ಬಿಎಂಟಿಸಿ ಪ್ರಯಾಣಿಕರಿಗೆ ಗುಡ್​ನ್ಯೂಸ್​​: ಮೆಟ್ರೋ ಮಾದರಿಯಲ್ಲಿ ಆನ್‌ಲೈನ್ ಟಿಕೆಟ್ ವ್ಯವಸ್ಥೆ ಜಾರಿಗೆ ಪ್ಲ್ಯಾನ್​​ – Kannada News

ಬೆಂಗಳೂರು, ಜೂನ್​​ 05: ಶಕ್ತಿ ಯೋಜನೆಯ ಅಭೂತಪೂರ್ವ ಯಶಸ್ಸಿನ ಬೆನ್ನಲ್ಲೇ ಬಿಎಂಟಿಸಿ ಬಸ್‌ಗಳಲ್ಲಿ ಟಿಕೆಟ್ ಪಡೆಯಲು ಪಡುತ್ತಿರುವ ಪ್ರಯಾಣಿಕರ ಕಷ್ಟಕ್ಕೆ ಮುಕ್ತಿ ಹಾಡಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (BMTC) ನಮ್ಮ ಮೆಟ್ರೋ ಮಾದರಿಯಲ್ಲೇ ಆನ್‌ಲೈನ್ ಕ್ಯೂಆರ್ (QR) ಟಿಕೆಟ್ ಖರೀದಿಸುವ ಹೊಸ ಪ್ಲ್ಯಾನ್​ ಜಾರಿಗೆ ಮುಂದಾಗಿದೆ.​ ಇದಕ್ಕೆ ಪ್ರಯಾಣಿಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಮುಖ್ಯಾಂಶಗಳು

  • ನಮ್ಮ ಮೆಟ್ರೋ ಮಾದರಿಯಲ್ಲೇ ಬಿಎಂಟಿಸಿಯಲ್ಲೂ ಆನ್‌ಲೈನ್ ಟಿಕೆಟ್ ಖರೀದಿಸಲು ಅವಕಾಶ
  • ಬಿಎಂಟಿಸಿ ಬಸ್ ಹತ್ತುವ ಮುನ್ನವೇ ಮೊಬೈಲ್ ಮೂಲಕ ಕ್ಯೂಆರ್ ಟಿಕೆಟ್ ಬುಕಿಂಗ್​​
  • ಕ್ಯಾಶ್‌ಲೆಸ್ ಹಾಗೂ ಟಿಕೆಟ್‌ಲೆಸ್ ಪ್ರಯಾಣದತ್ತ ಹೆಜ್ಜೆ ಇಟ್ಟ ಬಿಎಂಟಿಸಿ

ಮೆಟ್ರೋ ಮಾದರಿಯಲ್ಲಿ ಆನ್ಲೈನ್​​ನಲ್ಲಿ ಟಿಕೆಟ್: ಪ್ರಯಾಣಿಕರು ಸಂತಸ

ಬಿಎಂಟಿಸಿಯಲ್ಲಿ ಪ್ರತಿದಿನ ಸುಮಾರು 40 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಹೆಚ್ಚಿನ ಜನಸಂದಣಿ ಹಿನ್ನೆಲೆ​ ಟಿಕೆಟ್ ಖರೀದಿ ಮಾಡಲು ತುಂಬಾ ಕಷ್ಟ ಆಗುತ್ತದೆ. ಕೆಲವೊಮ್ಮೆ ಟಿಕೆಟ್ ಖರೀದಿಸಲು ಆಗದೆ ಟಿಕೆಟ್ ಚೆಕ್ಕಿಂಗ್ ವೇಳೆ ಸಿಕ್ಕಿಬಿದ್ದು ದಂಡ ಕಟ್ಟಿರುವ ಉದಾಹರಣೆಗಳಿವೆ. ಮತ್ತೊಂದೆಡೆ ಪ್ರಯಾಣಿಕರು ನೀಡಿದ ಹಣವನ್ನು ಕೆಲ ಕಿಲಾಡಿ ಕಂಡಕ್ಟರ್​ಗಳು ತಮ್ಮ ಯುಪಿಐ ಸ್ಕ್ಯಾನರ್​ಗಳಿಗೆ ಹಾಕಿಸಿಕೊಂಡಿರುವುದು ಇದೆ. ಇದಕೆಲ್ಲಾ ಬ್ರೇಕ್ ಹಾಕಲು ಇದೀಗ ಬಿಎಂಟಿಸಿ ಮುಂದಾಗಿದ್ದು, ನಮ್ಮ ಮೆಟ್ರೋ ಮಾದರಿಯಲ್ಲಿ ಇನ್ಮುಂದೆ ಆನ್ಲೈನ್​​ನಲ್ಲಿ ಟಿಕೆಟ್ ಖರೀದಿಸಿ ಬಸ್​​ನಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗುತ್ತಿದೆ. ಈ ಬಗ್ಗೆ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನು ಸಂಪೂರ್ಣ ಕ್ಯಾಶ್ ಲೆಸ್, ಟಿಕೆಟ್ ಲೆಸ್ ಆಗಲು ಬಿಎಂಟಿಸಿ ಮುಂದಾಗಿದ್ದು, ಸದ್ಯದಲ್ಲೇ ಬಿಎಂಟಿಸಿಯಲ್ಲಿ ಈ ವ್ಯವಸ್ಥೆ ಜಾರಿಯಾಗಲಿದೆ. ಈಗಾಗಲೇ ಶೇ 50% ರಷ್ಟು ಪ್ರಯಾಣಿಕರು ಯುಪಿಐ ಪೇಮೆಂಟ್ ಮಾಡುವ ಮೂಲಕ ಪ್ರಯಾಣ ಮಾಡುತ್ತಿದ್ದಾರೆ.

ಇದನ್ನೂ ಓದಿ: ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್: ಅರ್ಜಿ ಸಲ್ಲಿಕೆ ಹೇಗೆ? ಏನೇನು ದಾಖಲೆಗಳು ಬೇಕು? ಇಲ್ಲಿದೆ ವಿವರ

ಸುಮಾರು 20 ಲಕ್ಷದಷ್ಟು ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡುತ್ತಿದ್ದರೆ, ಉಳಿದ ಪುರುಷ ಪ್ರಯಾಣಿಕರು ಹಣವನ್ನು ಕೊಟ್ಟು ಪ್ರಯಾಣ ಮಾಡುತ್ತಿದ್ದಾರೆ. ಈಗಾಗಲೇ ಇದಕ್ಕಾಗಿ 11 ಸಾವಿರ ಇಟಿಎಂ ಮೆಷಿನ್​ಗಳನ್ನು ಖರೀದಿ ಮಾಡಲಾಗಿದೆ. ಇದರ ಜೊತೆಗೆ ಬಿಎಂಟಿಸಿ ಬಸ್​​ನಲ್ಲಿ ಎನ್ಎಂಸಿ ಕಾರ್ಡ್ ಮೂಲಕ ಪ್ರಯಾಣ ಮಾಡಲು ಅವಕಾಶ ನೀಡಲಾಗ್ತಿದೆ. ಅಂದರೆ ಎನ್ಸಿಎಂಸಿ ಕಾರ್ಡ್ ಮೂಲಕ ನಮ್ಮ ಮೆಟ್ರೋ ಮತ್ತು ‌ಬಿಎಂಟಿಸಿ ಬಸ್​ನಲ್ಲೂ ಪ್ರಯಾಣ ಮಾಡುವ ವ್ಯವಸ್ಥೆ ಮಾಡಲು ಮುಂದಾಗಿದ್ದಾರೆ.

ಇದನ್ನೂ ಓದಿ: ವಾಹನ ಸವಾರರಿಗೆ ಗುಡ್‌ನ್ಯೂಸ್: ಟ್ರಾಫಿಕ್ ಫೈನ್ ಪಾವತಿಗೆ ಮತ್ತೆ ಶೇ 50 ವಿನಾಯಿತಿ

ಒಟ್ಟಿನಲ್ಲಿ ಬಿಎಂಟಿಸಿ ಸದ್ಯದಲ್ಲೇ ನಮ್ಮ ಮೆಟ್ರೋ ಮಾದರಿಯ ಟಿಕೆಟ್ ಖರೀದಿ ವ್ಯವಸ್ಥೆಗೆ ಮುಂದಾಗ್ತಿದ್ದು, ಇದಕ್ಕೆ ಪ್ರಯಾಣಿಕರು ಮಾತ್ರ ಫುಲ್ ಖುಷ್ ಆಗ್ತಿರೋದಂತು ಸುಳ್ಳಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *