Headlines

IND vs ENG: 2ನೇ ಟಿ20 ಗೆದ್ದರೆ ಟೀಂ ಇಂಡಿಯಾಗೆ ಸರಣಿ; ಪಂದ್ಯ ಎಷ್ಟು ಗಂಟೆಗೆ ಆರಂಭ?

ಮೂರು ಪಂದ್ಯಗಳ ಟಿ20 ಸರಣಿ ಹಾಗೂ ಏಕೈಕ ಟೆಸ್ಟ್ ಪಂದ್ಯಕ್ಕಾಗಿ ಇಂಗ್ಲೆಂಡ್‌ ಪ್ರವಾಸ ಮಾಡಿರುವ ಭಾರತ ವನಿತಾ ಪಡೆ ಟಿ20 ಸರಣಿಯಲ್ಲಿ  (India vs England T20 series)  ಗೆಲುವಿನ ಶುಭಾರಂಭ ಮಾಡಿದೆ. ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ಮಹಿಳಾ ತಂಡ 38 ರನ್​ಗಳ ಭರ್ಜರಿ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ 189 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಆತಿಥೇಯ ಇಂಗ್ಲೆಂಡ್ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 150 ರನ್ ಗಳಿಸಲಿಷ್ಟೇ ಶಕ್ತವಾಯಿತು. ಈ ಮೂಲಕ ಟೀಂ ಇಂಡಿಯಾ ಪಂದ್ಯವನ್ನು ಗೆದ್ದುಕೊಂಡಿತು. ಇದರೊಂದಿಗೆ ಟೀಮ್ ಇಂಡಿಯಾ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಇದೀಗ ಭಾರತ ವನಿತಾ ಪಡೆ ಎರಡನೇ ಪಂದ್ಯವನ್ನು ಗೆದ್ದು ಸರಣಿಯನ್ನು ಕೈವಶ ಮಾಡಿಕೊಳ್ಳುವ ಇರಾದೆಯಲ್ಲಿದೆ.

ಇಂಗ್ಲೆಂಡ್ ಮತ್ತು ಭಾರತ ಮಹಿಳಾ ತಂಡದ ನಡುವಿನ 2ನೇ ಟಿ20 ಪಂದ್ಯ ಯಾವಾಗ ನಡೆಯಲಿದೆ?

ಇಂಗ್ಲೆಂಡ್ ಮತ್ತು ಭಾರತ ಮಹಿಳಾ ತಂಡದ ನಡುವಿನ 2ನೇ ಟಿ20 ಪಂದ್ಯ ಮೇ 30 ರ ಶನಿವಾರ ನಡೆಯಲಿದೆ.

ಇಂಗ್ಲೆಂಡ್ ಮತ್ತು ಭಾರತ ಮಹಿಳಾ ತಂಡದ ನಡುವಿನ 2ನೇ ಟಿ20 ಪಂದ್ಯ ಎಲ್ಲಿ ನಡೆಯಲಿದೆ?

ಇಂಗ್ಲೆಂಡ್ ಮತ್ತು ಭಾರತ ಮಹಿಳಾ ತಂಡದ ನಡುವಿನ 2ನೇ ಟಿ20 ಪಂದ್ಯ ಬ್ರಿಸ್ಟಲ್‌ನ ಕೌಂಟಿ ಮೈದಾನದಲ್ಲಿ ನಡೆಯಲಿದೆ.

ಇಂಗ್ಲೆಂಡ್ ಮತ್ತು ಭಾರತ ಮಹಿಳಾ ತಂಡದ ನಡುವಿನ 2ನೇ ಟಿ20 ಪಂದ್ಯ ಎಷ್ಟು ಗಂಟೆಗೆ ಪ್ರಾರಂಭವಾಗುತ್ತದೆ?

ಇಂಗ್ಲೆಂಡ್ ಮತ್ತು ಭಾರತ ಮಹಿಳಾ ತಂಡದ ನಡುವಿನ 2ನೇ ಟಿ20 ಪಂದ್ಯ ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಪ್ರಾರಂಭವಾಗಲಿದೆ. ಟಾಸ್ ಸಂಜೆ 6:30 ಕ್ಕೆ ನಡೆಯಲಿದೆ.

ಇಂಗ್ಲೆಂಡ್ ಮತ್ತು ಭಾರತ ಮಹಿಳಾ ತಂಡದ ನಡುವಿನ 2ನೇ ಟಿ20 ಪಂದ್ಯವನ್ನು ಎಲ್ಲಿ ವೀಕ್ಷಿಸಬಹುದು?

ಇಂಗ್ಲೆಂಡ್ ಮತ್ತು ಭಾರತ ಮಹಿಳಾ ತಂಡದ ನಡುವಿನ 2ನೇ ಟಿ20 ಪಂದ್ಯವನ್ನು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ಟಿವಿಯಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.

ವಿದೇಶದಲ್ಲಿ ನಡೆಯುವ ಟಿ20 ಲೀಗ್​ನಲ್ಲಿ ತಂಡ ಖರೀದಿಸಿದ ರಾಹುಲ್ ದ್ರಾವಿಡ್

ಉಭಯ ತಂಡಗಳು

ಭಾರತ ಮಹಿಳಾ ಕ್ರಿಕೆಟ್ ತಂಡ: ಹರ್ಮನ್ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ಭಾರತಿ ಫುಲ್ಮಾಲಿ, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್ ಕೀಪರ್), ಶ್ರೀ ಚರಣಿ, ಯಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ನಂದನಿ ಶರ್ಮಾ, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್, ಕ್ರಾಂತಿ ಗೌಡ್, ಶ್ರೇಯಾಂಕ ಪಾಟೀಲ್, ರಾಧಾ ಯಾದವ್.

ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡ: ಎಮ್ ಅರ್ಲಾಟ್, ಟ್ಯಾಮಿ ಬ್ಯೂಮಾಂಟ್, ಲಾರೆನ್ ಬೆಲ್, ಆಲಿಸ್ ಕ್ಯಾಪ್ಸೆ, ಚಾರ್ಲಿ ಡೀನ್, ಸೋಫಿಯಾ ಡಂಕ್ಲೆ, ಸೋಫಿ ಎಕ್ಲೆಸ್ಟೋನ್, ಲಾರೆನ್ ಫೈಲರ್, ಆಮಿ ಜೋನ್ಸ್, ನ್ಯಾಟ್ ಸಿವರ್-ಬ್ರಂಟ್, ಪೈಗೆ ಸ್ಕೋಲ್ಫೀಲ್ಡ್, ಲಿನ್ಸೆ ಸ್ಮಿತ್, ಡ್ಯಾನಿ ವ್ಯಾಟ್-ಹಾಡ್ಜ್, ಇಸ್ಸಿ ವಾಂಗ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *