ಮಂಡ್ಯ, ಏಪ್ರಿಲ್ 22: ಪ್ರೀತಿಸಿ ಮದುವೆಯಾದ ಪತಿಯನ್ನೇ ಬಿಟ್ಟು ಆತನ ಸ್ನೇಹಿತನೊಂದಿಗೆ ಮಹಿಳೆ ಪರಾರಿಯಾದ ಘಟನೆ ಜಿಲ್ಲೆಯ ಬನ್ನಂಗಾಡಿ ಗ್ರಾಮದಲ್ಲಿ ನಡೆದಿದೆ. ಮದುವೆಯಾದ ಎರಡೇ ವರ್ಷಕ್ಕೆ ರಕ್ಷಿತಾ ಈ ಕೃತ್ಯ ಎಸಗಿದ್ದು, ದೇವಸ್ಥಾನದಲ್ಲಿ ಇಂದ್ರನ ಜೊತೆ ಮದುವೆಯಾಗಿ ಆ ಫೋಟೋಗಳನ್ನು ತನ್ನ ಸ್ಟೇಟಸ್ನಲ್ಲಿ ಹಂಚಿಕೊಂಡಿದ್ದಾಳೆ. ಇದರಿಂದ ವಿಷಯ ತಿಳಿದ ಸಾಗರ್ ತೀವ್ರ ಆಘಾತಕ್ಕೊಳಗಾಗಿದ್ದಾರೆ. ಈ ಬಗ್ಗೆ ಮಾತನಾಡಿದ ಸಾಗರ್, ತನ್ನ ಪತ್ನಿ ಬರುವಳೆಂಬ ನಿರೀಕ್ಷೆಯಲ್ಲಿ ಸಾಗರ್ 4 ಲಕ್ಷ ರೂಪಾಯಿ ಖರ್ಚು ಮಾಡಿ ಮನೆ ಸಿದ್ಧಪಡಿಸಿದ್ದೆ. ಆದರೆ, ರಕ್ಷಿತಾ 22 ಗ್ರಾಂ ಚಿನ್ನ ಮತ್ತು 1 ಲಕ್ಷ ರೂಪಾಯಿ ನಗದಿನೊಂದಿಗೆ ಇಂದ್ರನ ಜೊತೆ ಓಡಿ ಹೋಗಿದ್ದಾಳೆ ಎಂದಿದ್ದಾನೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ