LSG vs KKR: ಸುಲಭವಾಗಿ ಗೆಲ್ಲುವ ಪಂದ್ಯವನ್ನು ಸೂಪರ್ ಓವರ್​ನಲ್ಲಿ ಸೋತ ಲಕ್ನೋ

LSG vs KKR: ಸುಲಭವಾಗಿ ಗೆಲ್ಲುವ ಪಂದ್ಯವನ್ನು ಸೂಪರ್ ಓವರ್​ನಲ್ಲಿ ಸೋತ ಲಕ್ನೋ

ಐಪಿಎಲ್ 2026 ಟೂರ್ನಮೆಂಟ್‌ನ 38 ನೇ ಪಂದ್ಯ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ನಡೆಯಿತು. ಈ ಆವೃತ್ತಿಯ ಐಪಿಎಲ್‌ನಲ್ಲಿ ಮೊದಲ ಸೂಪರ್​ ಓವರ್​​ಗೆ ಸಾಕ್ಷಿಯಾದ ಈ ಪಂದ್ಯವನ್ನು ಗೆದ್ದುಕೊಳ್ಳುವಲ್ಲಿ ಕೆಕೆಆರ್ ತಂಡ ಯಶಸ್ವಿಯಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಕೆಕೆಆರ್ 155 ರನ್​ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಲಕ್ನೋ ಕೂಡ ವೇಗಿ ಮೊಹಮ್ಮದ್ ಶಮಿ 20ನೇ ಓವರ್​ನ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಪಂದ್ಯವನ್ನು ಟೈನಲ್ಲಿ ಅಂತ್ಯಗೊಳಿಸಿದರು. ಹೀಗಾಗಿ ಪಂದ್ಯ ಸೂಪರ್​ ಓವರ್​ಗೆ ಹೋಯಿತು. ಇಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ ಕೇವಲ 1 ರನ್ ಕಲೆಹಾಕಿ ಕೆಕೆಆರ್ ಗೆಲುವಿನ 2 ರನ್ ಗುರಿ ನೀಡಿತು. ಈ ಗುರಿಯನ್ನು ಕೆಕೆಆರ್ ತಂಡ ಸುಲಭವಾಗಿ ಬೆನ್ನಟ್ಟಿತು.

Source link

Leave a Reply

Your email address will not be published. Required fields are marked *