Headlines

Daily Devotional: ಕುಂಕುಮಾರ್ಚನೆಯನ್ನ ಮನೆಯಲ್ಲಿ ಮಾಡಬಹುದಾ? – Kannada News | Kumkumarchana at Home: Benefits, Ritual and Puja Tips

ಕುಂಕುಮಾರ್ಚನೆಯನ್ನ ಮನೆಯಲ್ಲಿ ಮಾಡಬಹುದಾ ಎಂದು ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಕುಂಕುಮಾರ್ಚನೆಯನ್ನು ಸಾಮಾನ್ಯವಾಗಿ ದೇವಾಲಯಗಳಲ್ಲಿ ಅರ್ಚಕರು ಮಾಡುವುದನ್ನು ಕಾಣುತ್ತೇವೆ. ಆದರೆ, ಇದನ್ನು ಮನೆಯಲ್ಲಿ ಮಾಡಬಹುದೇ ಎಂಬ ಪ್ರಶ್ನೆ ಹಲವರಲ್ಲಿ ಮೂಡಿದೆ. ಖಂಡಿತವಾಗಿಯೂ ಮನೆಯಲ್ಲಿ ಕುಂಕುಮಾರ್ಚನೆಯನ್ನು ಮಾಡಬಹುದು. ಪೂರ್ವಾಭಿಮುಖ ಅಥವಾ ಉತ್ತರಾಭಿಮುಖವಾಗಿ ಕುಳಿತು, ದೇವಿಯ ಅಷ್ಟೋತ್ತರ ನಾಮಾವಳಿಗಳನ್ನು ಪಠಿಸುತ್ತಾ, ತೋರು ಬೆರಳನ್ನು ಹೊರತುಪಡಿಸಿ ಉಳಿದ ಮೂರು ಬೆರಳುಗಳಿಂದ ಶುದ್ಧವಾದ ಕುಂಕುಮವನ್ನು ವಿಳ್ಳೆದೆಲೆ ಅಥವಾ ಬೆಳ್ಳಿ ತಟ್ಟೆಯಲ್ಲಿರುವ ದೇವಿಯ ಚಿತ್ರಕ್ಕೆ ಅರ್ಪಿಸಬಹುದು. ಇದರಿಂದ ನಿಮ್ಮ ಪ್ರಯಾಣ, ಉದ್ಯೋಗ, ವಿವಾಹ, ವಿದ್ಯಾಭ್ಯಾಸ, ಮನೆ ನಿರ್ಮಾಣ ಮತ್ತು ಸಂತಾನ ಸೇರಿದಂತೆ ಯಾವುದೇ ಕಾರ್ಯಗಳಲ್ಲಿ ಎದುರಾಗುವ ಅಡೆತಡೆಗಳು ನಿವಾರಣೆಯಾಗಿ ಯಶಸ್ಸು ಲಭಿಸುತ್ತದೆ. ಮಂಗಳವಾರ, ಶುಕ್ರವಾರ ಅಥವಾ ಪ್ರತಿದಿನ ಬ್ರಾಹ್ಮಿ ಮುಹೂರ್ತದಲ್ಲಿ ಕುಂಕುಮಾರ್ಚನೆ ಮಾಡುವುದು ಉತ್ತಮ ಫಲ ನೀಡುತ್ತದೆ ಎಂದು ಗುರೂಜಿ ಹೇಳಿದ್ದಾರೆ.

 

 

 

Source link

Leave a Reply

Your email address will not be published. Required fields are marked *