Headlines

ಕಿಸಾನ್ ವಿಕಾಸ್ ಪತ್ರ; ಹಣ ಡಬಲ್ ಮಾಡುವ ಪೋಸ್ಟ್ ಆಫೀಸ್ ಸ್ಕೀಮ್ – Kannada News | Post office scheme Kisan Vikas Patra, investment amount, maturity, interest, tax and other details

ಜನಪ್ರಿಯ ಪೋಸ್ಟ್ ಆಫೀಸ್ ಸ್ಕೀಮ್​ಗಳಲ್ಲಿ ಕಿಸಾನ್ ವಿಕಾಸ್ ಪತ್ರವೂ (Kisan Vikas Patra) ಒಂದು. ಮೂಲತಃ ರೈತರಿಗೆಂದು ಇಂಡಿಯಾ ಪೋಸ್ಟ್ ಸಂಸ್ಥೆ 1988ರಲ್ಲಿ ಈ ಸ್ಕೀಮ್ ಅನ್ನು ಆರಂಭಿಸಿತ್ತು. ಇದನ್ನೀಗ ಎಲ್ಲರಿಗೂ ಲಭ್ಯವಾಗಿಸಲಾಗಿದೆ. 10 ವರ್ಷ ಮೇಲ್ಪಟ್ಟ ವಯಸ್ಸಿನ ಯಾವುದೇ ಭಾರತೀಯ ನಾಗರಿಕರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಅಪ್ರಾಪ್ತರಾಗಿದ್ದರೆ ಅವರ ಹೆಸರಿನಲ್ಲಿ ದೊಡ್ಡವರು ಖಾತೆ ತೆರೆದು, ನಂತರ ಅವರಿಗೆ ವರ್ಗಾವಣೆ ಮಾಡಲು ಅವಕಾಶ ಇದೆ.

ಕಿಸಾನ್ ವಿಕಾಸ್ ಪತ್ರದಲ್ಲಿ ಹೂಡಿಕೆ, ಅವಧಿ ಇತ್ಯಾದಿ ಮಾಹಿತಿ

ಕಿಸಾನ್ ವಿಕಾಸ್ ಪತ್ರದ ಅಕೌಂಟ್ 115 ತಿಂಗಳಿಗೆ ಮೆಚ್ಯೂರ್ ಆಗುತ್ತದೆ. ಅಂದರೆ, 9 ವರ್ಷ 5 ತಿಂಗಳಷ್ಟು ದೀರ್ಘದ ಯೋಜನೆ ಇದು. ಕನಿಷ್ಠ ಹೂಡಿಕೆ 1,000 ರೂ ಇದ್ದರೆ, ಗರಿಷ್ಠಕ್ಕೆ ಮಿತಿ ಇಲ್ಲ. ಆದರೆ, 10,000 ರೂ ಹಾಗೂ ಹೆಚ್ಚಿನ ಹಣದ ಹೂಡಿಕೆ ಮಾಡಿದರೆ ಅದರ ಆದಾಯ ಮೂಲವನ್ನು ತೋರಿಸಬೇಕು.

ಇದನ್ನೂ ಓದಿ: ಕೇವಲ 2,000 ರೂ ಹೂಡಿಕೆಯಲ್ಲಿ ಕೋಟಿ ರೂ ಗಳಿಸಬೇಕಾ? ಎಸ್​ಐಪಿ ಜೊತೆ ಸ್ಟೆಪಪ್ ತಂತ್ರ ಅನುಸರಿಸಿ

ಇದರಲ್ಲಿ ಮಾಡುವ ಹೂಡಿಕೆಯು ಮೆಚ್ಯೂರಿಟಿಗೆ ಬಂದಾಗ ಎರಡು ಪಟ್ಟು ಹೆಚ್ಚಿರುತ್ತದೆ. ಅಂದರೆ, 10 ವರ್ಷದೊಳಗೆ ನಿಮ್ಮ ಹಣ ಡಬಲ್ ಆಗಿರುತ್ತದೆ. ಕಿಸಾನ್ ವಿಕಾಸ್ ಪತ್ರ ಯೋಜನೆಯ ಕೆಲ ವಿವರ ಇಂತಿವೆ:

  • ಕೆವಿಪಿ ಯೋಜನೆ ಅವಧಿ: 115 ತಿಂಗಳು
  • ಹೂಡಿಕೆ ವಿಧಾನ: ಲಂಪ್ಸಮ್
  • ವಾರ್ಷಿಕ ಬಡ್ಡಿ: ಶೇ. 7.5
  • ಹೂಡಿಕೆ ಮೊತ್ತ: 1,000 ರೂನಿಂದ ಗರಿಷ್ಠ ಎಷ್ಟು ಬೇಕಾದರೂ.
  • ಎಲ್ಲಿ ಹೂಡಿಕೆ: ಪೋಸ್ಟ್ ಆಫೀಸ್ ಹಾಗೂ ಇಂಡಿಯಾ ಪೋಸ್ಟ್ ವೆಬ್​ಸೈಟ್​ನಲ್ಲಿ

ಇದನ್ನೂ ಓದಿ: ವಾಲಂಟರಿ ಪ್ರಾವಿಡೆಂಟ್ ಫಂಡ್; ನಿಮ್ಮ ಇಪಿಎಫ್ ಕಾರ್ಪಸ್ ಹೆಚ್ಚಿಸುವ ಒಂದು ಪ್ಲಾನ್

ಕಿಸಾನ್ ವಿಕಾಸ್ ಪತ್ರಕ್ಕೆ ತೆರಿಗೆ ಲಾಭ ಇಲ್ಲ

ಇತರ ಕೆಲ ಸ್ಮಾಲ್ ಸೇವಿಂಗ್ಸ್ ಸ್ಕೀಮ್​ಗಳಂತೆ ಕಿಸಾನ್ ವಿಕಾಸ್ ಪತ್ರ ಯೋಜನೆಯಿಂದ ಟ್ಯಾಕ್ಸ್ ಬೆನಿಫಿಟ್ ಇರುವುದಿಲ್ಲ. ಅಂದರೆ, ಸೆಕ್ಷನ್ 80ಸಿ ಅಡಿಯಲ್ಲಿ ಇದಕ್ಕೆ ಡಿಡಕ್ಷನ್ ಸೌಲಭ್ಯ ಇರುವುದಿಲ್ಲ. ಇದಕ್ಕೆ ಸಿಗುವ ಬಡ್ಡಿಗೆ ತೆರಿಗೆ ಅನ್ವಯ ಆಗುತ್ತದೆ. ಪ್ರತೀ ವರ್ಷ ಉತ್ಪತ್ತಿಯಾಗುವ ಬಡ್ಡಿ ಹಣಕ್ಕೆ ಶೇ 10ರಷ್ಟು ಟಿಡಿಎಸ್ ಕಡಿತಗೊಳಿಸಲಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *