Headlines

ಕರ್ನಾಟಕದಲ್ಲಿ ಮದ್ಯದ ಕಿಕ್: 13 ವರ್ಷದ ದಾಖಲೆ ಉಡೀಸ್‌, ಸರ್ಕಾರಕ್ಕೆ ಬಂದ ಆದಾಯ ಎಷ್ಟು ಗೊತ್ತಾ? – Kannada News | Karnataka Liquor Sales Surge: April Breaks 13 Year Record, Revenue Hits Rs 3,688 Crore

ಬೆಂಗಳೂರು, (ಮೇ 07): ಕರ್ನಾಟಕದಲ್ಲಿ (Karnataka) ಏಪ್ರಿಲ್ ತಿಂಗಳ ಮದ್ಯ ಮಾರಾಟದಲ್ಲಿ (Liquor Sales) ರಾಜ್ಯ ಅಬಕಾರಿ ಇಲಾಖೆ ಹೊಸ ಇತಿಹಾಸ ಬರೆದಿದೆ. ಕಳೆದ ತಿಂಗಳ ವ್ಯಾಪಾರದಿಂದ ಬರೋಬ್ಬರಿ ರಾಜ್ಯ ಸರ್ಕಾರಕ್ಕೆ ಮೂರು ಸಾವಿರ ಕೋಟಿ ಆದಾಯ ಬಂದಿದೆ. ಈ ಮೂಲಕ ಅಬಕಾರಿ ಇಲಾಖೆಯ ಕಳೆದ 13 ವರ್ಷಗಳ ಇತಿಹಾಸದಲ್ಲೇ ತಿಂಗಳೊಂದರಲ್ಲಿ ಇಷ್ಟೊಂದು ಭಾರಿ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿರುವುದು ಇದೇ ಮೊದಲು. ವಿಸ್ಕಿ, ಬ್ರಾಂಡಿ, ರಮ್, ಜಿನ್ ಸೇರಿ ಏಪ್ರಿಲ್‌ನಲ್ಲಿ ದಾಖಲೆಯ 68.17 ಲಕ್ಷ ಬಾಕ್ಸ್ ಮಾರಾಟವಾಗಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ 3688 ಸಾವಿರ ಕೋಟಿ ರುಪಾಯಿ ಆದಾಯ ಹರಿದುಬಂದಿದೆ. ತಿಂಗಳೊಂದರಲ್ಲಿ ಇಷ್ಟೊಂದು ಭಾರೀ ಪ್ರಮಾಣದಲ್ಲಿ ಮದ್ಯ ಮಾರಾಟ ಆಗಿರುವುದು ಐತಿಹಾಸಿಕ ದಾಖಲೆಯಾಗಿದೆ.

ಏಪ್ರಿಲ್​ನಲ್ಲಿ ಎಷ್ಟು ಮದ್ಯ ಮಾರಾಟ?

ವಿಸ್ಕಿ, ಬ್ರಾಂಡಿ, ರಮ್‌, ಜಿನ್‌ ಸೇರಿದಂತೆ 68.17 ಲಕ್ಷ ಬಾಕ್ಸ್‌ (ಒಂದು ಬಾಕ್ಸ್‌ಗೆ 8.64 ಲೀಟರ್‌) ದಾಖಲೆಯ ಐಎಂಎಲ್‌ ಮದ್ಯ ಮಾರಾಟವಾಗಿದೆ. ಮತ್ತೊಂದೆಡೆ, 50.39 ಲಕ್ಷ ಬಾಕ್ಸ್‌ (ಒಂದು ಬಾಕ್ಸ್‌ಗೆ 7.80 ಲೀಟರ್‌) ಬಿಯರ್‌ ಮಾರಾಟವಾಗಿದೆ. ಇದರೊಂದಿಗೆ ಒಟ್ಟು 118.56 ಲಕ್ಷ ಬಾಕ್ಸ್‌ ಮದ್ಯ ಮಾರಾಟವಾಗಿದ್ದು 2013ರಿಂದ ಈಚೆಗೆ ಕಳೆದ 13 ವರ್ಷದಲ್ಲಿ ಯಾವ ತಿಂಗಳಿನಲ್ಲೂ ಈ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿಲ್ಲ ಎಂಬುದು ವಿಶೇಷ.

ಇದನ್ನೂ ಓದಿ: ಕರ್ನಾಟಕದಲ್ಲಿ ಮದ್ಯ ಮಾರಾಟ ಭಾರಿ ಕುಸಿತ: 7 ತಿಂಗಳಾದ್ರೂ ಕಿಕ್‌ ಕೊಡದ ಎಣ್ಣೆ, ಕಾರಣವೇನು?

13 ವರ್ಷದ ದಾಖಲೆ ಉಡೀಸ್‌

2013ರಿಂದ ಈಚೆಗೆ ಕಳೆದ 13 ವರ್ಷದಲ್ಲಿ ಯಾವ ತಿಂಗಳಿನಲ್ಲೂ ಈ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿಲ್ಲ. 2025 ಏಪ್ರಿಲ್‌ನಲ್ಲಿ 57.44 ಲಕ್ಷ ಬಾಕ್ಸ್ ಐಎಂಎಲ್ ಮದ್ಯ ಮಾರಾಟವಾಗಿದ್ದು, ಕಳೆದ ವರ್ಷದ ದಾಖಲೆಯಾಗಿತ್ತು. ಪ್ರಸಕ್ತ ಸಾಲಿನ ಏಪ್ರಿಲ್‌ ನಲ್ಲಿ 68.17 ಲಕ್ಷ ಬಾಕ್ಸ್ ಮಾರಾಟವಾಗಿದೆ. ಇನ್ನು ಬಿಯರ್ ವಿಷಯಕ್ಕೆ ಬರುವುದಾದರೆ, 2025 ಏಪ್ರಿಲ್ ನಲ್ಲಿ 41.60 ಲಕ್ಷ ಬಾಕ್ಸ್ ಮಾರಾಟವಾಗಿತ್ತು. ಪ್ರಸಕ್ತ ಏಪ್ರಿಲ್ ನಲ್ಲಿ 50.39 ಲಕ್ಷ ಬಾಕ್ಸ್ ಮಾರಾಟವಾಗಿದ್ದು, ಪ್ರಸಕ್ತ ಏಪ್ರಿಲ್‌ನಲ್ಲಿ ಶೇ.21.13 ಬೆಳವಣಿಗೆಯಾಗಿದೆ. ಈ ಮೂಲಕ 13 ವರ್ಷದ ದಾಖಲೆ ಉಡೀಸ್‌ ಮಾಡಿದೆ.

3688 ಕೋಟಿ ರೂ.ಆದಾಯ ಸಂಗ್ರಹ

2023 ಜುಲೈನಲ್ಲಿ 66.22 ಲಕ್ಷ ಬಾಕ್ಸ್‌ ಐಎಂಎಲ್‌ ಮದ್ಯ ಮಾರಾಟವಾಗಿದ್ದೇ ಕಳೆದ 13 ವರ್ಷಗಳಲ್ಲಿನ ದಾಖಲೆಯಾಗಿತ್ತು. ಈ ದಾಖಲೆಯನ್ನು ಏಪ್ರಿಲ್‌ನ ಮದ್ಯ ಮಾರಾಟ ಹಿಂದಿಕ್ಕಿದೆ. 2025 ಏಪ್ರಿಲ್‌ನಲ್ಲಿ ಮದ್ಯ ಮರಾಟದಿಂದ ಒಟ್ಟಾರೆ 2904 ಕೋಟಿ ರೂಪಾಯಿ ರಾಜಸ್ವ ಸಂಗ್ರಹವಾಗಿತ್ತು. ಪ್ರಸಕ್ತ ಏಪ್ರಿಲ್‌ನಲ್ಲಿ 3688 ಕೋಟಿ ರೂಪಾಯಿ ರಾಜಸ್ವ ಸಂಗ್ರಹವಾಗಿವಾಗಿದೆ.

ದಾಖಲೆ ಮಟ್ಟದ ಮದ್ಯ ಮಾರಾಟಕ್ಕೆ ಕಾರಣವೇನು?

ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಕೇರಳ ಮತ್ತು ತಮಿಳುನಾಡು ವಿಧಾನ ಸಭೆಗೆ ಏಪ್ರಿಲ್‌ನಲ್ಲಿ ನಡೆದ ಚುವಾವಣೆಯು ರಾಜ್ಯದಲ್ಲಿ ಮದ್ಯ ಮಾರಾಟ ಹೆಚ್ಚಳವಾಗಿರಬಹುದು ಎನ್ನಲಾಗಿದೆ. ಮತದಾನಕ್ಕೂ ಮುನ್ನ ಈ ರಾಜ್ಯಗಳಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿತ್ತು. ಆದ್ದರಿಂದ ಕೇರಳ, ತಮಿಳುನಾಡಿಗೆ ಹೊಂದಿಕೊಂಡ ರಾಜ್ಯದ ಗಡಿ ಭಾಗಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿದೆ. ಅಷ್ಟೇ ಅಲ್ಲದೇ ರಾಜ್ಯದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನ ಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯೂ ಮದ್ಯ ಮಾರಾಟ ಹೆಚ್ಚಳವಾಗಲು ಕಾರಣವಾಗಿರಬಹುದು ಎನ್ನಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *