Headlines

ಮತ ಎಣಿಕೆಗೂ ಮುನ್ನ ಇವಿಎಂ ತೆರೆದ ಆರೋಪ; ಕೊಲ್ಕತ್ತಾದಲ್ಲಿ ಬಿಜೆಪಿ ವಿರುದ್ಧ ಟಿಎಂಸಿ ಪ್ರತಿಭಟನೆ – Kannada News | West Bengal elections BJP and TMC leaders face off as clash erupts outside EVM strong room in Kolkata

ಕೊಲ್ಕತ್ತಾ, ಏಪ್ರಿಲ್ 30: ಪಶ್ಚಿಮ ಬಂಗಾಳದ ಚುನಾವಣೆಯ (West Bengal Elections) ಮತ ಎಣಿಕೆ ಮೇ 4ರಂದು ನಡೆಯಲಿದೆ. ಆದರೆ, ಮತ ಎಣಿಕೆಗೂ ಮುನ್ನ ವಿದ್ಯುನ್ಮಾನ ಮತಯಂತ್ರಗಳನ್ನು ತೆರೆದ ಆರೋಪ ಮಾಡಿರುವ ಟಿಎಂಸಿ ಬಿಜೆಪಿಯವರು ಅಕ್ರಮವಾಗಿ ಇವಿಎಂ ಓಪನ್ ಮಾಡಿದ್ದಾರೆಂದು ಇವಿಎಂಗಳನ್ನು ಇರಿಸಿರುವ ಸ್ಟ್ರಾಂಗ್​ರೂಮ್ ಎದುರು ಪ್ರತಿಭಟನೆ ನಡೆಸಿದ್ದಾರೆ. ಕೊಲ್ಕತ್ತಾದ ಸ್ಟ್ರಾಂಗ್​ರೂಮ್ ಹೊರಗೆ ಟಿಎಂಸಿ ನಾಯಕರ ಪ್ರತಿಭಟನೆ ನಡೆದಿದೆ. ಟಿಎಂಸಿ ನಾಯಕರಾದ ಕುನಾಲ್ ಘೋಷ್, ಶಶಿ ಪಂಜಾ ಪ್ರತಿಭಟನೆ ನಡೆಸಿದ್ದಾರೆ. ಸ್ಟ್ರಾಂಗ್​ರೂಮ್ ಸೀಲ್ ಟ್ಯಾಂಪರಿಂಗ್ ಮಾಡಿದ್ದಾರೆಂದು ಆರೋಪಿಸಿ ಧರಣಿ ನಡೆಸಲಾಗಿದೆ. ಇವಿಎಂಗಳನ್ನು ತೆರೆದಿರುವ ವಿಡಿಯೋ ಕೂಡ ಟಿಎಂಸಿ ಬಿಡುಗಡೆ ಮಾಡಿದೆ. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಟಿಎಂಸಿ ಮುಖ್ಯಸ್ಥೆ ಮತ್ತು ಸಿಎಂ ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸ್ಟ್ರಾಂಗ್​ ಎದುರು ಜಮಾಯಿಸಿರುವ ಬಿಜೆಪಿ, ಟಿಎಂಸಿ ಕಾರ್ಯಕರ್ತರು ಪರಸ್ಪರ ಘೋಷಣೆ ಕೂಗುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *