
ಶಿವರಾಜ್ ಕುಮಾರ್ (Shiva Rajkumar) ಮತ್ತು ಗೀತಾ ಶಿವರಾಜ್ ಕುಮಾರ್ ಅವರು ತಮ್ಮ ಆಪ್ತ ಸೀಕಲ್ ರಾಮಚಂದ್ರ ಅವರ ನಿವಾಸದಲ್ಲಿ ನಡೆದ ಸತ್ಯನಾರಾಯಣ ಸ್ವಾಮಿ ಪೂಜೆಯಲ್ಲಿ ಭಾಗವಹಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆ, ಸೀಕಲ್ ಗ್ರಾಮದಲ್ಲಿರುವ ಸೀಕಲ್ ರಾಮಚಂದ್ರ ಅವರ ನಿವಾಸದಲ್ಲಿ ನಡೆದ ಪೂಜೆಯಲ್ಲಿ ಶಿವಣ್ಣ ಹಾಗೂ ದಂಪತಿ ಭಾಗಿ ಆಗಿದ್ದು, ಈ ವೇಳೆ ಅವರೊಟ್ಟಿಗೆ ನಿರ್ದೇಶಕ ಆರ್ ಚಂದ್ರು ಸಹ ಜೊತೆಗೆ ಇದ್ದರು. ಸೀಕಲ್ ರಾಮಚಂದ್ರ ಅವರು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರಾಗಿದ್ದು, ಶಿವರಾಜ್ ಕುಮಾರ್ ಅವರಿಗೆ ಆಪ್ತರಾಗಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ