Headlines

ಗ್ರೀನ್​ ಸಿಕ್ಸ್​ಗೆ ಕಾರ್ ಡೆಂಟ್: ಸಿಕ್ತು 5 ಲಕ್ಷ ರೂ. ದೇಣಿಗೆ..! – Kannada News | Cameron Green’s SIX Puts TATA Sierra Car Dent

IPL 2026: ಐಪಿಎಲ್ ಅಂಗಳದಲ್ಲಿ ಕೊನೆಗೂ ಕ್ಯಾಮರೋನ್ ಗ್ರೀನ್ ಅವರ ಬ್ಯಾಟ್ ಸದ್ದು ಮಾಡಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಗುಜರಾತ್ ಟೈಟಾನ್ಸ್​ ವಿರುದ್ಧದ ಪಂದ್ಯದಲ್ಲಿ ಗ್ರೀನ್ ಸಿಡಿಸಿದ ಸಿಕ್ಸರ್ ಕೇವಲ ಬೌಂಡರಿ ಗೆರೆ ದಾಟಲಿಲ್ಲ, ಬದಲಿಗೆ ಕ್ರೀಡಾಂಗಣದಲ್ಲಿ ಪ್ರದರ್ಶನಕ್ಕಿಟ್ಟಿದ್ದ ಹೊಸ ಟಾಟಾ ಸಿಯೆರಾ ಕಾರಿನ ಮೇಲೆಯೇ ಬಿದ್ದಿದೆ! ಈ ಅಮೋಘ ಸಿಕ್ಸರ್‌ನಿಂದಾಗಿ 5 ಲಕ್ಷ ರೂ. ದೇಣಿಗೆ ಸಂಗ್ರಹವಾಗಿದೆ.

ಈ ಪಂದ್ಯದ 13ನೇ ಓವರ್‌ನಲ್ಲಿ ಗುಜರಾತ್ ವೇಗಿ ಅಶೋಕ್ ಶರ್ಮಾ ಎಸೆದ ಎಸೆತವನ್ನು ಕೆಕೆಆರ್ ದಾಂಡಿಗ ಕ್ಯಾಮರೋನ್ ಗ್ರೀನ್ ಅದ್ಭುತವಾಗಿ ಡೀಪ್ ಮಿಡ್-ವಿಕೆಟ್ ಕಡೆಗೆ ಫ್ಲಿಕ್ ಮಾಡಿದರು. ಗಾಳಿಯಲ್ಲಿ ತೇಲಿಬಂದ ಚೆಂಡು ನೇರವಾಗಿ ಬೌಂಡರಿ ಲೈನ್‌ ಆಚೆಗಿದ್ದ ಕಾರಿನ ಡೋರಿನ ಭಾಗಕ್ಕೆ ಅಪ್ಪಳಿಸಿತು. ಈ ಹೊಡೆತದ ತೀವ್ರತೆಗೆ ಕಾರಿನ ಬಾಡಿ ಮೇಲೆ ಗುಳಿ ಬಿದ್ದಿರುವುದು ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.

₹5 ಲಕ್ಷ ದೇಣಿಗೆ:

ಈ ಒಂದು ಸಿಕ್ಸರ್​ನಿಂದ 5 ಲಕ್ಷ ರೂ. ದೇಣಿಗೆ ಸಂಗ್ರಹವಾಗಿದೆ ಎಂದರೆ ನಂಬಲೇಬೇಕು. ಹೌದು,  ಟಾಟಾ ಕಂಪನಿಯು, ಬ್ಯಾಟರ್‌ಗಳು ಹೊಡೆಯುವ ಚೆಂಡು ನೇರವಾಗಿ ಕಾರಿಗೆ ಬಡಿದರೆ, ತಳಮಟ್ಟದ ಕ್ರಿಕೆಟ್ ಅಭಿವೃದ್ಧಿಗಾಗಿ  5 ಲಕ್ಷ ರೂಪಾಯಿಗಳನ್ನು ದೇಣಿಗೆಯಾಗಿ ನೀಡುವುದಾಗಿ ತಿಳಿಸಿದೆ. ಅದರಂತೆ ಇದೀಗ ಗ್ರೀನ್ ಅವರ ಈ ಭರ್ಜರಿ ಸಿಕ್ಸರ್​ನಿಂದ ತಳಮಟ್ಟದ ಕ್ರಿಕೆಟ್ ಅಭಿವೃದ್ಧಿಗೆ 5 ಲಕ್ಷ ರೂ. ಸಿಗಲಿದೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 20 ಓವರ್​ಗಳಲ್ಲಿ 180 ರನ್ ಕಲೆಹಾಕಿದ್ದರು. ಈ ಗುರಿಯನ್ನು ಗುಜರಾತ್ ಟೈಟಾನ್ಸ್ ತಂಡವು 19.4 ಓವರ್​ಗಳಲ್ಲಿ ಚೇಸ್ ಮಾಡಿ 5 ವಿಕೆಟ್​ಗಳ ಜಯ ಸಾಧಿಸಿದೆ.

Source link

Leave a Reply

Your email address will not be published. Required fields are marked *