Headlines

ಪೇರಳೆ ಹಣ್ಣು ತಿಂದ ತಕ್ಷಣ ಅಪ್ಪಿತಪ್ಪಿಯೂ ಈ ಆಹಾರಗಳ ಸೇವನೆ ಮಾಡಬೇಡಿ! – Kannada News | Foods To Avoid Immediately After Eating Guava

ಪೇರಳೆ ಹಣ್ಣು (Guava) ಆರೋಗ್ಯಕ್ಕೆ ಅತ್ಯಂತ ಉಪಯುಕ್ತವಾದ ಹಣ್ಣುಗಳಲ್ಲಿ ಒಂದು. ಇದರಲ್ಲಿ ವಿಟಮಿನ್ ಸಿ, ಫೈಬರ್ ಹಾಗೂ ಆಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿದ್ದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹಾಗೂ ಜೀರ್ಣಕ್ರಿಯೆ ಸುಧಾರಿಸಲು ಸಹಾಯ ಮಾಡುತ್ತದೆ. ಆದರೆ ಪೇರಳೆ ಹಣ್ಣು ತಿಂದ ತಕ್ಷಣ ಕೆಲವು ಆಹಾರಗಳನ್ನು ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕ ಎಂಬುದು ನಿಮಗೆ ತಿಳಿದಿದೆಯೇ? ಹೌದು, ಪೇರಳೆಯ ಜೊತೆ ಕೆಲವು ಆಹಾರಗಳನ್ನು ಅಪ್ಪಿತಪ್ಪಿಯೂ ಸೇವನೆ ಮಾಡಬಾರದು ಇದರಿಂದ ಆರೋಗ್ಯ ಹಾಳಾಗುವುದರಲ್ಲಿ ಸಂಶಯವೇ ಇಲ್ಲ. ಹಾಗಾದರೆ ಆ ಆಹಾರಗಳು ಯಾವವು, ಯಾಕೆ ಸೇವನೆ ಮಾಡಬಾರದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಹಾಲು ಮತ್ತು ಹಾಲಿನ ಪದಾರ್ಥಗಳು:

ಪೇರಳೆ ಹಣ್ಣು ತಿಂದ ತಕ್ಷಣ ಹಾಲು ಕುಡಿಯುವುದು ಉತ್ತಮವಲ್ಲ. ಪೇರಳೆ ಹಣ್ಣಿನಲ್ಲಿರುವ ಆಮ್ಲ ಗುಣಗಳು ಹಾಲಿನೊಂದಿಗೆ ಬೆರೆತು ಜೀರ್ಣಕ್ರಿಯೆಯನ್ನು ನಿಧಾನಗೊಳಿಸಬಹುದು. ಇದರಿಂದ ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್ ಮತ್ತು ಅಜೀರ್ಣ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ತಣ್ಣೀರು ಕುಡಿಯಬೇಡಿ:

ಪೇರಳೆ ಹಣ್ಣು ತಿಂದ ತಕ್ಷಣ ತಣ್ಣೀರು ಕುಡಿಯುವುದರಿಂದ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ. ಕೆಲವರಲ್ಲಿ ಹೊಟ್ಟೆನೋವು, ಗ್ಯಾಸ್ ಮತ್ತು ಅಸಹಜತೆ ಉಂಟಾಗಬಹುದು. ಆದ್ದರಿಂದ ಕನಿಷ್ಠ 20 ರಿಂದ 30 ನಿಮಿಷಗಳ ನಂತರ ನೀರು ಕುಡಿಯುವುದು ಉತ್ತಮ.

ಇದನ್ನೂ ಓದಿ: ಮಾನ್ಸೂನ್‌ ಋತುವಿನಲ್ಲಿ ಈ ಕಾಲೋಚಿತ ಹಣ್ಣುಗಳನ್ನು ತಿನ್ನಲು ಮರೆಯದಿರಿ

ಬಾಳೆಹಣ್ಣನ್ನು ಜೊತೆಗೆ ತಿನ್ನಬೇಡಿ:

ಪೇರಳೆ ಹಣ್ಣು ಮತ್ತು ಬಾಳೆಹಣ್ಣು ಒಂದೇ ಸಮಯದಲ್ಲಿ ಸೇವಿಸುವುದರಿಂದ ಕೆಲವರಿಗೆ ಜೀರ್ಣಕ್ರಿಯೆ ಸಮಸ್ಯೆಗಳು ಕಾಣಿಸಬಹುದು. ವಿಶೇಷವಾಗಿ ಗ್ಯಾಸ್ಟ್ರಿಕ್ ಅಥವಾ ಹೊಟ್ಟೆ ಉಬ್ಬರ ಸಮಸ್ಯೆ ಇರುವವರು ಈ ಎರಡು ಹಣ್ಣುಗಳ ಸೇವನೆ ಮಾಡದಿರುವುದು ಉತ್ತಮ.

ಹೆಚ್ಚು ಮಸಾಲೆ ಮತ್ತು ಎಣ್ಣೆಯುಕ್ತ ಆಹಾರದ ಸೇವನೆ ಒಳ್ಳೆಯದಲ್ಲ:

ಪೇರಳೆ ಹಣ್ಣಿನಲ್ಲಿ ಫೈಬರ್ ಅಧಿಕವಾಗಿರುವುದರಿಂದ ತಕ್ಷಣವೇ ಹೆಚ್ಚು ಮಸಾಲೆ ಅಥವಾ ಎಣ್ಣೆಯುಕ್ತ ಆಹಾರ ಸೇವಿಸಿದರೆ ಹೊಟ್ಟೆಯ ಮೇಲೆ ಒತ್ತಡ ಹೆಚ್ಚಾಗಬಹುದು. ಇದರಿಂದ ಅಜೀರ್ಣ, ಹೊಟ್ಟೆ ಉರಿ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಆದರೆ ನೆನಪಿರಲಿ, ಪ್ರತಿಯೊಬ್ಬರ ದೇಹದ ಸ್ವಭಾವ ಬೇರೆಬೇರೆ ಆಗಿರುವುದರಿಂದ ಈ ಸಮಸ್ಯೆಗಳು ಎಲ್ಲರಲ್ಲೂ ಒಂದೇ ರೀತಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಆದರೆ ಸಂವೇದನಾಶೀಲ ಜೀರ್ಣಕ್ರಿಯೆ ಇರುವವರು ಪೇರಳೆ ಹಣ್ಣು ತಿಂದ ಬಳಿಕ ಸ್ವಲ್ಪ ಸಮಯ ಬಿಡುವು ನೀಡಿ ಬೇರೆ ಆಹಾರ ಸೇವಿಸುವುದು ಆರೋಗ್ಯಕ್ಕೆ ಉತ್ತಮ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *