ದೆಹಲಿ ಬೆಂಕಿ ದುರಂತ; ಹೋಟೆಲ್ ಮಾಲೀಕ ಬಂಧನ, ನ್ಯಾಯಾಂಗ ತನಿಖೆಗೆ ಆದೇಶ – Kannada News

ನವದೆಹಲಿ, ಜೂನ್ 3: ದೆಹಲಿಯ ಮಾಳವೀಯ ನಗರದಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ (Fire Accident) 21 ಜನರು ಸಾವನ್ನಪ್ಪಿದ ನಂತರ ಲೆಫ್ಟಿನೆಂಟ್ ಗವರ್ನರ್ ಇಂದು ತುರ್ತು ಸಭೆ ಕರೆದಿದ್ದರು. ಈ ವೇಳೆ ಅವರು ದೆಹಲಿಯಲ್ಲಿ ಒಂದು ತಿಂಗಳ ವಿಶೇಷ ಅಗ್ನಿ ಸುರಕ್ಷತಾ ಅಭಿಯಾನವನ್ನು ನಡೆಸಲು ಆದೇಶಿಸಿದ್ದಾರೆ. ಇದರಲ್ಲಿ ಎಲ್ಲಾ ಹೋಟೆಲ್‌ಗಳು, ಅತಿಥಿ ಗೃಹಗಳು ಮತ್ತು ಸೂಕ್ಷ್ಮ ಕಟ್ಟಡಗಳ ತಪಾಸಣೆ ಸೇರಿದೆ. ಈ ಬೆಂಕಿ ದುರಂತದ ಬಗ್ಗೆ ನ್ಯಾಯಾಂಗ ತನಿಖೆಗೂ ಆದೇಶಿಸಲಾಗಿದೆ. ಪರಾರಿಯಾಗಿದ್ದ ಹೋಟೆಲ್ ಮಾಲೀಕರನ್ನು ಕೂಡ ಬಂಧಿಸಲಾಗಿದೆ.

ದೆಹಲಿ ಲೆಫ್ಟಿನೆಂಟ್ ಗವರ್ನರ್ ತರಂಜಿತ್ ಸಿಂಗ್ ಸಂಧು ಅವರು ದೆಹಲಿ ಸರ್ಕಾರ ಮತ್ತು ಸಂಬಂಧಿತ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ತುರ್ತು ಪರಿಶೀಲನಾ ಸಭೆ ನಡೆಸಿದರು. ಈ ಸಭೆಯಲ್ಲಿ, ಅಗ್ನಿಶಾಮಕ ನಿಯಮಗಳನ್ನು ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ಸೀಲಿಂಗ್‌ನಂತಹ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದರು. ದೆಹಲಿಯ ಬೆಂಕಿ ದುರಂತದ ನಂತರ, ದೆಹಲಿ ಗೃಹ ಸಚಿವ ಆಶಿಶ್ ಸೂದ್ ಅವರೊಂದಿಗೆ ಲೆಫ್ಟಿನೆಂಟ್ ಗವರ್ನರ್ ತರಣ್‌ಜಿತ್ ಸಿಂಗ್ ಸಂಧು ಈ ತುರ್ತು ಪರಿಶೀಲನಾ ಸಭೆಯನ್ನು ನಡೆಸಿದರು. ಇದರಲ್ಲಿ ಅಗ್ನಿಶಾಮಕ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆದೇಶಿಸಲಾಗಿದೆ.

ಇದನ್ನೂ ಓದಿ: ದೆಹಲಿಯ ಬೆಂಕಿ ದುರಂತದಲ್ಲಿ ಬಾಂಗ್ಲಾ, ಅಫ್ಘಾನ್, ಆಫ್ರಿಕಾದ ಪ್ರವಾಸಿಗರೂ ಸಾವು; ಹೋಟೆಲ್ ಮಾಲೀಕ ಪರಾರಿ

ಹೋಟೆಲ್ ಮಾಲೀಕ ಬಂಧನ:

ದುರಂತ ಸಂಭವಿಸಿ ಎಫ್‌ಐಆರ್ (FIR) ದಾಖಲಾಗುತ್ತಿದ್ದಂತೆ ಹೋಟೆಲ್ ಮಾಲೀಕ ಲವಕೇಶ್ ಬಜಾಜ್ ತಲೆಮರೆಸಿಕೊಂಡಿದ್ದರು. ಅವರು ದೇಶ ಬಿಟ್ಟು ಓಡಿಹೋಗದಂತೆ ಪೊಲೀಸರು ಲುಕೌಟ್ ನೋಟಿಸ್ ಜಾರಿ ಮಾಡಿದ್ದರು. ತೀವ್ರ ಶೋಧದ ಬಳಿಕ ಕೊನೆಗೂ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

5 ಅಂತಸ್ತಿನ ಈ ಬೆಡ್ ಆ್ಯಂಡ್ ಬ್ರೇಕ್‌ಫಾಸ್ಟ್ (B&B) ಕಟ್ಟಡದಲ್ಲಿ ಯಾವುದೇ ಅಗ್ನಿಶಾಮಕ ಮುನ್ನೆಚ್ಚರಿಕಾ ಕ್ರಮಗಳು ಅಥವಾ ಕಡ್ಡಾಯ ಸುರಕ್ಷತಾ ಪರವಾನಗಿಗಳು ಇರಲಿಲ್ಲ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಸಾಬೀತಾಗಿದೆ. ನಿರ್ಲಕ್ಷ್ಯದ ಮೂಲಕ ಸಾವು ಉಂಟುಮಾಡಿದ ಗಂಭೀರ ಸೆಕ್ಷನ್‌ಗಳ ಅಡಿಯಲ್ಲಿ ಆತನ ವಿರುದ್ಧ ಕೇಸ್ ದಾಖಲಿಸಲಾಗಿದೆ. ಮೃತಪಟ್ಟ 21 ಜನರಲ್ಲಿ 18 ಮಂದಿ ನೈಜೀರಿಯಾ, ಮೊಜಾಂಬಿಕ್, ಬಾಂಗ್ಲಾದೇಶ, ಸೊಮಾಲಿಯಾ, ಲೈಬೀರಿಯಾ ಮತ್ತು ಅಫ್ಘಾನಿಸ್ತಾನದ ಪ್ರಜೆಗಳಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆಯ ವೇಳೆ 10 ಪೊಲೀಸ್ ಸಿಬ್ಬಂದಿಯೂ ಗಾಯಗೊಂಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *