Headlines

ಪತಿಗೆ ವಿಚ್ಛೇದನ ನೀಡಿದ ಬಾಲಿವುಡ್ ನಟಿ; ಅಧಿಕೃತ ಘೋಷಣೆ – Kannada News | Evelyn Sharma Announces Divorce from Tuhaan Bhindi: YJHD Actress Separates

‘ಯೇ ಜವಾನಿ ಹೇ ದಿವಾನಿ’ ಸಿನಿಮಾದಲ್ಲಿ ನಟಿಸಿ ಜನಪ್ರಿಯತೆ ಪಡೆದವರು ಎವೆಲಿನ್ ಶರ್ಮಾ. ಅವರು ಈಗ ಒಂದು ಶಾಕಿಂಗ್ ಘೋಷಣೆ ಮಾಡಿದ್ದಾರೆ. ಅವರ ಪತಿ ತುಶಾನ್ ಭಿಂಡಿ ತಮ್ಮ ಐದು ವರ್ಷಗಳ ವೈವಾಹಿಕ ಜೀವನಕ್ಕೆ ಅಧಿಕೃತವಾಗಿ ವಿದಾಯ ಹೇಳಿದ್ದಾರೆ. ಕಳೆದ ಕೆಲವು ಸಮಯದಿಂದ ಇವರ ಸಂಬಂಧದ ಬಗ್ಗೆ ಹರಿದಾಡುತ್ತಿದ್ದ ವದಂತಿಗಳಿಗೆ ಈಗ ಸ್ವತಃ ಎವೆಲಿನ್ ಶರ್ಮಾ ಅವರೇ ವಿಚ್ಛೇದನದ ಬಗ್ಗೆ ಮಾಹಿತಿ ನೀಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ತಮ್ಮ ವಿಚ್ಛೇದನದ ಬಗ್ಗೆ ಮಾತನಾಡಿದ ಎವೆಲಿನ್, ಈ ನಿರ್ಧಾರವು ಪರಸ್ಪರ ಸಮ್ಮತಿಯಿಂದ ಕೂಡಿದೆ ಎಂದು ತಿಳಿಸಿದ್ದಾರೆ. ‘ನಾವು ಬೇರೆ ಹಾದಿಯಲ್ಲಿ ಸಾಗಲು ನಿರ್ಧರಿಸಿದ್ದೇವೆ, ಆದರೆ ನಮ್ಮ ಮಕ್ಕಳನ್ನು ಒಟ್ಟಾಗಿ ಬೆಳೆಸುವತ್ತ ನಾವಿಬ್ಬರೂ ಗಮನಹರಿಸಿದ್ದೇವೆ’ ಎಂದು ಅವರು ಹೇಳಿದ್ದಾರೆ. ಈ ಹೊಸ ಅಧ್ಯಾಯವನ್ನು ಆಜೀವ ಗೆಳೆತನ ಮತ್ತು ಪೋಷಕರ ಜವಾಬ್ದಾರಿಯ ಮೇಲೆ ನಿರ್ಮಿಸುತ್ತಿದ್ದೇವೆ ಎಂದು ತಿಳಿಸಿದ ಅವರು, ತಮ್ಮ ಖಾಸಗಿತನವನ್ನು ಗೌರವಿಸಬೇಕೆಂದು ಮನವಿ ಮಾಡಿದ್ದಾರೆ.

2012ರಲ್ಲಿ ‘ಫ್ರಮ್ ಸಿಡ್ನಿ ವಿತ್ ಲವ್’ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಎವೆಲಿನ್, ‘ಯೇ ಜವಾನಿ ಹೈ ದೀವಾನಿ’ ಚಿತ್ರದ ಮೂಲಕ ಹೆಚ್ಚು ಜನಪ್ರಿಯತೆ ಗಳಿಸಿದರು.
ಬಾಲಿವುಡ್ ಮಾತ್ರವಲ್ಲದೆ ಪಂಜಾಬಿ, ಇಂಗ್ಲಿಷ್ ಮತ್ತು ತೆಲುಗು ಸಿನಿಮಾಗಳಲ್ಲೂ ಅವರು ಅಭಿನಯಿಸಿದ್ದಾರೆ 2019ರಲ್ಲಿ ತೆರೆಕಂಡ ‘ಸಾಹೋ’ ಚಿತ್ರದ ನಂತರ ಅವರು ಸಿನಿಮಾ ರಂಗದಿಂದ ಕೊಂಚ ದೂರ ಉಳಿದಿದ್ದಾರೆ.

ಇದನ್ನೂ ಓದಿ: ನಟಿಸುವಾಗ ಇಂಥದ್ದೇ ಮಾತಿಗೆ ಅಳಬೇಕು ಎಂದರೆ ಹಾಗೆಯೇ ಮಾಡುತ್ತಾರೆ ರಣಬೀರ್

2019ರಲ್ಲಿ ಈ ಜೋಡಿ ಪರಸ್ಪರ ನಿಶ್ಚಿತಾರ್ಥ ಮಾಡಿಕೊಂಡಿತ್ತು ಮತ್ತು 2021ರಲ್ಲಿ ವಿವಾಹ ಆಗಿತ್ತು. ಇವರಿಗೆ ಒಬ್ಬ ಮಗ ಮತ್ತು ಒಬ್ಬಳು ಮಗಳಿದ್ದು, ಪ್ರಸ್ತುತ ಎವೆಲಿನ್ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನೆಲೆಸಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಅವರು ತಮ್ಮ ಮಕ್ಕಳ ಅಪ್‌ಡೇಟ್‌ಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *