Headlines

ತುಷಾರ್ ಮೆಹ್ತಾ ಭಾರತದ ಸಾಲಿಸಿಟರ್ ಜನರಲ್ ಆಗಿ ಮರುನೇಮಕ; ಸರ್ವೋಚ್ಚ ನ್ಯಾಯಾಲಯದ ಐವರು ಎಎಸ್​ಜಿಗಳ ಅವಧಿಯೂ ವಿಸ್ತರಣೆ – Kannada News | Tushar Mehta reappointed as Solicitor General of India, five ASGs to be continued

ನವದೆಹಲಿ, ಜೂನ್ 21: ಹಿರಿಯ ನ್ಯಾಯವಾದಿ ತುಷಾರ್ ಮೆಹ್ತಾ (Tushar Mehta) ಅವರನ್ನು ಮುಂದಿನ ಮೂರು ವರ್ಷಗಳ ಅವಧಿಗೆ ಭಾರತದ ಸಾಲಿಸಿಟರ್ ಜನರಲ್ (Solicitor General for India) ಆಗಿ ಮರುನೇಮಕ ಮಾಡಲು ಕ್ಯಾಬಿನೆಟ್‌ನ ನೇಮಕಾತಿ ಸಮಿತಿಯು (ACC) ಅನುಮೋದನೆ ನೀಡಿದೆ. ಸಿಬ್ಬಂದಿ ಮತ್ತು ತರಬೇತಿ ಇಲಾಖೆ (DoPT) ಹೊರಡಿಸಿರುವ ಆದೇಶದ ಪ್ರಕಾರ, ತುಷಾರ್ ಮೆಹ್ತಾ ಅವರ ಈ ಹೊಸ ಅಧಿಕಾರಾವಧಿಯು ಜುಲೈ 1 ರಿಂದ ಜಾರಿಗೆ ಬರಲಿದೆ.

ತುಷಾರ್ ಮೆಹ್ತಾ ಅವರು 2018ರ ಅಕ್ಟೋಬರ್ 10 ರಿಂದ ದೇಶದ ಎರಡನೇ ಅತ್ಯುನ್ನತ ಕಾನೂನು ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹೊಸ ವಿಸ್ತರಣೆಯೊಂದಿಗೆ ಅವರು ದೇಶದ ಇತಿಹಾಸದಲ್ಲೇ ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿದ ಕಾನೂನು ಅಧಿಕಾರಿಗಳಲ್ಲಿ ಒಬ್ಬರಾಗಲಿದ್ದಾರೆ. ಸಾಲಿಸಿಟರ್ ಜನರಲ್ ಎಂಬುದು ಎರಡನೇ ಅತ್ಯುನ್ನತ ಕಾನೂನು ಅಧಿಕಾರಿ ಸ್ಥಾನ ಆಗಿದೆ. ಅಟಾರ್ನಿ ಜನರಲ್ ಅವರು ಅಗ್ರಗಣ್ಯರಾಗಿದ್ದಾರೆ. ಅವರ ನಂತರದ ಸ್ಥಾನ ಸಾಲಿಸಿಟರ್ ಜನರಲ್ ಅವರದ್ದು.

ತುಷಾರ್ ಮೆಹ್ತಾ ಅವರ ಮರುನೇಮಕಾತಿಯ ಪತ್ರ

ಐದು ಹೆಚ್ಚುವರಿ ಸಾಲಿಸಿಟರ್ ಜನರಲ್ (ASG) ಮರುನೇಮಕ

ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುವ ಐದು ಹಿರಿಯ ನ್ಯಾಯವಾದಿಗಳನ್ನು ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಮೂರು ವರ್ಷಗಳ ಅವಧಿಗೆ ಮರುನೇಮಕ ಮಾಡಲಾಗಿದೆ. ಹಿರಿಯ ನ್ಯಾಯವಾದಿಗಳಾದ ವಿಕ್ರಮಜಿತ್ ಬ್ಯಾನರ್ಜಿ ಮತ್ತು ಕೆ.ಎಂ. ನಟರಾಜ್ ಅವರ ಅವಧಿಯು ಜುಲೈ 1 ರಿಂದ ಜಾರಿಗೆ ಬರಲಿದೆ. ಹಿರಿಯ ನ್ಯಾಯವಾದಿಗಳಾದ ಸೂರ್ಯಪ್ರಕಾಶ್ ವಿ. ರಾಜು, ಎನ್. ವೆಂಕಟರಾಮನ್ ಮತ್ತು ಐಶ್ವರ್ಯ ಭಾಟಿ ಅವರ ಅವಧಿಯು ಜೂನ್ 30 ರಿಂದ ಜಾರಿಗೆ ಬರಲಿದೆ.

ಇದನ್ನೂ ಓದಿ: ತಮಿಳುನಾಡಿನಲ್ಲಿ ಮೀನು ರಫ್ತು ಘಟಕದಲ್ಲಿ ಗ್ಯಾಸ್ ಲೀಕ್; ಹಲವು ಸಾವು ನೋವು

ದೆಹಲಿ ಹೈಕೋರ್ಟ್ ಎಎಸ್‌ಜಿ ಅವಧಿ ವಿಸ್ತರಣೆ: ಇದೇ ವೇಳೆ ದೆಹಲಿ ಹೈಕೋರ್ಟ್‌ನ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿರುವ ಹಿರಿಯ ನ್ಯಾಯವಾದಿ ಚೇತನ್ ಶರ್ಮಾ ಅವರ ಅಧಿಕಾರಾವಧಿಯನ್ನು ಜುಲೈ 1 ರಿಂದ ಅನ್ವಯವಾಗುವಂತೆ ಮುಂದಿನ ಆರು ತಿಂಗಳ ಅವಧಿಗೆ ವಿಸ್ತರಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 6:43 pm, Sun, 21 June 26

Source link

Leave a Reply

Your email address will not be published. Required fields are marked *