ಈ ರಾಶಿಗೆ ಶನಿ ನೀಡುವ ಪೆಟ್ಟು ತುಂಬಾ ಭೀಕರ!: ಎಚ್ಚರಿಕೆ ಹೆಜ್ಜೆ ಅಗತ್ಯ

ಈ ರಾಶಿಗೆ ಶನಿ ನೀಡುವ ಪೆಟ್ಟು ತುಂಬಾ ಭೀಕರ!: ಎಚ್ಚರಿಕೆ ಹೆಜ್ಜೆ ಅಗತ್ಯ

ಮಕರ ರಾಶಿ ಹತ್ತನೇ ರಾಶಿಯಾಗಿದ್ದು ಅಧಿಪತಿಯಾದ ಶನಿ ತೃತೀಯದಲ್ಲಿ ಇರುವನು. ಈ ರಾಶಿಗೆ ಎಲ್ಲ ಗ್ರಹರೂ ಪ್ರತಿಕೂಲತೆಯನ್ನು ಹೆಚ್ಚು ಉಂಟುಮಾಡುವ ಸಾಧ್ಯತೆಯಿದ್ದು, ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗುವುದು. ದೈವ ಬಲವನ್ನು ನಂಬಿ ಮುನ್ನಡೆದರೆ ಯಶಸ್ಸು ಸಿಗಲಿದೆ. ದುಡುಕಿ ಯೋಜನೆಯನ್ನು ಹಾಳು ಮಾಡಿಕೊಳ್ಳುವುದು ಬೇಡ.

ಆರ್ಥಿಕತೆ, ಆದಾಯ ಮತ್ತು ಸಾಲ :

​ಎರಡನೇ ರಾಶಿಯಲ್ಲಿ ರಾಹು ಮತ್ತು ಮಂಗಳ ಸೇರಿರುವುದರಿಂದ ಆರ್ಥಿಕವಾಗಿ ಹಠಾತ್ ಏರಿಳಿತಗಳು ಕಂಡುಬರುತ್ತವೆ. ಕೈಗೆ ಬರಬೇಕಾದ ಹಣ ಬರಬಹುದು, ಆದರೆ ಅದು ಕೂಡಲೇ ಬೇರೆ ಯಾವುದೋ ಉದ್ದೇಶಕ್ಕೆ ಖರ್ಚು ಆಗುವ ಸಾಧ್ಯತೆ ಹೆಚ್ಚು. ಎಂಟನೇ ರಾಶಿಲ್ಲಿ ಕೇತು ಇರುವುದರಿಂದ ಹಳೆಯ ಸಾಲದ ವಿಚಾರದಲ್ಲಿ ಸ್ವಲ್ಪ ಆತಂಕ ಎದುರಾಗಬಹುದು ಅಥವಾ ವಿಮೆಗೆ ಸಂಬಂಧಿಸಿದ ಹಣ ಸಿಗುವಲ್ಲಿ ವಿಳಂಬವಾಗಬಹುದು.

ಉದ್ಯೋಗ, ಅಧಿಕಾರ ಮತ್ತು ಸರ್ಕಾರಿ ಕಾರ್ಯ :

​ಮೂರನೇ ಮನೆಯಲ್ಲಿ ಶನಿ ಮತ್ತು ಸೂರ್ಯ ಇರುವುದರಿಂದ ವೃತ್ತಿ ಕ್ಷೇತ್ರದಲ್ಲಿ ನಿಮ್ಮ ಪ್ರಭಾವ ಹೆಚ್ಚಲಿದೆ. ಸವಾಲುಗಳನ್ನು ಎದುರಿಸಿ ಯಶಸ್ವಿಯಾಗುವಿರಿ. ಸರ್ಕಾರಿ ಕಾರ್ಯಗಳಿಗೆ ಈ ಸಮಯ ಅತ್ಯಂತ ಪೂರಕವಾಗಿದೆ. ಹೊಸ ಜವಾಬ್ದಾರಿ ಅಥವಾ ಅಧಿಕಾರ ಸಿಗುವ ಲಕ್ಷಣಗಳಿವೆ.

ಗೃಹ ನಿರ್ಮಾಣ ಮತ್ತು ಕೃಷಿ :

​ನಾಲ್ಕನೇ ಮನೆಯಲ್ಲಿ ಶುಕ್ರನ ಸಂಚಾರವು ಮನೆಯಲ್ಲಿ ಸುಖ-ಸಂತೋಷವನ್ನು ನೀಡುತ್ತದೆ. ಗೃಹಾಲಂಕಾರ ಅಥವಾ ಹೊಸ ವಾಹನ ಖರೀದಿಗೆ ಹಣ ವಿನಿಯೋಗಿಸುವಿರಿ. ಎರಡನೇ ಮನೆಯಲ್ಲಿರುವ ಮಂಗಳ ಕೃಷಿ ಭೂಮಿಯ ಆದಾಯವನ್ನು ಹೆಚ್ಚಿಸುತ್ತಾನೆ. ಅಡಿಕೆ ಬೆಳೆಗಾರರಿಗೆ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಸಿಗಬಹುದು.

ವಿದ್ಯಾಭ್ಯಾಸ ಮತ್ತು ವಿದೇಶ ಪ್ರವೇಶ :

​ಮೂರನೇ ಮನೆಯಲ್ಲಿರುವ ಶನಿ ಮತ್ತು ರಾಹುವಿನ ದೃಷ್ಟಿಯು ನಿಮ್ಮನ್ನು ವಿದೇಶಕ್ಕೆ ಸಂಬಂಧಿಸಿದ ಕಾರ್ಯಗಳಲ್ಲಿ ಯಶಸ್ವಿಗೊಳಿಸುತ್ತದೆ. ವಿದೇಶ ಪ್ರವೇಶ ಬಯಸುವವರಿಗೆ ಶುಭ ವಾರ್ತೆ ಸಿಗಲಿದೆ.

ಆಹಾರ ಉದ್ಯಮ ಮತ್ತು ಸಮಾಜ ಸೇವೆ :

​ಆಹಾರ ಮತ್ತು ಹೋಟೆಲ್ ಉದ್ಯಮದಲ್ಲಿ ಇರುವವರಿಗೆ ಉತ್ತಮ ಲಾಭವಿದೆ. ಸಮಾಜ ಸೇವೆಯಲ್ಲಿ ತೊಡಗಿರುವವರಿಗೆ ಮೂರನೇ ಮನೆಯ ಗ್ರಹಗಳ ಬಲದಿಂದಾಗಿ ಮನ್ನಣೆ ಸಿಗಲಿದೆ.

ಸಂಬಂಧ :

​ಕುಟುಂಬ ಸ್ಥಾನದಲ್ಲಿ ಎರಡನೇ ರಾಹು ಮತ್ತು ಮಂಗಳ ಸಂಯೋಗ ಇರುವುದರಿಂದ ಕೌಟುಂಬಿಕ ಮಾತುಕತೆಗಳಲ್ಲಿ ಜಾಗರೂಕರಾಗಿರಿ. ನಿಮ್ಮ ನೇರ ಮಾತುಗಳು ಸಂಬಂಧಿಕರಿಗೆ ನೋವುಂಟು ಮಾಡಬಹುದು.

ಹನುಮಾನ್ ಚಾಲಿಸ್ ಪಠವನ್ನು ಪ್ರತಿ ದಿನ‌ ಅಥವಾ ಪ್ರತಿ ಶನಿವಾರದಂದು ಮಾಡಿ. ಬರುವ ವಿಘ್ನವನ್ನು ಎದುರಿಸುವ ಧೈರ್ಯ ಬರಲಿದೆ.

– ಲೋಹಿತ ಹೆಬ್ಬಾರ್

Source link

Leave a Reply

Your email address will not be published. Required fields are marked *