Headlines

Video: ಟೀಚರ್ ಬಳಿ ಅಮ್ಮನ ಬಗ್ಗೆ ಕಂಪ್ಲೇಂಟ್ ಮಾಡಿದ ಪುಟಾಣಿ, ಕಾರಣ ಇದೇ ನೋಡಿ – Kannada News | A little boy cried in front of his teacher and complained about his mother.

ಪುಟಾಣಿ ಮಕ್ಕಳು (little kids) ಪ್ರಾರಂಭದ ದಿನಗಳಲ್ಲಿ ಶಾಲೆಗೆ ಹೋಗಲ್ಲ ಎಂದು ಹಠ ಹಿಡಿಯುವುದಿದೆ. ಕೆಲವೊಮ್ಮೆ ಟೀಚರ್ ಹೋಮ್ ವರ್ಕ್ ಮಾಡಿಸ್ತಾರೆ, ಹೊಡೀತಾರೆ ಹೀಗೆ ನಾನಾ ನೆಪಗಳನ್ನು ಹೇಳಿ ಶಾಲೆಗೆ ಹೋಗುವುದರಿಂದ ತಪ್ಪಿಸಿಕೊಳ್ಳುವುದಿದೆ. ಒಮ್ಮೆ ಸ್ಕೂಲ್ ಮೆಟ್ಟಿಲೇರಿದರೆ ಸಾಕು, ಈ ಮಕ್ಕಳಿಗೆ ಟೀಚರ್ ಫೇವರೆಟ್‌ ಆಗಿ ಬಿಡುತ್ತಾರೆ. ಆದರೆ ಪ್ರಿ ಸ್ಕೂಲ್‌ಗೆ ಹೋಗುವ ಪುಟಾಣಿಯೂ ಶಿಕ್ಷಕಿ ಮುಂದೆ ಅಳುತ್ತಾ ಅಮ್ಮ ನನಗೆ ಹೊಡೆದರು ಎಂದು ಕಂಪ್ಲೇಂಟ್‌ ಮಾಡಿದೆ. ಪುಟಾಣಿಯ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಮ್ಮ ಬಾಲ್ಯದ ದಿನವನ್ನು ಮೆಲುಕು ಹಾಕಿಕೊಂಡಿದ್ದಾರೆ.

Vijetha womanpreneur ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಪುಟಾಣಿ ತಾಯಿ ವಿರುದ್ಧ ಟೀಚರ್ ಬಳಿ ದೂರು ಹೇಳುವುದನ್ನು ಕಾಣಬಹುದು. ಟೀಚರ್ ಬಳಿ ಮೂರುವರೇ ವರ್ಷದ ಪುಟಾಣಿಯೂ ತನ್ನ ಕೈಗೆ ಅಮ್ಮ ಹೊಡೆದ್ರು ಬಿಕ್ಕಿ ಬಿಕ್ಕಿ ಅಳುತ್ತಾ ಹೇಳಿದೆ. ಹೀಗೆನ್ನುತ್ತಿದ್ದಂತೆ ಟೇಚರ್‌ ಕೈ ಹಿಡಿದು ನೋಡುತ್ತಾ ಪುಟಾಣಿಯನ್ನು ಸಮಾಧಾನ ಪಡಿಸಿದ್ದಾರೆ. ನಿನ್ನ ಅಮ್ಮನಿಗೆ ಒಂದೇಟು ಹೊಡೆಯುವ ಎಂದು ಟೀಚರ್ ಹೇಳುತ್ತಿದ್ದಂತೆ ಪುಟಾಣಿ ಆಯ್ತು ಎನ್ನುತ್ತಾ ತಲೆ ಅಲ್ಲಾಡಿಸಿದೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಮುಗ್ಧ ಮನಸ್ಸುಗಳ ಶುದ್ಧ ಸಂಭಾಷಣೆ; ಕರುವಿನ ಜತೆಗೆ ಮಾತಿಗಿಳಿದ ಪುಟಾಣಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಅಮ್ಮನ ಮೇಲೆ ಕೇಸ್ ಹಾಕುವ, ನಾನು ಮಗುವಿನ ಲಾಯರ್ ಎಂದು ಹೇಳಿದ್ದಾರೆ. ಇನ್ನೊಬ್ಬರು, ಪಾಪ ಅನಿಸುತ್ತೆ, ನನ್ನ ಕಣ್ಣೇ ಒಂದು ಕ್ಷಣ ಒದ್ದೆ ಆಯ್ತು ಎಂದಿದ್ದಾರೆ. ಮತ್ತೊಬ್ಬರು, ನಾವು ಶಾಲೆಗೆ ಹೋಗುವಾಗ ಯಾಕೆ ಇಂತಹ ಟೀಚರ್ ಇರಲಿಲ್ಲ ಎಂದು ಕಾಮೆಂಟ್ ನಲ್ಲಿ ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *