Headlines

ಕುಜನ ಸಂಯೋಗ ಮತ್ತು ಸಂಚಾರದಿಂದ ಆಗಲಿದೆ ಈ ಎಲ್ಲ ಬದಲಾವಣೆ.. – Kannada News | Kuja Conjunction and Dasha: Major Astrological Changes, Effects and Solutions

ಜ್ಯೋತಿಷ್ಯ ಶಾಸ್ತ್ರದಲ್ಲಿ ಮಂಗಳನು ಅಗ್ನಿತತ್ವದ ಗ್ರಹನಾಗಿದ್ದಾನೆ. ಆದರೆ ಮೀನವು ಜಲತತ್ವದ ರಾಶಿ‌ ಬೆಂಕಿ ಮತ್ತು ನೀರು ಒಂದೇ ಕಡೆ ಇದ್ದಾಗ ಏನಾಗಬಹುದು. ಇದೇ ವ್ಯಕ್ತಿಯ ಜೀವನದಲ್ಲಿ ಅತೀವವಾದ ಆಂತರಿಕ ಶಕ್ತಿ ಮತ್ತು ಭಾವನಾತ್ಮಕ ವೇಗವನ್ನು ಸೂಚಿಸುತ್ತದೆ.

​ಸ್ವ-ದ್ರೆಕ್ಕಾಣ ಮತ್ತು ತ್ರಿಂಶಾಂಶದಲ್ಲಿ ಮಂಗಳನು ತನ್ನದೇ ದ್ರೆಕ್ಕಾಣ ಮತ್ತು ತ್ರಿಂಶಾಂಶದಲ್ಲಿ ಇರುವುದು ಆತನಿಗೆ ಸ್ವಕ್ಷೇತ್ರದ ಬಲವನ್ನು ನೀಡುತ್ತದೆ. ಇದು ವ್ಯಕ್ತಿಗೆ ಅದ್ಭುತವಾದ ಧೈರ್ಯ, ತಾಂತ್ರಿಕ ಜ್ಞಾನ ಮತ್ತು ಎಂತಹ ಕಠಿಣ ಸವಾಲನ್ನೂ ಎದುರಿಸುವ ಛಲವನ್ನು ನೀಡುತ್ತದೆ.

​ರವಿ ಸ್ಥಾನ :

ಸೂರ್ಯನ ಹೋರೆಯಲ್ಲಿ ಮಂಗಳನಿರುವುದು ಆಡಳಿತಾತ್ಮಕ ಶಕ್ತಿ ಮತ್ತು ನಾಯಕತ್ವದ ಗುಣಗಳನ್ನು ಹೆಚ್ಚಿಸುತ್ತದೆ. ​ಶನಿ ನವಾಂಶ ಮತ್ತು ದ್ವಾದಶಾಂಶದಲ್ಲಿ ಮಂಗಳನ ಮೇಲೆ ಶನಿಯ ಪ್ರಭಾವವಿದೆ. ಇದು ಅಗ್ನಿ-ಮಾರುತ ಯೋಗದಂತೆ ಕೆಲಸ ಮಾಡುತ್ತದೆ. ಮಂಗಳನ ವೇಗಕ್ಕೆ ಶನಿಯು ಶಿಸ್ತು ಮತ್ತು ನಿಧಾನಗತಿಯನ್ನು ನೀಡುತ್ತಾನೆ. ಇದರಿಂದ ಕೆಲಸಗಳು ತಡವಾದರೂ, ಅವುಗಳಲ್ಲಿ ಸ್ಥಿರತೆ ಇರುತ್ತದೆ.

ಕುಜ ದಶೆಯ ಫಲ :

​ಈ ದಶೆ ನಡೆಯುತ್ತಿರುವವರಿಗೆ ಜೀವನದಲ್ಲಿ ಈ ಕೆಳಗಿನ ಬದಲಾವಣೆಗಳು ಕಂಡುಬರುತ್ತವೆ. ​ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ತಾಂತ್ರಿಕ ಕ್ಷೇತ್ರ, ರಕ್ಷಣೆ, ಭೂಮಿ ವ್ಯವಹಾರ ಅಥವಾ ವೈದ್ಯಕೀಯ ಕ್ಷೇತ್ರದಲ್ಲಿ ಇರುವವರಿಗೆ ಈ ಕಾಲವು ಅತ್ಯಂತ ಶುಭದಾಯಕ. ಶನಿಯ ಪ್ರಭಾವ ಇರುವುದರಿಂದ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಖಂಡಿತ ಸಿಗುತ್ತದೆ. ​ಆರ್ಥಿಕ ಸ್ಥಿತಿಯಲ್ಲಿ ಹಠಾತ್ ಧನಲಾಭಕ್ಕಿಂತ ಹೆಚ್ಚಾಗಿ, ವ್ಯವಸ್ಥಿತವಾದ ಹೂಡಿಕೆಯಿಂದ ಲಾಭವಾಗಲಿದೆ. ಆಸ್ತಿ ಖರೀದಿ ಅಥವಾ ಮನೆ ಕಟ್ಟುವ ಯೋಗ ಬಲವಾಗಿದೆ. ಮನಸ್ಸು ಸ್ವಲ್ಪ ಚಂಚಲವಾಗಬಹುದು. ಆಧ್ಯಾತ್ಮಿಕತೆಯ ಕಡೆಗೆ ಒಲವು ಹೆಚ್ಚುತ್ತದೆ.

ಇದನ್ನೂ ಓದಿ: ಗ್ರಹಗಳ ನಾಯಕ ಸೂರ್ಯ…. ಅವನ ಅನುಗ್ರಹದಿಂದ ಆಗಲಿದೆ ಯಾವೆಲ್ಲ ಕಾರ್ಯ..

​ರಾಶಿಗಳ ಶುಭ ಮತ್ತು ಅಶುಭ ಫಲ :

ಅತ್ಯಂತ ಶುಭ ಕಟಕ, ವೃಶ್ಚಿಕ, ಮೀನ ಈ ರಾಶಿಗಳಿಗೆ ಮಂಗಳನು ಯೋಗಕಾರಕ. ಭಾಗ್ಯೋದಯ, ಶತ್ರು ಜಯ ಮತ್ತು ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ಮಧ್ಯಮ ಮೇಷ, ಸಿಂಹ, ಧನು ಸಾಹಸ ಪ್ರವೃತ್ತಿ ಹೆಚ್ಚುತ್ತದೆ. ಆದರೆ ಕೋಪದ ಮೇಲೆ ನಿಯಂತ್ರಣವಿರಲಿ. ಹಣಕಾಸಿನ ಹರಿವು ಉತ್ತಮವಾಗಿರುತ್ತದೆ. ಎಚ್ಚರಿಕೆ ಅಗತ್ಯ ಮಿಥುನ, ಕನ್ಯಾ, ಕುಂಭ ಮಾನಸಿಕ ಒತ್ತಡ, ವೃತ್ತಿಯಲ್ಲಿ ಅಡೆತಡೆಗಳು ಅಥವಾ ಸಂಗಾತಿಯೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಬರಬಹುದು. ತಾಳ್ಮೆ ಇರಲಿ.

​ಮಂಗಳ ಮತ್ತು ಶನಿಯ ಮಿಶ್ರ ಪ್ರಭಾವವಿರುವುದರಿಂದ, ಈ ದಶೆಯನ್ನು ಸುಗಮಗೊಳಿಸಲು ಮಂಗಳವಾರದಂದು ಆಂಜನೇಯ ಸ್ವಾಮಿಯ ಆರಾಧನೆ ಮಾಡುವುದು ಅತ್ಯುತ್ತಮ. ಇದು ಮಂಗಳನ ಉಗ್ರತೆಯನ್ನು ಕಡಿಮೆ ಮಾಡಿ, ಶನಿಯ ಶಿಸ್ತನ್ನು ನೀಡುತ್ತದೆ.

– ಲೋಹಿತ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:22 pm, Tue, 5 May 26

Source link

Leave a Reply

Your email address will not be published. Required fields are marked *