Headlines

ಜೂನ್ 1ರಿಂದ ರೈಲ್ವೆ ವೈಟಿಂಗ್ ಲಿಸ್ಟ್ ನಿಯಮಗಳಲ್ಲಿ ಬದಲಾವಣೆ; ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಳ; ನಿಯಮ ಉಲ್ಲಂಘನೆಗೆ ಭಾರಿ ದಂಡ

ರೈಲ್ವೆ ನಿಲ್ದಾಣದ ಚಿತ್ರImage Credit source: PTI

ನವದೆಹಲಿ, ಜೂನ್ 1: ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ರೈಲುಗಳಲ್ಲಿ ಹೆಚ್ಚುತ್ತಿರುವ ಭಾರಿ ಜನಸಂದಣಿಯನ್ನು ನಿಯಂತ್ರಿಸಲು ಭಾರತೀಯ ರೈಲ್ವೆ ಇಲಾಖೆಯು (Indian Railways) ಇಂದಿನಿಂದ (ಜೂನ್ 1, 2026) ಟಿಕೆಟ್ ಬುಕಿಂಗ್ ಮತ್ತು ಪ್ರಯಾಣದ ನಿಯಮಗಳಲ್ಲಿ ಅತ್ಯಂತ ಪ್ರಮುಖ ಬದಲಾವಣೆಗಳನ್ನು ಜಾರಿಗೆ ತಂದಿದೆ. ಈ ಹೊಸ ನಿಯಮಗಳು ಕನ್ಫರ್ಮ್ ಟಿಕೆಟ್ ಸಿಗುವ ಸಾಧ್ಯತೆಯನ್ನು ಹೆಚ್ಚಿಸಲಿವೆ. ಈ ನಿಯಮಗಳ ಪೈಕಿ ವೈಟಿಂಗ್ ಲಿಸ್ಟ್ ಟಿಕೆಟ್​ಗಳ ಸಂಖ್ಯೆಗೆ ಮಿತಿ ಹಾಕುವುದೂ ಒಂದು. ಇತರ ನಿಯಮಗಳು ಯಾವುವು, ಮತ್ತು ಪ್ರಯಾಣಿಕರು ಯಾವ ವಿಷಯಗಳ ಬಗ್ಗೆ ಎಚ್ಚರದಿಂದಿರಬೇಕು ಎಂಬ ಸಂಪೂರ್ಣ ವಿವರ ಇಲ್ಲಿದೆ.

ವೈಟಿಂಗ್ ಲಿಸ್ಟ್ ಟಿಕೆಟ್‌ಗಳ ಸಂಖ್ಯೆಗೆ ಮಿತಿ

ಇನ್ಮುಂದೆ ರೈಲುಗಳಲ್ಲಿ ಇಷ್ಟಬಂದಷ್ಟು ವೈಟಿಂಗ್ ಲಿಸ್ಟ್ (Waiting List) ಟಿಕೆಟ್‌ಗಳನ್ನು ಬುಕ್ ಮಾಡಲು ಅವಕಾಶ ಇರುವುದಿಲ್ಲ. ರೈಲ್ವೆ ಇಲಾಖೆಯು ಸೀಟುಗಳ ಆಧಾರದ ಮೇಲೆ ವೈಟಿಂಗ್ ಟಿಕೆಟ್‌ಗಳ ಸಂಖ್ಯೆಗೆ ಕಠಿಣ ಮಿತಿ (ಕ್ಯಾಪಿಂಗ್) ವಿಧಿಸಿದೆ.

  • ಸ್ಲೀಪರ್ ಕ್ಲಾಸ್ (Sleeper Class): ಒಟ್ಟು ಸೀಟುಗಳ ಸಾಮರ್ಥ್ಯದ ಕೇವಲ 30% ರಷ್ಟು ಮಾತ್ರ ವೈಟಿಂಗ್ ಟಿಕೆಟ್‌ಗಳನ್ನು ನೀಡಲಾಗುತ್ತದೆ. ಅಂದರೆ ಸರಾಸರಿ 150 ರಿಂದ 200 ಕ್ಕಿಂತ ಹೆಚ್ಚು ವೈಟಿಂಗ್ ಟಿಕೆಟ್‌ಗಳು ಜನರೇಟ್ ಆಗುವುದಿಲ್ಲ.
  • ಎಸಿ ಕ್ಲಾಸ್ (AC Coaches): ಎಸಿ ಕೋಚ್‌ಗಳಲ್ಲೂ ಸಹ ಒಟ್ಟು ಸೀಟುಗಳ ಗರಿಷ್ಠ 60% ರಷ್ಟು ಮಾತ್ರ ವೈಟಿಂಗ್ ಟಿಕೆಟ್‌ಗಳನ್ನು ಸೀಮಿತಗೊಳಿಸಲಾಗಿದೆ.

ವೈಟಿಂಗ್ ಲಿಸ್ಟ್ ಚಿಕ್ಕದಾಗಿರುವುದರಿಂದ, ನೀವು ಟಿಕೆಟ್ ಬುಕ್ ಮಾಡಿದಾಗ ಅದು ಕನ್ಫರ್ಮ್ (Confirmed) ಆಗುವ ಅಥವಾ ಆರ್‌ಎಸಿ (RAC) ಆಗುವ ಸಾಧ್ಯತೆಗಳು ಮೊದಲಿಗಿಂತ 2 ರಿಂದ 3 ಪಟ್ಟು ಹೆಚ್ಚಾಗಲಿವೆ.

ಇದನ್ನೂ ಓದಿ: ಹಾರ್ಮುಜ್ ಬಿಕ್ಕಟ್ಟಿನ ಎಫೆಕ್ಟ್: ತೈಲದ ಗರಿಷ್ಠ ಬಳಕೆ ಸೇರಿದಂತೆ ಹೊಸ ಪ್ರವೃತ್ತಿಯಲ್ಲಿ ಭಾರತೀಯ ಆಯಿಲ್ ರಿಫೈನರಿಗಳು

ಸ್ಲೀಪರ್ ಮತ್ತು ಎಸಿ ಕೋಚ್‌ಗಳಲ್ಲಿ ವೈಟಿಂಗ್ ಟಿಕೆಟ್ ಪ್ರಯಾಣ ಬ್ಯಾನ್

ಹೊಸ ನಿಯಮದ ಪ್ರಕಾರ, ಜೂನ್ 1 ರಿಂದ ವಿಂಡೋ ಟಿಕೆಟ್ ಆಗಿರಲಿ ಅಥವಾ ಇ-ಟಿಕೆಟ್ ಆಗಿರಲಿ, ವೈಟಿಂಗ್ ಲಿಸ್ಟ್ ಟಿಕೆಟ್ ಹೊಂದಿರುವ ಪ್ರಯಾಣಿಕರು ಸ್ಲೀಪರ್ ಅಥವಾ ಎಸಿ ಕೋಚ್‌ಗಳಲ್ಲಿ ಪ್ರಯಾಣಿಸುವಂತಿಲ್ಲ. ಸಾಮಾನ್ಯವಾಗಿ ಕನ್ಫರ್ಮ್ ಟಿಕೆಟ್ ಇಲ್ಲದಿದ್ದರೂ ವೈಟಿಂಗ್ ಟಿಕೆಟ್ ಹಿಡಿದು ಸ್ಲೀಪರ್ ಮತ್ತು ಎಸಿ ಕೋಚ್‌ಗಳನ್ನು ಹತ್ತಿ ಕನ್ಫರ್ಮ್ ಸೀಟುಗಳಿರುವ ಪ್ರಯಾಣಿಕರಿಗೆ ತೊಂದರೆ ಕೊಡುತ್ತಿದ್ದ ಅಭ್ಯಾಸಕ್ಕೆ ಬ್ರೇಕ್ ಹಾಕಲು ರೈಲ್ವೆ ಈ ಕಠಿಣ ನಿರ್ಧಾರ ಕೈಗೊಂಡಿದೆ. ವೈಟಿಂಗ್ ಟಿಕೆಟ್ ಇರುವವರು ಕೇವಲ ‘ಜನರಲ್ ಕೋಚ್’ (General Coach) ಗಳಲ್ಲಿ ಮಾತ್ರ ಪ್ರಯಾಣಿಸಬೇಕಾಗುತ್ತದೆ.

ನಿಯಮ ಉಲ್ಲಂಘಿಸಿದರೆ ಭಾರೀ ಮೊತ್ತದ ದಂಡ; ಟಿಟಿಇಗೆ (TTE) ಹೆಚ್ಚು ಅಧಿಕಾರ

ಒಂದು ವೇಳೆ ನೀವು ವೈಟಿಂಗ್ ಟಿಕೆಟ್ ಇಟ್ಟುಕೊಂಡು ಸ್ಲೀಪರ್ ಅಥವಾ ಎಸಿ ಕೋಚ್ ಹತ್ತಿ ಸಿಕ್ಕಿಬಿದ್ದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ:

  • ಸ್ಲೀಪರ್ ಕೋಚ್‌ನಲ್ಲಿ ಸಿಕ್ಕಿಬಿದ್ದರೆ: ಕನಿಷ್ಠ ₹250 ದಂಡ ವಿಧಿಸಿ, ತಕ್ಷಣವೇ ಜನರಲ್ ಬೋಗಿಗೆ ಕಳುಹಿಸಲಾಗುತ್ತದೆ.
  • ಎಸಿ ಕೋಚ್‌ಗಳಲ್ಲಿ ಸಿಕ್ಕಿಬಿದ್ದರೆ: ಕನಿಷ್ಠ ₹440 ವರೆಗೆ ದಂಡ ಮತ್ತು ಸಂಪೂರ್ಣ ಪ್ರಯಾಣದ ದರವನ್ನು ವಸೂಲಿ ಮಾಡಲಾಗುತ್ತದೆ.
  • ರೈಲಿನಿಂದ ಕೆಳಗಿಳಿಸುವ ಅಧಿಕಾರ: ಟಿಟಿಇಗೆ ದಂಡ ವಿಧಿಸುವುದಷ್ಟೇ ಅಲ್ಲದೆ, ಮುಂದಿನ ನಿಲ್ದಾಣದಲ್ಲೇ ನಿಮ್ಮನ್ನು ರೈಲಿನಿಂದ ಕೆಳಗಿಳಿಸುವ ಪೂರ್ಣ ಅಧಿಕಾರವನ್ನು ನೀಡಲಾಗಿದೆ.

ಇದನ್ನೂ ಓದಿ: ಕೋಲ್ಕತಾದಲ್ಲಿ ಅಮುಲ್​ನಿಂದ ವಿಶ್ವದ ಅತಿದೊಡ್ಡ ಮೊಸರು ಘಟಕ; ಕರ್ನಾಟಕದಲ್ಲಿ ನಂದಿನಿ ಎದುರು ಸಿಗದ ಗೆಲುವು ಅಮುಲ್​ಗೆ ಬಂಗಾಳದಲ್ಲಿ ಸಿಗುತ್ತಾ?

ಬದಲಾದ ಈ ನಿಯಮಗಳಿಂದಾಗಿ ಮುಂಬರುವ ದಿನಗಳಲ್ಲಿ ಕನ್ಫರ್ಮ್ ಟಿಕೆಟ್ ಪಡೆದ ಪ್ರಯಾಣಿಕರ ಪ್ರಯಾಣ ಹೆಚ್ಚು ಸುಖಕರ ಮತ್ತು ಸುರಕ್ಷಿತವಾಗಲಿದ್ದು, ಕೊನೆಯ ಕ್ಷಣದ ಗೊಂದಲಗಳು ಹಾಗೂ ಕೋಚ್‌ಗಳ ಒಳಗಿನ ಅತಿಯಾದ ನೂಕುನುಗ್ಗಲು ಗಣನೀಯವಾಗಿ ಕಡಿಮೆಯಾಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *