ಕೆಲಸದ ಸ್ಥಳಗಳಲ್ಲಿ ಆಫೀಸ್ ಪಾಲಿಟಿಕ್ಸ್ (office politics), ಸಹದ್ಯೋಗಿಗಳ ನಡುವೆ ಮನಸ್ತಾನ, ಶೀತಲ ಸಮರ ಇದ್ದೇ ಇರುತ್ತದೆ. ಕೆಲಸದ ಟೆನ್ಷನ್ ಜೊತೆಗೆ ಈ ಕಿರಿಕಿರಿಗಳು ಒತ್ತಡವನ್ನು ಇನ್ನಷ್ಟು ಹೆಚ್ಚಿಸುತ್ತದೆ, ಮಾನಸಿಕ ಶಾಂತಿಯನ್ನು ಹಾಳು ಮಾಡುತ್ತದೆ. ಅಲ್ಲದೆ ಈ ಆಫೀಸ್ ಪಾಲಿಟಿಕ್ಸ್ ವೃತ್ತಿ ಜೀವನದ ಯಶಸ್ಸಿಗೂ ಅಡ್ಡಿಯನ್ನು ಉಂಟು ಮಾಡುತ್ತದೆ. ಹೀಗಿರುವಾಗ ಈ ಎಲ್ಲಾ ಕಿರಿಕಿರಿಗಳನ್ನು ಸಮರ್ಥವಾಗಿ ನಿಭಾಯಿಸೋದು ತುಂಬಾನೇ ಮುಖ್ಯವಾಗಿದೆ. ಆದರೆ ಹೆಚ್ಚಿನವರಿಗೆ ಆಫೀಸ್ ಒಳ ರಾಜಕೀಯಗಳನ್ನು ಸಮರ್ಥವಾಗಿ ನಿಭಾಯಿಸೋದು ಹೇಗೆ ಎಂಬುದೇ ಗೊತ್ತಿಲ್ಲ. ಚಾಣಕ್ಯರು ನೀಡಿರುವ ಈ ಕೆಲವೊಂದು ಸಲಹೆಗಳನ್ನು ಪಾಲಿಸುವ ಮೂಲಕ ಖಂಡಿತವಾಗಿಯೂ ಆಫೀಸ್ ಪಾಲಿಟಿಕ್ಸ್ ಕಿರಿಕಿರಿಯಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳಬಹುದು.
ಆಫೀಸ್ ಪಾಲಿಟಿಕ್ಸ್ ಕಿರಿಕಿರಿಯನ್ನು ಸಮರ್ಥವಾಗಿ ಎದುರಿಸುವುದು ಹೇಗೆ?
ಹೆಚ್ಚು ಮಾತನಾಡುವುದನ್ನು ತಪ್ಪಿಸಿ: ಆಚಾರ್ಯ ಚಾಣಕ್ಯರ ಪ್ರಕಾರ, ನೀವು ಕಚೇರಿ ರಾಜಕೀಯವನ್ನು ತಪ್ಪಿಸಲು ಬಯಸಿದರೆ, ನೀವು ಅಗತ್ಯವಿರುವಷ್ಟು ಮಾತ್ರ ಮಾತನಾಡಬೇಕು. ಅಗತ್ಯಕ್ಕಿಂತ ಹೆಚ್ಚು ಮಾತನಾಡುವುದು ಮುಂದೊಂದು ದಿನ ನಿಮಗೆ ಹಾನಿಕಾರಕವಾಗಿ ಪರಿಣಾಮಿಸಬಹುದು. ಮತ್ತು ಮಾತನಾಡುತ್ತಾ ನಿಮ್ಮ ಎಲ್ಲಾ ವಿಚಾರಗಳನ್ನು ಯಾರೊಂದಿಗೂ ಹಂಚಿಕೊಳ್ಳುವ ತಪ್ಪನ್ನು ಮಾಡಬೇಡಿ. ಮಾತುಕತೆ ಯಾವಾಗಲೂ ಹಿತಮಿತವಾಗಿರಲಿ.
ಎಲ್ಲರನ್ನೂ ನಂಬಬೇಡಿ: ಕಚೇರಿಯಲ್ಲಿ, ನಿಮ್ಮ ಸ್ನೇಹಿತರು ಯಾರು ಮತ್ತು ನಿಮ್ಮ ಶತ್ರುಗಳು ಯಾರು ಎಂಬುದನ್ನು ಅರ್ಥಮಾಡಿಕೊಳ್ಳುವುದೇ ಕಷ್ಟ. ನಮ್ಮ ಜೊತೆ ಒಳ್ಳೆಯವರಂತೆ ಇದ್ದುಕೊಂಡೇ ನಮ್ಮ ಬೆನ್ನಿಗೆ ಚೂರಿ ಹಾಕುವವರು ಅನೇಕರಿದ್ದಾರೆ. ಆದ್ದರಿಂದ, ಎಲ್ಲರನ್ನೂ ನಂಬಬೇಡಿ.
ಇದನ್ನೂ ಓದಿ: ಜೀವನದಲ್ಲಿ ವೇಗವಾಗಿ ಪ್ರಗತಿ ಸಾಧಿಸಲು ಚಾಣಕ್ಯರ ಸಲಹೆಗಳನ್ನು ಪಾಲಿಸಿ
ಕೆಲಸದ ಮೇಲೆ ಗಮನಹರಿಸಿ: ಆಫೀಸ್ ಒಳ ರಾಜಕೀಯ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಉತ್ತಮ ಮಾರ್ಗವೆಂದರೆ ಇತರ ಸಹದ್ಯೋಗಿಗಳು ನಡೆಸುವ ಗಾಸಿಪ್ಗಳಲ್ಲಿ ಭಾಗಿಯಾಗದೆ ನಿಮ್ಮ ಕೆಲಸದ ಮೇಲೆ ಗಮನವನ್ನು ಕೇಂದ್ರೀಕರಿಸುವುದು. ಈ ಒಂದು ಗುಣ ನಿಮ್ಮ ಯಶಸ್ಸಿಗೂ ತುಂಬಾನೇ ಮುಖ್ಯ. ಗಾಸಿಪ್ಗಳಿಗೆ ತಲೆ ಹಾಕುವುದು ಬಿಟ್ಟು ನಿಮ್ಮ ಕೆಲಸದ ಮೇಲಷ್ಟೇ ಗಮನ ವಹಿಸಿ.
ಶಾಂತವಾಗಿರಲು ಕಲಿಯಿರಿ: ಕಚೇರಿಯಲ್ಲಿ ಎಲ್ಲದಕ್ಕೂ ಪ್ರತಿಕ್ರಿಯಿಸುವುದು ಅನಿವಾರ್ಯವಲ್ಲ ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ನೀವು ಶಾಂತವಾಗಿದ್ದಷ್ಟೂ ನಿಮ್ಮ ಆಲೋಚನೆ ಮತ್ತು ತಿಳುವಳಿಕೆ ಬಲವಾಗಿರುತ್ತದೆ. ಕೆಲಸದಲ್ಲಿ ವೃತ್ತಿಪರ ನಡವಳಿಕೆಯನ್ನು ಕಾಪಾಡಿಕೊಳ್ಳಿ. ಇದು ನಿಮ್ಮ ಪ್ರಗತಿಗೂ ತುಂಬಾನೇ ಮುಖ್ಯ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 8:09 pm, Sat, 18 April 26