿಯೇ ವಾಸಿಸಲು ಬಯಸುತ್ತಿದ್ದರು. ಹಸಿರನ್ನು ತುಂಬಾನೇ ಇಷ್ಟಪಡುತ್ತಿದ್ದರು. ಗುಡ್ಡ ಬೆಟ್ಟಗಳು ಎಂದರೆ ಅವರಿಗೆ ಇಷ್ಟ. ಗಾಜನೂರು ಈ ಎಲ್ಲಾ ಅಂಶಗಳನ್ನು ಹೊಂದಿದ್ದರಿಂದ ಅದರ ಮೇಲೆ ಅವರಿಗೆ ಅಪಾರ ಮಮತೆ ಇತ್ತು.
‘ಬಂಗಲೆ ನೋಡಿದಾಗ ಆಗದ ಆನಂದ ಈ ಪುಟ್ಟ ಮನೆ ಕಂಡಾಗ ಆಗುತ್ತದೆ’ ಎಂದು ರಾಜ್ಕುಮಾರ್ ಹೇಳಿದ್ದರು. ರಾಜ್ಕುಮಾರ್ ತಂದೆಯೂ ನಾಟಕಾಭ್ಯಸ ನಡೆಸುತ್ತಿದ್ದರು. ‘ತಂದೆ-ತಾಯಿ ಇಬ್ಬರೂ ನಮ್ಮನ್ನು ಉತ್ತಮವಾಗಿ ಸಾಕಿದ್ದಾರೆ. ಯಾರಿಗೂ ತೋರದ ಪ್ರಿತಿಯನ್ನು ನಮಗೆ ತೋರಿಸುತ್ತಿದ್ದರು. ಅವರು ಹಸಿವಿದ್ದುಕೊಂಡು ನಮಗೆ ಊಟ ಹಾಕುತ್ತಿದ್ದರು’ ಎಂದು ರಾಜ್ಕುಮಾರ್ ಅವರು ವಿವರಿಸಿದ್ದರು.
ಇದನ್ನೂ ಓದಿ: ರಾಜ್ಕುಮಾರ್ ಹಾಗೂ ಪಾರ್ವತಮ್ಮಗೆ ಇಷ್ಟ ಆಗಿತ್ತು ಆ ಒಂದು ಸಿನಿಮಾ
ರಾಜ್ಕುಮಾರ್ ಅವರು ‘ಬೇಡರಕಣ್ಣಪ್ಪ’ ಸಿನಿಮಾ 1954ರಲ್ಲಿ ರಿಲೀಸ್ ಆಯಿತು. ಮುತ್ತುರಾಜ್ ಅವರು ಈ ಸಿನಿಮಾ ಮೂಲಕ ರಾಜ್ಕುಮಾರ್ ಆಗಿ ಬದಲಾದರು. ಆ ಬಳಿಕ ರಾಜ್ಕುಮಾರ್ ಅವರು ಹಿಂದಿರುಗಿ ನೋಡಲೇ ಇಲ್ಲ. ರಾಜ್ಕುಮಾರ್ ಅವರು ಕೊನೆಯವರೆಗೂ ಸಿನಿಮಾ ಮಾಡುತ್ತಿದ್ದರು. ಈ ಚಿತ್ರಕ್ಕೆ ಪಂಡರೀಬಾಯಿ ನಾಯಕಿ ಆಗಿದ್ದರು. ಹಲವು ಹಾಡುಗಳನ್ನು ರಾಜ್ಕುಮಾರ್ ಹಾಡಿದ್ದರು ಎಂಬುದು ವಿಶೇಷ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.