Headlines

ಬಿಳಿ ಶರ್ಟು ಪಂಚೆ ತೊಟ್ಟು ಕಾಣಿಸಿಕೊಂಡ ರಕ್ಷಿತ್ ಶೆಟ್ಟಿ, ವಿಶೇಷತೆಯೇನು? – Kannada News | Rakshit Shetty seen wearing traditional dress here is the detail

ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ (Rakshit Shetty) ಕುರಿತು ಕೆಲ ದಿನಗಳ ಹಿಂದೆ ಟ್ರೋಲ್​ ಒಂದು ಹರಿದಾಡುತ್ತಿತ್ತು, ‘ರಕ್ಷಿತ್ ಕಳೆದ ಹೋಗಿದ್ದಾರೆ ಹುಡುಕಿ ಕೊಡಿ’ ಎಂದು ಕೆಲವರು ಪೋಸ್ಟ್​​ಗಳನ್ನು ಹಂಚಿಕೊಂಡಿದ್ದರು. ರಕ್ಷಿತ್ ಸಹ ‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾದ ಬಳಿಕ ಬಹುತೇಕ ಕಾಣೆ ಆಗಿದ್ದರು. ಹೊರಗೆಲ್ಲೂ ಕಾಣಿಸಿಕೊಂಡಿರಲಿಲ್ಲ. ‘ರಿಚರ್ಡ್ ಆಂಟೊನಿ’ ಸಿನಿಮಾದ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದು ಬಿಟ್ಟರೆ ಇನ್ನೇನೂ ಅಪ್​​ಡೇಟ್ ನೀಡಿರಲಿಲ್ಲ. ಇದೀಗ ರಕ್ಷಿತ್ ಶೆಟ್ಟಿ ಹಠಾತ್ತನೆ ಕಾಣಿಸಿಕೊಂಡಿದ್ದಾರೆ. ಅದೂ ಪಂಚೆ ಮತ್ತು ಶರ್ಟು ಧರಿಸಿ.

ರಕ್ಷಿತ್ ಶೆಟ್ಟಿ ಅವರು ಕುಟುಂಬದೊಟ್ಟಿಗೆ ಇರುವ ಕೆಲ ಚಿತ್ರಗಳು ವೈರಲ್ ಆಗಿವೆ. ಚಿತ್ರಗಳಲ್ಲಿ ನಟ ರಕ್ಷಿತ್ ಶೆಟ್ಟಿ ಅವರು ಬಿಳಿ ಶರ್ಟು, ಪಂಚೆ ತೊಟ್ಟು ಮದುಮಗನ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಗಳು ನೋಡಿದವರು ರಕ್ಷಿತ್ ಶೆಟ್ಟಿ ನಿಶ್ಚಿತಾರ್ಥ ಮಾಡಿಕೊಂಡರೇ? ರಕ್ಷಿತ್ ಶೆಟ್ಟಿಯ ನಿಶ್ಚಿತಾರ್ಥದ ಚಿತ್ರಗಳು ಇವು ಇರಬಹುದೇ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ ನಿಜ ಕತೆ ಬೇರೆಯೇ ಇದೆ.

ರಕ್ಷಿತ್ ಶೆಟ್ಟಿ ಶರ್ಟು, ಪಂಚೆ ತೊಟ್ಟು ಸಾರ್ವಜನಿಕವಾಗಿ ಕಾಣಿಸಿಕೊಂಡಿರುವುದು ಅವರ ಪೋಷಕರ ಕಾರಣಕ್ಕೆ. ರಕ್ಷಿತ್ ಶೆಟ್ಟಿಯ ಪೋಷಕರ 50ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗಿದ್ದು ದೇವಾಲಯದಲ್ಲಿ ವಿಶೇಷ ಪೂಜೆ, ಹೋಮ-ಹವನಗಳನ್ನು ಮಾಡಲಾಗಿದೆ. ಆಪ್ತ ಸಂಬಂಧಿಗಳು, ಸ್ನೇಹಿತರನ್ನು ಸಹ ಕಾರ್ಯಕ್ರಮಕ್ಕೆ ಕರೆಯಲಾಗಿತ್ತು. ಈ ವೇಳೆ ನಟ ರಕ್ಷಿತ್ ಶೆಟ್ಟಿ ಸಹ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದು, ಹೋಮ-ಹವನಗಳಲ್ಲಿ ಭಾಗಿ ಆಗಿದ್ದರು. ಅದೇ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಇದನ್ನೂ ಓದಿ:‘ಉಳಿದವರು ಕಂಡಂತೆ’ಗೆ 12 ವರ್ಷ, ರಕ್ಷಿತ್ ಶೆಟ್ಟಿ ನೆನಪು ಮಾಡಿಕೊಂಡಿದ್ದಕ್ಕೆ ಕಾರಣ ಇದೆ

ರಕ್ಷಿತ್ ಶೆಟ್ಟಿ ‘ಸಪ್ತ ಸಾಗರದಾಚೆ ಎಲ್ಲೋ’ ಸೈಡ್ ಬಿ ಸಿನಿಮಾದ ಬಳಿಕ ಇನ್ಯಾವುದೇ ಸಿನಿಮಾನಲ್ಲಿ ನಟಿಸಿಲ್ಲ. ಬಹು ವರ್ಷಗಳಿಂದ ಕತೆ ತಿದ್ದುತಿದ್ದ ‘ರಿಚರ್ಟ್ ಆಂಟೊನಿ’ ಸಿನಿಮಾದ ಚಿತ್ರೀಕರಣವನ್ನು ಶೀಘ್ರವೇ ಪ್ರಾರಂಭ ಮಾಡುವುದಾಗಿ ಹೇಳಿದ್ದಾರೆ. ಅದರ ಜೊತೆಗೆ ‘ಪುಣ್ಯಕೋಟಿ’ ಹಾಗೂ ಇನ್ನೂ ಒಂದು ಸಿನಿಮಾದ ಚಿತ್ರಕತೆಯನ್ನೂ ಸಹ ರೆಡಿ ಮಾಡಿಕೊಂಡಿರುವುದಾಗಿ ರಕ್ಷಿತ್ ಶೆಟ್ಟಿ ಹೇಳಿದ್ದಾರೆ. ‘ರಿಚರ್ಡ್ ಆಂಟೊನಿ’ ಸಿನಿಮಾದ ಚಿತ್ರೀಕರಣವನ್ನು ಸದ್ದಿಲ್ಲದೆ ಶುರು ಮಾಡಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *