Headlines

Video: ಲಂಡನ್​​ನ ಅಪಾರ್ಟ್​ಮೆಂಟ್​​ನ ಕಿಟಕಿಯಿಂದ ಕೆಳಗೆ ಬೀಳುತ್ತಿದ್ದ ಬಾಲಕಿಯನ್ನು ಕಾಪಾಡಿದ ಭಾರತೀಯ ವ್ಯಕ್ತಿ – Kannada News | London Hero: Indian Man Mohammed Jesil Saves Child Falling from Apartment Window

ಬಾಲಕಿಯ ಕಾಪಾಡಿದ ವ್ಯಕ್ತಿImage Credit source: Free Press Journal

ಲಂಡನ್, ಜೂನ್ 14: ಅಪಾರ್ಟ್​ಮೆಂಟ್​ನ ಕಿಟಕಿಯ ಅಂಚಿನಲ್ಲಿ ನೇತಾಡುತ್ತಾ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಮೂರು ವರ್ಷದ ಹೆಣ್ಣು ಮಗು(Baby)ವನ್ನು ಭಾರತೀಯ ವ್ಯಕ್ತಿಯೊಬ್ಬರು ತನ್ನ ಪ್ರಾಣದ ಹಂಗು ತೊರೆದು ರಕ್ಷಿಸಿರುವ ವಿಡಿಯೋ ವೈರಲ್ ಆಗಿದೆ. ಲಂಡನ್‌ನ ಇಲ್ಫೋರ್ಡ್ ಹೈ ಸ್ಟ್ರೀಟ್‌ನ ವಾಣಿಜ್ಯ ಸಂಕೀರ್ಣದಲ್ಲಿರುವ ಫ್ಲಾಟ್‌ನ ಕಿಟಕಿಯಿಂದ ಅದ್ಹೇಗೋ ಬಾಲಕಿ ಹೊರಬಂದಿದ್ದಾಳೆ, ಬಳಿಕ ಕಿಟಕಿ ಚೌಕಟ್ಟನ್ನು ಹಿಡಿದು ನೇತಾಡಿದ್ದಾಳೆ.

ಇದನ್ನು ಕಂಡ ರಸ್ತೆಯಲ್ಲಿದ್ದ ನೂರಾರು ಪ್ರೇಕ್ಷಕರು ದಿಗ್ಭ್ರಮೆಗೊಂಡರು. ಪಕ್ಕದ ಕಿಟಕಿಯಿಂದ ಮಹಿಳೆಯೊಬ್ಬಳು ಮಗುವನ್ನು ಎತ್ತಲು ಕೈಚಾಚಿದರೂ ಮಗು ಸಿಗುತ್ತಿರಲಿಲ್ಲ. ಇತ್ತ ಮಗುವಿನ ಕೈಗಳ ಶಕ್ತಿ ಕ್ಷಣಕ್ಷಣಕ್ಕೂ ಕ್ಷೀಣಿಸುತ್ತಿತ್ತು. ಯಾವುದೇ ಕ್ಷಣದಲ್ಲಾದರೂ ಮಗು ಕೆಳಗೆ ಬಿದ್ದು ಪ್ರಾಣ ಹೋಗುವ ಭೀತಿ ಎದುರಾಗಿತ್ತು.

ಅದೇ ರಸ್ತೆಯಲ್ಲಿ ರೆಸ್ಟೋರೆಂಟ್ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿರುವ ಭಾರತ ಮೂಲದ ಮೊಹಮ್ಮದ್ ಜೆಸಿಲ್ ಅವರಿಗೆ ಜನರ ಕಿರುಚಾಟ ಕೇಳಿಸಿದೆ. ಹೊರಗೆ ಬಂದು ನೋಡಿದಾಗ ಕಿಟಕಿಯಲ್ಲಿ ನೇತಾಡುತ್ತಿದ್ದ ಮಗು ಕಂಡಿದೆ. ಒಂದು ಕ್ಷಣವೂ ಯೋಚಿಸದ ಜೆಸಿಲ್ ತಕ್ಷಣವೇ ಮಗುವಿನ ರಕ್ಷಣೆಗೆ ಧಾವಿಸಿದರು.
ನನಗೆ ಬೇರೆನೂ ಯೋಚನೆ ಬರಲಿಲ್ಲ. ನಾನು ಕೇವಲ ಐದು ತಿಂಗಳ ವಯಸ್ಸಿನ ಅವಳಿ ಮಕ್ಕಳ ತಂದೆ. ಕಷ್ಟದಲ್ಲಿದ್ದ ಆ ಮಗುವನ್ನು ನೋಡಿದಾಗ ನನ್ನೊಳಗಿನ ತಂದೆಯ ಹೃದಯ ಜಾಗೃತವಾಯಿತು. ನಾನು ಹೀರೋ ಅಲ್ಲ, ಒಬ್ಬ ತಂದೆಯಾಗಿ ನನ್ನ ಕರ್ತವ್ಯ ಮಾಡಿದೆ ಎಂದು ಜೆಸಿಲ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಮತ್ತಷ್ಟು ಓದಿ: ನಾಯಿ ಹಾಗೂ ಎರಡು ವರ್ಷದ ಮಗು ನಾಲ್ಕು ದಿನಗಳಿಂದ ನಾಪತ್ತೆ, ಮೂರು ದಿನಗಳ ಬಳಿಕ ವಾಪಸಾದ ನಾಯಿ

ಮಗುವಿನ ಹಿಡಿತ ಸಡಿಲಗೊಳ್ಳುತ್ತಿದ್ದಂತೆ, ಜೆಸಿಲ್ ಮತ್ತು ಅಲ್ಲಿಗೆ ಬಂದಿದ್ದ ಬ್ರಿಟನ್ ಪೊಲೀಸ್ ಅಧಿಕಾರಿಯೊಬ್ಬರು ನೇರವಾಗಿ ಮಗುವಿನ ಕೆಳಭಾಗದಲ್ಲಿ ನಿಂತುಕೊಂಡರು. ದಾರಿಹೋಕರೊಬ್ಬರು ಸಣ್ಣ ಏಣಿಯೊಂದನ್ನು ತಂದು ಬೆಂಬಲವಾಗಿ ನಿಲ್ಲಿಸಿದರು.

ವಿಡಿಯೋ

ಕ್ಷಣಾರ್ಧದಲ್ಲಿ ಮಗು ಕಿಟಕಿಯ ಮೇಲಿಂದ ಕೈಬಿಟ್ಟು ಕೆಳಗೆ ಬಿದ್ದಿದೆ. ಇಡೀ ಜನಸಮೂಹವೇ ಆಘಾತದಿಂದ ಕಣ್ಣು ಮುಚ್ಚಿಕೊಂಡ ಆ ರಣರೋಚಕ ಕ್ಷಣದಲ್ಲಿ, ಜೆಸಿಲ್ ಅತ್ಯಂತ ಜಾಗರೂಕತೆಯಿಂದ ಬೀಳುತ್ತಿದ್ದ ಮಗುವನ್ನು ಗಾಳಿಯಲ್ಲೇ ಸುರಕ್ಷಿತವಾಗಿ ತಮ್ಮ ಕೈಗಳಿಂದ ಹಿಡಿದುಕೊಂಡಿದ್ದಾರೆ! ಪೊಲೀಸ್ ಅಧಿಕಾರಿ ಜೆಸಿಲ್ ಮತ್ತು ಮಗು ಇಬ್ಬರೂ ಕೆಳಗೆ ಬೀಳದಂತೆ ಗಟ್ಟಿಯಾಗಿ ಹಿಡಿದು ಸ್ಥಿರಗೊಳಿಸಿದರು.

ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾದ ಮಗುವಿನ ತಂದೆ, ಭಾರತೀಯ ಯುವಕ ಜೆಸಿಲ್ ಮತ್ತು ಪೊಲೀಸ್ ಅಧಿಕಾರಿಯನ್ನು ‘ನಮ್ಮ ಪಾಲಿನ ರಿಯಲ್ ಹೀರೋಗಳು’ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ. ಲಂಡನ್ ಪೊಲೀಸರು ಮತ್ತು ಅಲ್ಲಿನ ಮಾಧ್ಯಮಗಳು ಭಾರತೀಯ ಯುವಕ ಮೊಹಮ್ಮದ್ ಜೆಸಿಲ್ ಅವರ ಈ ಅಪ್ರತಿಮ ಸಾಹಸ ಹಾಗೂ ಮಾನವೀಯತೆಯನ್ನು ಮುಕ್ತಾಕಂಠದಿಂದ ಪ್ರಶಂಸಿಸುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ರಕ್ಷಣೆಯ ವಿಡಿಯೋ ಭಾರಿ ವೈರಲ್ ಆಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *