Headlines

‘ಪೆದ್ದಿ’ ಚಿತ್ರವನ್ನು ವಿದೇಶದಲ್ಲಿ ಹಂಚಿಕೆ ಮಾಡಲಿದೆ ಕನ್ನಡದ ನಿರ್ಮಾಣ ಸಂಸ್ಥೆ – Kannada News | Hombale Films Global Expansion: Distributes Ram Charan’s ‘Peddi’ Overseas

ಕನ್ನಡ ಚಿತ್ರರಂಗದ ಕೀರ್ತಿಪತಾಕೆಯನ್ನು ವಿಶ್ವದಾದ್ಯಂತ ಹಾರಿಸಿದ ಖ್ಯಾತಿ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಗೆ ಇದೆ. ಈ ನಿರ್ಮಾಣ ಸಂಸ್ಥೆ ಇತ್ತೀಚೆಗೆ ಮಹತ್ವದ ಮೈಲಿಗಲ್ಲು ಸ್ಥಾಪಿಸಲು ಸಜ್ಜಾಗಿರೋ ವಿಷಯ ರಿವೀಲ್ ಆಗಿತ್ತು. ವಿದೇಶದಲ್ಲಿ ಸಿನಿಮಾ ಹಂಚಿಕೆ ಮಾಡಲು ಹೊಂಬಾಳೆ ಮುಂದಾಗಿತ್ತು. ಈಗ ರಾಮ್ ಚರಣ್ ನಟನೆಯ’ಪೆದ್ದಿ’ ಚಿತ್ರವನ್ನು ಹೊಂಬಾಳೆ ವಿದೇಶದಲ್ಲಿ ಹಂಚಿಕೆ ಮಾಡುತ್ತಿದೆ. ವಿದೇಶಿ ನೆಲದಲ್ಲಿ ಈ ಸಂಸ್ಥೆಯ ಮೊದಲ ಡಿಸ್ಟ್ರಿಬ್ಯೂಷನ್ ಇದಾಗಿದೆ.

ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲ್ಮ್ಸ್ ಕನ್ನಡ ಚಿತ್ರರಂಗವನ್ನು ಮತ್ತೊಂದು ಹಂತಕ್ಕೆ ಕರೆದುಕೊಂಡು ಹೋದ ಸಂಸ್ಥೆ.‘ಕೆಜಿಎಫ್’ ಹಾಗೂ ‘ಕಾಂತಾರ’ ಫ್ರಾಂಚೈಸಿ ಮೂಲಕ ಸಿನಿಮಾ ಮಾಡಿ ಸ್ಯಾಂಡಲ್​​ವುಡ್ ತಾಕತ್ತನ್ನು ಜಗತ್ತಿಗೆ ತೋರಿಸಿಕೊಟ್ಟಿತು. ಕರಾವಳಿಯ ಮಣ್ಣಿನ ಸೊಗಡಿನ ಕತೆಯನ್ನು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುವಂತೆ ಮಾಡಿತು. ಈಗ ‘ಪೆದ್ದಿ’ ಸಿನಿಮಾ ಮೂಲಕ ಮತ್ತೊಂದು ಹೊಸ ಅಧ್ಯಾಯ ಬರೆಯಲು ಅಣಿಯಾಗಿದೆ.

ರಾಮ್ ಚರಣ್ ನಟನೆಯ, ಬುಚ್ಚಿ ಬಾಬು ಸಾನಾ ನಿರ್ದೇಶನದ ‘ಪೆದ್ದಿ’ ಚಿತ್ರದ ಓವರ್‌ಸೀಸ್ ಹಂಚಿಕೆಯ ಜವಾಬ್ದಾರಿಯನ್ನು ಹೊಂಬಾಳೆ ಹೊತ್ತುಕೊಂಡಿದೆ. ಇದನ್ನು ಈ ಸಂಸ್ಥೆ ಹೇಗೆ ನಿಭಾಯಿಸುತ್ತದೆ ಎಂಬ ಕುತೂಹಲ ಮೂಡಿದೆ. ಆಸ್ಕರ್ ವಿಜೇತ ಎ.ಆರ್. ರೆಹಮಾನ್ ಅವರ ಸಂಗೀತ ಈ ಚಿತ್ರಕ್ಕಿರುವುದು ವಿಶೇಷ.

ಇದನ್ನೂ ಓದಿ: ಜೂ.4ಕ್ಕೆ ‘ಪೆದ್ದಿ’ ರಿಲೀಸ್; ‘ಟಾಕ್ಸಿಕ್’ ಬಿಟ್ಟುಕೊಟ್ಟ ದಿನಾಂಕದಲ್ಲಿ ರಾಮ್ ಚರಣ್ ಸಿನಿಮಾ ತೆರೆಗೆ

ರಾಮ್ ಚರಣ್ ಅವರ ಮಾಸ್ ಲುಕ್ ಮತ್ತು ಬುಚ್ಚಿ ಬಾಬು ಅವರ ರಾ ಆ್ಯಕ್ಷನ್ ಕಥೆಯ ಮೇಲಿರುವ ನಿರೀಕ್ಷೆಗಳು ಹೆಚ್ಚಿಸಿದೆ. ಕನ್ನಡದ ಶಿವರಾಜ್​​ಕುಮಾರ್ ಪಾತ್ರ ಕೂಡ ಗಮನ ಸೆಳೆಯುವ ನಿರೀಕ್ಷೆ ಇದೆ. ‘ಪೆದ್ದಿ’ ಸಿನಿಮಾ ಜೂನ್ 4ರಂದು ವಿಶ್ವದಾದ್ಯಂತ ತೆರೆಕಾಣಲಿದೆ. ಹೊಂಬಾಳೆ ಫಿಲ್ಮ್ಸ್ ವಿದೇಶಗಳಲ್ಲಿ ಈ ಚಿತ್ರವನ್ನು ಅತ್ಯಂತ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡಲು ಪ್ಲಾನ್ ಮಾಡಿದೆ. ಈ ಹಂಚಿಕೆ ಯಶಸ್ಸು ಕಂಡರೆ ನಿರ್ಮಾಣ ಸಂಸ್ಥೆಯನ್ನು ಹುಡುಕಿಕೊಂಡು ಮತ್ತಷ್ಟು ಬಿಗ್ ಬಜೆಟ್ ಸಿನಿಮಾಗಳು ಬರಲಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *