Headlines

‘ನಾನು ಮತ್ತೊಂದು ಮದುವೆ ಆಗ್ತೀನಿ’; ರಣಬೀರ್ ಕಪೂರ್ ಹೇಳಿಕೆಗೆ ಟೀಕೆ – Kannada News | Ranbir Kapoor’s ‘Marry Again’ Remark Ignites Ramayana Role Controversy

ರಾಮನ ಪಾತ್ರ ಮಾಡೋದು ಎಂದರೆ ಅದು ಸಣ್ಣ ಮಾತಲ್ಲ. ಪಾತ್ರ ಮಾಡುವುದು ಚಾಲೆಂಜ್ ಅಲ್ಲ, ಆದರೆ, ಅದರ ಸುತ್ತಲೂ ಹುಟ್ಟಿಕೊಳ್ಳುವ ವಿವಾದ ತಣ್ಣಗಾಗಿಸುವುದು ದೊಡ್ಡ ಚಾಲೆಂಜ್. ಈಗ ರಣಬೀರ್ ಕಪೂರ್ (Ranbir Kapoor) ಅದೇ ರೀತಿಯ ಚಾಲೆಂಜ್​ ಎದುರಿಸುತ್ತಿದ್ದಾರೆ. ಅವರು ಅನೇಕ ನಟಿಯರ ಜೊತೆ ಸುತ್ತಾಡಿದ್ದಾರೆ. ಎಣ್ಣೆ ಪಾರ್ಟಿ ಮಾಡಿದ್ದಾರೆ. ಈಗ ಇದೆಲ್ಲವನ್ನೂ ತಂದು ಟೀಕೆ ಮಾಡಲಾಗುತ್ತಿದೆ. ಅದೇ ರೀತಿ ಅವರು ಈ ಮೊದಲು ನೀಡಿದ್ದ, ‘ಮತ್ತೊಂದು ಮದುವೆ ಆಗ್ತೀನಿ’ ಎಂಬ ಹೇಳಿಕೆಯನ್ನು ಮುನ್ನೆಲೆಗೆ ತರಲಾಗಿದೆ. ‘ಇವರಿಗೆಲ್ಲ ರಾಮನ ಪಾತ್ರ ನೀಡಲಾಗಿದೆಯಲ್ಲ’ ಎಂದು ಕೆಲವರು ಟೀಕೆ ಮಾಡಿದ್ದಾರೆ.

ರಣಬೀರ್ ಕಪೂರ್ ಅವರು ಹಿಂದಿಯ ‘ರಾಮಾಯಣ’ ಸಿನಿಮಾದಲ್ಲಿ ರಾಮನ ಪಾತ್ರ ಮಾಡುತ್ತಿದ್ದಾರೆ. ಅದರ ಲುಕ್ ರಿಲೀಸ್ ಆಗಿ ಗಮನ ಸೆಳೆದಿದೆ. ಅವರು ರಾಮನ ಪಾತ್ರಕ್ಕೆ ಆಯ್ಕೆ ಆದಾಗಿನಿಂದಲೂ ಟೀಕೆಗಳನ್ನು ಎದುರಿಸುತ್ತಿದ್ದಾರೆ. ರಣಬೀರ್ ಈ ಚಿತ್ರಕ್ಕಾಗಿ ಮದ್ಯ ಹಾಗೂ ನಾನ್ ವೆಜ್ ಸೇವನೆ ಬಿಟ್ಟಿದ್ದಾಗಿ ಹೇಳಿಕೊಂಡಿದ್ದಾರೆ. ಆದರೆ, ಇದನ್ನು ಒಪ್ಪಲು ಅನೇಕರು ರೆಡಿ ಇದ್ದಾರೆ. ಜನ ಸಾಮಾನ್ಯರಿಂದ ಹಿಡಿದು ಕಂಗನಾ ರಣಾವತ್ ರೀತಿಯ ಸೆಲೆಬ್ರಿಟಿಗಳು ರಣಬೀರ್ ಆಯ್ಕೆ ಅನ್ನು ಟೀಕಿಸಿದ್ದಾರೆ. ಅವರು ಸ್ತ್ರೀ ಲೋಲ ಎಂದು ಕರೆದಿರುವ ಅನೇಕರು, ರಾಮನ ಪಾತ್ರದ ಪಾವಿತ್ರ್ಯತೆ ಹಾಳು ಮಾಡಲಾಗಿದೆ ಎಂದು ಟೀಕಿಸಿದ್ದಾರೆ.

ಹೀಗಿರುವಾಗಲೇ ಒಂದು ವಿಡಿಯೋ ವೈರಲ್ ಆಗಿದೆ. ಇದು 2022ರ ಸಂದರ್ಶನದಲ್ಲಿ ನೀಡಿದ ವಿಡಿಯೋ. ‘ಶಂಶೇರ’ ಹೆಸರಿನ ಸಿನಿಮಾನ ರಣಬೀರ್ ಕಪೂರ್ ಮಾಡಿದ್ದರು. ಈ ಚಿತ್ರದ ಸಂದರ್ಶನದಲ್ಲಿ ಆ್ಯಂಕರ್ ಅವರು, ನಿಮ್ಮ ಮದುವೆಯಲ್ಲಿ ಸಮೋಸಾ-ಚಟ್ನಿ ಉತ್ತಮವಾಗಿರಲಿಲ್ಲ ಎಂದರು. ಆಗ ರಣಬೀರ್ ಕಪೂರ್ ಅವರು, ‘ನಾನು ಇನ್ನೊಂದು ಮದುವೆ ಆಗುತ್ತೇನೆ. ಆಗ ಒಳ್ಳೆಯ ಪಾರ್ಟಿ ಕೊಡುತ್ತೇನೆ’ ಎಂದು ಅವರು ಹೇಳಿದ್ದರು.

ಇದನ್ನೂ ಓದಿ: ಶ್ರೀರಾಮನ ಪಾತ್ರಕ್ಕೆ ರಣಬೀರ್ ಕಪೂರ್​ಗಿಂತ ಉತ್ತಮ ನಟ ಯಾರೂ ಇಲ್ಲ: ನಮಿತ್ ಮಲ್ಹೋತ್ರಾ

ನಾಲ್ಕು ವರ್ಷಗಳ ಬಳಿಕ ಈ ವಿಡಿಯೋನ ಮತ್ತೆ ವೈರಲ್ ಮಾಡಲಾಗಿದೆ. ಅನೇಕರು ರಾಮನ ಪಾತ್ರಕ್ಕೆ ರಣಬೀರ್ ಆಯ್ಕೆಯನ್ನು ಟೀಕಿಸುವ ಕೆಲಸ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:27 am, Sat, 18 April 26

Source link

Leave a Reply

Your email address will not be published. Required fields are marked *