ಐಪಿಎಲ್ 2026 ಟೂರ್ನಮೆಂಟ್‌ನ 38 ನೇ ಪಂದ್ಯ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ನಡೆಯಿತು. ಈ ಆವೃತ್ತಿಯ ಐಪಿಎಲ್‌ನಲ್ಲಿ ಮೊದಲ ಸೂಪರ್ ಓವರ್ಗೆ ಸಾಕ್ಷಿಯಾದ ಈ ಪಂದ್ಯವನ್ನು ಗೆದ್ದುಕೊಳ್ಳುವಲ್ಲಿ ಕೆಕೆಆರ್ ತಂಡ ಯಶಸ್ವಿಯಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 155 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಲಕ್ನೋ ಕೂಡ ವೇಗಿ ಮೊಹಮ್ಮದ್ ಶಮಿ 20ನೇ ಓವರ್ನ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಪಂದ್ಯವನ್ನು ಟೈನಲ್ಲಿ ಅಂತ್ಯಗೊಳಿಸಿದರು. ಹೀಗಾಗಿ ಪಂದ್ಯ ಸೂಪರ್ ಓವರ್ಗೆ ಹೋಯಿತು. ಇಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಕೇವಲ 1 ರನ್ ಕಲೆಹಾಕಿ ಕೆಕೆಆರ್ ಗೆಲುವಿನ 2 ರನ್ ಗುರಿ ನೀಡಿತು. ಈ ಗುರಿಯನ್ನು ಕೆಕೆಆರ್ ತಂಡ ಸುಲಭವಾಗಿ ಬೆನ್ನಟ್ಟಿತು.
