Headlines

‘ಟಾಕ್ಸಿಕ್’ ಬಿಡುಗಡೆ ದಿನಾಂಕ ಘೋಷಣೆ, ಬಾಕ್ಸ್ ಆಫೀಸ್​​ನಲ್ಲಿ ಎದುರಾಗಲಿರುವ ಸಿನಿಮಾಗಳು ಯಾವುವು? – Kannada News | Toxic movie official release date announced which movies to clash with Toxic

ಯಶ್ (Yash) ನಟನೆಯ ಬಹು ನಿರೀಕ್ಷಿತ ಸಿನಿಮಾ ‘ಟಾಕ್ಸಿಕ್’ ರಿಲೀಸ್ ಡೇಟ್ ಘೋಷಣೆ ಆಗಿದೆ. ಈಗಾಗಲೇ ಎರಡು ಬಾರಿ ಸಿನಿಮಾದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಬದಲಾಯಿಸಿದೆ. ಇದೀಗ ಮೂರನೇ ಬಾರಿ ಸಿನಿಮಾ ರಿಲೀಸ್ ಡೇಟ್ ಘೋಷಣೆ ಆಗಿದೆ. ಚಿತ್ರತಂಡ ಇಂದು (ಜೂನ್ 21) ಅಧಿಕೃತವಾಗಿ ಘೋಷಣೆ ಮಾಡಿರುವಂತೆ ಆಗಸ್ಟ್ 26ಕ್ಕೆ ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಆಗಲಿದೆ. ಅಂದಹಾಗೆ ‘ಟಾಕ್ಸಿಕ್’ ಸಿನಿಮಾ ರಿಲೀಸ್ ಡೇಟ್ ಘೋಷಣೆ ಆಗುತ್ತಿದ್ದಂತೆ ಅದೇ ಸಮಯಕ್ಕೆ ಬರಲಿರುವ ಇತರೆ ಕೆಲ ಸಿನಿಮಾಗಳ ಮತ್ತು ಸಿನಿಮಾ ತಂಡಗಳ ಎದೆಯಲ್ಲಿ ಅವಲಕ್ಕಿ ಕುಕ್ಕಲು ಶುರುವಾಗಿದೆ. ಅಂದಹಾಗೆ ‘ಟಾಕ್ಸಿಕ್’ ಸಿನಿಮಾಕ್ಕೆ ಬಾಕ್ಸ್ ಆಫೀಸ್​​ನಲ್ಲಿ ಎದುರಾಗುತ್ತಿರುವ ದೊಡ್ಡ ಸಿನಿಮಾಗಳು ಯಾವುವು? ಇಲ್ಲಿದೆ ಪಟ್ಟಿ…

ತೆಲುಗಿನ ಸ್ಟಾರ್ ನಾನಿ ನಟನೆಯ ಬಹು ನಿರೀಕ್ಷಿತ ಸಿನಿಮಾ ‘ಪ್ಯಾರಡೈಸ್’ ಅದೇ ಸಮಯಕ್ಕೆ ಬಿಡುಗಡೆ ಆಗಲಿದೆ. ಭಿನ್ನವಾಗಿ, ಸಖತ್ ಮಾಸ್ ಮತ್ತು ಕಮರ್ಶಿಯಲ್ ಎಲಿಮೆಂಟ್​​ಗಳನ್ನು ಒಳಗೊಂಡಿರುವ ‘ಪ್ಯಾರಡೈಸ್’ ಸಿನಿಮಾ ಆಗಸ್ಟ್ 21 ರಂದು ಅಂದರೆ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೆ ಕೇವಲ ಐದು ದಿನ ಮುಂಚಿತವಾಗಿ ರಿಲೀಸ್ ಆಗಲಿದೆ. ಈಗ ‘ಟಾಕ್ಸಿಕ್’ ಸಿನಿಮಾ ರಿಲೀಸ್ ಘೋಷಣೆ ಆಗಿರುವ ಕಾರಣ ‘ಪ್ಯಾರಡೈಸ್’ ಸಿನಿಮಾದ ಬಿಡುಗಡೆ ಮುಂದೂಡಲ್ಪಡುವ ಸಾಧ್ಯತೆಯೂ ಇದೆ.

ಆಗಸ್ಟ್ ತಿಂಗಳ 23ರಂದು ಮೆಗಾಸ್ಟಾರ್ ಚಿರಂಜೀವಿ ಹುಟ್ಟುಹಬ್ಬ. ಅದೇ ಸಮಯಕ್ಕೆ ಮೆಗಾಸ್ಟಾರ್ ಚಿರಂಜೀವಿ ಅವರ ಒಂದು ಸಿನಿಮಾ ಬಿಡುಗಡೆ ಆಗಲಿದೆ ಎಂಬ ಸುದ್ದಿ ಇದೆ. ಸದ್ಯಕ್ಕೆ ಅವರು ‘ವಿಶ್ವಂಭರ’, ಬಾಬಿ ಕೊಲ್ಲಿ ನಿರ್ದೇಶನದ ಮತ್ತೊಂದು ಸಿನಿಮಾ ಹಾಗೂ ಇತ್ತೀಚೆಗೆ ಘೋಷಣೆಯಾದ ಕೆವಿಎನ್ ನಿರ್ಮಾಣದ ಸಿನಿಮಾಗಳಲ್ಲಿ ನಟಿಸುತ್ತಿದ್ದು, ಇವುಗಳಲ್ಲಿ ‘ವಿಶ್ವಂಭರ’ ಸಿನಿಮಾ ಚಿರಂಜೀವಿ ಅವರ ಹುಟ್ಟುಹಬ್ಬಕ್ಕೆ ರಿಲೀಸ್ ಆಗಲಿದೆ ಎಂಬ ಸುದ್ದಿಗಳಿದ್ದವು. ಆದರೆ ಇದೀಗ ‘ಟಾಕ್ಸಿಕ್’ ಸಿನಿಮಾ ಘೋಷಣೆಯ ಬಳಿಕ ಚಿರು ಸಿನಿಮಾ ಬಿಡುಗಡೆ ಮುಂದೂಡಲ್ಪಡುವ ಸಾಧ್ಯತೆ ಇದೆ.

ಇದನ್ನೂ ಓದಿ:ಒಳ್ಳೆ ನಟಿ ಆದರೆ ಅವಕಾಶಗಳ ಕೊರತೆಯಲ್ಲಿ ಭಾಗ್ಯಶ್ರೀ ಬೋರ್ಸೆ

‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಆಗುವ ದಿನದಂದು ಹಾಗೂ ಅದರ ಮುಂದಿನ ದಿನ ಎರಡು ಬಾಲಿವುಡ್ ಸಿನಿಮಾಗಳು ಬಿಡುಗಡೆ ಆಗಲಿವೆ. ಒಂದು 2006ರ ಸೂಪರ್ ಹಿಟ್ ಸಿನಿಮಾ ‘ಖೋಸ್ಲಾ ಕಾ ಗೋಸ್ಲಾ’ ಸಿನಿಮಾದ ಎರಡನೇ ಭಾಗ. ಇದೊಂದು ಸಣ್ಣ ಬಜೆಟ್​​ನ ಸಿನಿಮಾ ಆಗಿದೆ. ಆಗಸ್ಟ್ 27ಕ್ಕೆ ವರುಣ್ ಧವನ್ ನಟನೆಯ ‘ಬೇಡಿಯಾ 2’ ಸಿನಿಮಾ ಬಿಡುಗಡೆ ಆಗಲಿದೆ. ಆದರೆ ಈ ಸಿನಿಮಾ ಮುಂದಕ್ಕೆ ಹೋಗುವ ಸಾಧ್ಯತೆ ಇದೆ. ‘ವಿವಾನ್: ದಿ ಫೋರ್ಸ್ ಆಫ್ ಫಾರೆಸ್ಟ್’ ಹಿಂದಿ ಸಿನಿಮಾ ಆಗಸ್ಟ್ 28ಕ್ಕೆ ರಿಲೀಸ್ ಆಗಲಿದೆ. ಇವುಗಳ ಹೊರತಾಗಿ ಕೆಲ ಹಾಲಿವುಡ್ ಸಿನಿಮಾಗಲು ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಸಮಯದಲ್ಲಿಯೇ ರಿಲೀಸ್ ಆಗಲಿವೆ.

‘ಟಾಕ್ಸಿಕ್’ ಸಿನಿಮಾ ಮಾರ್ಚ್ 19ಕ್ಕೆ ರಿಲೀಸ್ ಆಗಬೇಕಿತ್ತು. ಆದರೆ ಆಗ ಚಾಲ್ತಿಯಲ್ಲಿದ್ದ ಇರಾನ್-ಅಮೆರಿಕ್-ಇಸ್ರೇಲ್ ಯುದ್ಧ ಪರಿಸ್ಥಿತಿಯಿಂದಾಗಿ ಸಿನಿಮಾ ಬಿಡುಗಡೆ ಮುಂದೂಡಲಾಯ್ತು. ಬಳಿಕ ಜೂನ್ 4ಕ್ಕೆ ಸಿನಿಮಾ ಬಿಡುಗಡೆ ಘೋಷಿಸಲಾಯ್ತು. ಬಳಿಕ ಆ ದಿನಾಂಕವೂ ಬದಲಾಯ್ತು. ಈಗ ಆಗಸ್ಟ್ 26ಕ್ಕೆ ಬಿಡುಗಡೆ ದಿನಾಂಕ ಘೋಷಿಸಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *