Headlines

2 ಪಂದ್ಯಗಳು ಬಾಕಿ ಇರುವಾಗಲೇ ಪಾಕ್ ತಂಡದ ವಿಶ್ವಕಪ್ ಕನಸು ನುಚ್ಚುನೂರು! – Kannada News | Pakistan Eliminated From Women’s T20 World Cup 2026

ಮಹಿಳಾ ಟಿ20 ವಿಶ್ವಕಪ್​ನಿಂದ ಪಾಕಿಸ್ತಾನ್ ತಂಡವು ಅಧಿಕೃತವಾಗಿ ಹೊರಬಿದ್ದಿದೆ. ಸೌತಾಂಪ್ಟನ್‌ನ ಆ್ಯಜಿಯಾಸ್ ಬೌಲ್ ಮೈದಾನದಲ್ಲಿ ನಡೆದ ಬಾಂಗ್ಲಾದೇಶ್ ವಿರುದ್ಧದ ಪಂದ್ಯದಲ್ಲಿ 23 ರನ್​ಗಳ ಆಘಾತಕಾರಿ ಸೋಲಿನೊಂದಿಗೆ ಪಾಕ್ ಪಡೆಯ ವಿಶ್ವಕಪ್ ಕನಸು ನುಚ್ಚುನೂರಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ್ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು.

  • ಮೊದಲ ಬ್ಯಾಟ್ ಮಾಡಿದ ಬಾಂಗ್ಲಾದೇಶ್ ತಂಡ 20 ಓವರ್​ಗಳಲ್ಲಿ ಕಲೆಹಾಕಿದ್ದು ಕೇವಲ 123 ರನ್​ಗಳು ಮಾತ್ರ.
  • 124 ರನ್​ಗಳ ಸುಲಭ ಗುರಿ ಬೆನ್ನತ್ತಿದ ಪಾಕಿಸ್ತಾನ್ ತಂಡ 20 ಓವರ್​ಗಳಲ್ಲಿ ಕೇವಲ 100 ರನ್​ಗಳಿಸಲಷ್ಟೇ ಶಕ್ತರಾಗಿದ್ದಾರೆ.

ಈ ಮೂಲಕ ಬಾಂಗ್ಲಾದೇಶ್ ತಂಡವು 23 ರನ್​ಗಳ ಭರ್ಜರಿ ಜಯ ಸಾಧಿಸಿ ಸೆಮಿಫೈನಲ್​ ರೇಸ್​ನಲ್ಲಿ ಉಳಿದುಕೊಂಡಿದೆ. ಅತ್ತ ಬಾಂಗ್ಲಾ ವಿರುದ್ಧ ಹೀನಾಯವಾಗಿ ಸೋತಿರುವ ಪಾಕಿಸ್ತಾನ್ ತಂಡವು ಕೊನೆಯ ಎರಡು ಪಂದ್ಯಗಳಿರುವಾಗಲೇ ಟೂರ್ನಿಯಿಂದ ಹೊರಬಿದ್ದಿದೆ.

2 ಪಂದ್ಯಗಳು ಬಾಕಿ ಇರುವಾಗಲೇ ಹೊರಬಿದ್ದಿದ್ದೇಗೆ?

ಮಹಿಳಾ ಟಿ20 ವಿಶ್ವಕಪ್‌ ನಿಯಮಾವಳಿಗಳ ಪ್ರಕಾರ, ಪ್ರತಿ ಗ್ರೂಪ್‌ನಿಂದ ಕೇವಲ 2 ತಂಡಗಳು ಮಾತ್ರ ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತವೆ. ಅದರಂತೆ ಲೀಗ್​ ಹಂತದ ಪಂದ್ಯಗಳ ಮುಕ್ತಾಯದ ವೇಳೆಗೆ ಟಾಪ್-2 ನಲ್ಲಿ ಕಾಣಿಸಿಕೊಳ್ಳುವ ತಂಡಗಳು ಸೆಮಿಫೈನಲ್​ಗೇರಲಿದೆ.

ಇತ್ತ ಮೊದಲ ಮೂರು ಮ್ಯಾಚ್​ಗಳಲ್ಲೂ ಸೋಲನುಭವಿಸಿರುವ ಪಾಕಿಸ್ತಾನ್ ತಂಡವು ಕೊನೆಯ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿದರೂ ಪ್ರಸ್ತುತ ಅಗ್ರಸ್ಥಾನದಲ್ಲಿರುವ ಆಸ್ಟ್ರೇಲಿಯಾ (6 ಅಂಕಗಳು) ತಂಡವನ್ನು ಹಿಂದಿಕ್ಕಲು ಸಾಧ್ಯವಿಲ್ಲ. ಹಾಗೆಯೇ ಭಾರತ (4 ಅಂಕಗಳು) ತಂಡದ ನೆಟ್​ ರನ್ ರೇಟ್ ಮೀರಿ ದ್ವಿತೀಯ ಸ್ಥಾನಕ್ಕೇರಲು ಕೂಡ ಸಾಧ್ಯವಾಗುವುದಿಲ್ಲ.

ಏಕೆಂದರೆ ಪಾಕಿಸ್ತಾನದ ನೆಟ್​ ರನ್ ರೇಟ್​ -1.857 ನಲ್ಲಿದ್ದರೆ, ಭಾರತ ತಂಡ +3.975 ಬಲಿಷ್ಠ ನೆಟ್ ರನ್ ರೇಟ್ ಹೊಂದಿದೆ. ಇದರಿಂದ ಕೊನೆಯ ಎರಡು ಪಂದ್ಯಗಳಲ್ಲಿ ಗೆದ್ದರೂ ಪಾಕ್ ಪಡೆಗೆ ಟೀಮ್ ಇಂಡಿಯಾವನ್ನು ನೆಟ್ ರನ್ ರೇಟ್​ನಲ್ಲಿ ಹಿಂದಕ್ಕಲು ಸಾಧ್ಯವಾಗುವುದಿಲ್ಲ. ಹೀಗಾಗಿ ಕೊನೆಯ ಎರಡು ಪಂದ್ಯಗಳಿಗೂ ಮುನ್ನವೇ ಪಾಕಿಸ್ತಾನ್ ತಂಡವು ಅಧಿಕೃತವಾಗಿ ಟಿ20 ವಿಶ್ವಕಪ್​ನಿಂದ ಹೊರಬಿದ್ದಂತಾಗಿದೆ.

ಪಾಕಿಸ್ತಾನ್ ತಂಡದ ಹ್ಯಾಟ್ರಿಕ್ ಸೋಲು:

  •  14 ಜೂನ್ 2026: ಭಾರತದ ವಿರುದ್ಧ 64 ರನ್‌ಗಳ ಹೀನಾಯ ಸೋಲು.
  •  17 ಜೂನ್ 2026: ಸೌತ್ ಆಫ್ರಿಕಾ ವಿರುದ್ಧ 2 ವಿಕೆಟ್‌ಗಳ ರೋಚಕ ಸೋಲು.
  • 20 ಜೂನ್ 2026: ಬಾಂಗ್ಲಾದೇಶ್ ವಿರುದ್ಧ 23 ರನ್‌ಗಳ ಆಘಾತಕಾರಿ ಸೋಲು.

ಇದನ್ನೂ ಓದಿ: 90 ಓವರ್​, 5 ವಿಕೆಟ್​, 281 ರನ್​ಗಳ ಟಾರ್ಗೆಟ್: ರೋಚಕ ಘಟ್ಟದಲ್ಲಿ ENG vs NZ ಟೆಸ್ಟ್

ಈ ಮೂರು ಸೋಲುಗಳೊಂದಿಗೆ ಪಾಕಿಸ್ತಾನ್ ತಂಡದ ವಿಶ್ವಕಪ್ ಕನಸು ನುಚ್ಚುನೂರಾಗಿದೆ. ಇನ್ನು ಜೂನ್ 23 ರಂದು ಆಸ್ಟ್ರೇಲಿಯಾ ಹಾಗೂ ಜೂನ್ 27 ರಂದು ನೆದರ್ಲ್ಯಾಂಡ್ಸ್ ತಂಡಗಳ ವಿರುದ್ಧ ಪಾಕಿಸ್ತಾನ್ ಔಪಚಾರಿಕ ಪಂದ್ಯಗಳನ್ನಾಡಿ ವಿಶ್ವಕಪ್ ಅಭಿಯಾನ ಅಂತ್ಯಗೊಳಿಸಲಿದೆ.

Source link

Leave a Reply

Your email address will not be published. Required fields are marked *