ನಟ ಚೇತನ್ ಅಹಿಂಸ, ಡಾ ರಾಜ್ಕುಮಾರ್ (Dr Rajkumar) ಅವರ ಸಮಾಧಿ ಕುರಿತು ಮಾಡಿದ್ದ ಟೀಕೆಗೆ ಭಾರಿ ಆಕ್ರೋಶ ಎದುರಾಗಿತ್ತು. ನಿನ್ನೆ ಹಲವು ಕನ್ನಡಪರ ಸಂಘಟನೆಗಳು ಚೇತನ್ ಮನೆಗೆ ಮುತ್ತಿಗೆ ಹಾಕಿದ್ದವು. ಈ ವೇಳೆ ನಟ ಚೇತನ್ ಅಹಿಂಸ ಅವರು, ಕರವೇ ಅಧ್ಯಕ್ಷ ಶಿವರಾಮೇಗೌಡ ಎದುರು ಬಹಿರಂಗವಾಗಿ ಕ್ಷಮೆ ಕೇಳಿದ್ದರು. ಆದರೆ ಇಂದು (ಏಪ್ರಿಲ್ 26) ಮತ್ತೆ ತಮ್ಮ ಮಾತಿಗೆ ಉಲ್ಟಾ ಹೊಡೆದಿದ್ದು, ರಾಜ್ಕುಮಾರ್ ಸಮಾಧಿ ಕುರಿತು ತಾವು ಆಡಿರುವ ಮಾತಿಗೆ ಬದ್ಧ ಎಂದಿದ್ದಾರೆ. ಅಲ್ಲದೆ, ನಿನ್ನೆ ತಮ್ಮಿಂದ ಒತ್ತಾಯಪೂರ್ವಕ ಕ್ಷಮಾಪಣೆ ಕೇಳಿಸಲಾಗಿದೆ’ ಎಂದಿದ್ದಾರೆ. ಚೇತನ್ ಅವರ ಈ ಇಬ್ಬಂದಿತನವನ್ನು ಕಟು ಪದಗಳಲ್ಲಿ ಸಾರಾ ಗೋವಿಂದು ಟೀಕೆ ಮಾಡಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ