ಗಾಲೆಯಲ್ಲಿ ನಡೆಯುತ್ತಿರುವ ಭಾರತ ಎ ಹಾಗೂ ಶ್ರೀಲಂಕಾ ಎ (India A vs Sri Lanka A) ತಂಡಗಳ ನಡುವಿನ ಮೊದಲ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭಾರತ ಎ ತಂಡ ಮೊದಲ ಇನ್ನಿಂಗ್ಸ್ನಲ್ಲಿ 122 ರನ್ಗಳ ಮುನ್ನಡೆ ಪಡೆದುಕೊಂಡಿದೆ. ಮೊದಲ ಇನ್ನಿಂಗ್ಸ್ನಲ್ಲಿ ಭಾರತ ಎ ತಂಡ 6 ವಿಕೆಟ್‌ಗಳನ್ನು ಕಳೆದುಕೊಂಡು 452ರನ್ ಕಲೆಹಾಕಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ಈ ಗುರಿ ಬೆನ್ನಟ್ಟಿದ ಆತಿಥೇಯ ಶ್ರೀಲಂಕಾ ತಂಡ 330 ರನ್‌ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಭಾರತಕ್ಕೆ ಮೊದಲ ಇನ್ನಿಂಗ್ಸ್ ಮುನ್ನಡೆ ಸಿಕ್ಕಿದೆ. ಇನ್ನು ಮೊದಲ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ ಪರ ಎರಡು ಶತಕ ಹಾಗೂ 1 ಅರ್ಧಶತಕ ದಾಖಲಾದರೆ, ಇತ್ತ ಶ್ರೀಲಂಕಾ ಪರ ಮೂರು ಅರ್ಧಶತಕಗಳು ದಾಖಲಾದವು. ಆದರೆ ಇದರ ಹೊರತಾಗಿಯೂ ಆತಿಥೇಯ ತಂಡಕ್ಕೆ ಮುನ್ನಡೆ ಸಾಧಿಸಲು ಸಾಧ್ಯವಾಗಲಿಲ್ಲ. ಅದಕ್ಕೆ ಕಾರಣ ಜಮ್ಮು ಕಾಶ್ಮೀರ ವೇಗಿ ಆಕಿಬ್ ನಬಿ (Aqib Nabi).
452 ರನ್‌ಗಳಿಗೆ ಇನ್ನಿಂಗ್ಸ್ ಡಿಕ್ಲೇರ್
ಮೊದಲ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ ಪರ ಆರಂಭಿಕ ಸಾಯಿ ಸುದರ್ಶನ್ (132) ಹಾಗೂ ನಾಯಕ ಧೃವ್ ಜುರೇಲ್ (141) ಶತಕದ ಇನ್ನಿಂಗ್ಸ್ ಆಡಿದರು. ಉಳಿದಂತೆ ಶೇಕ್ ರಶೀದ್ ಕೂಡ 63 ರನ್ಗಳ ಇನ್ನಿಂಗ್ಸ್ ಆಡಿದರು. ಈ ಮೂವರ ಅಮೋಘ ಇನ್ನಿಂಗ್ಸ್ನಿಂದಾಗಿ ಟೀಂ ಇಂಡಿಯಾ 452 ರನ್‌ಗಳಿಗೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.
30 ರನ್‌ಗಳಿಗೆ ಐದು ವಿಕೆಟ್
ಇದಾದ ಬಳಿಕ ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾಗೆ ಉತ್ತಮ ಆರಂಭ ಸಿಗಲಿಲ್ಲ. ಪವಂತ ವೀರಸಿಂಘೆ (11), ನಿರೋಶನ್ ಡಿಕ್ವೆಲ್ಲಾ (10) ಬೇಗನೇ ಔಟಾದರು. ಆ ಬಳಿಕ ಬಂದ ನುವಾನಿಂದು ಫೆರ್ನಾಂಡೊ (84), ಅಶೆನ್ ಬಂಡಾರ (70) ಮತ್ತು ಸಹನ್ ಅರಚ್ಚಿಗೆ (72) ಅರ್ಧಶತಕದ ಇನ್ನಿಂಗ್ಸ್ ಆಡಿದರು. ಉಳಿದಂತೆ ಅಂಜಲ ಬಂಡಾರ (15), ರವಿಂದು ಫೆರ್ನಾಂಡೊ (22), ಕವಿಂದು ಪತಿರತ್ನೆ (3) ಮತ್ತು ಚಮಿಕಾ ಗುಣಶೇಖರ (15) ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಹೀಗಾಗಿ ಲಂಕಾ ಎ ತಂಡವು ತನ್ನ ಕೊನೆಯ ಐದು ವಿಕೆಟ್‌ಗಳನ್ನು 30 ರನ್‌ಗಳಿಗೆ ಕಳೆದುಕೊಂಡಿತು.
IND W vs ENG W: ಟೀಂ ಇಂಡಿಯಾ ವಿರುದ್ಧದ ಲಾರ್ಡ್ಸ್ ಟೆಸ್ಟ್ಗೆ ಇಂಗ್ಲೆಂಡ್ ತಂಡ ಪ್ರಕಟ
ಮಿಂಚಿದ ಆಕಿಬ್ ನಬಿ
ಇನ್ನು ಭಾರತ ಎ ಪರ ಬೌಲಿಂಗ್ನಲ್ಲಿ ಮಿಂಚಿದ ಆಕಿಬ್ ನಬಿ 19.4 ಓವರ್‌ಗಳಲ್ಲಿ 58 ರನ್‌ಗಳಿಗೆ 4 ವಿಕೆಟ್ ಪಡೆದರೆ, ಯಶ್ ಠಾಕೂರ್ ಮತ್ತು ಹರ್ಷ್ ದುಬೆ ತಲಾ 2 ವಿಕೆಟ್ ಪಡೆದರು. ಅನ್ಶುಲ್ ಕಾಂಬೋಜ್ ಮತ್ತು ಸರನ್ಶ್ ಜೈನ್ ತಲಾ 1 ವಿಕೆಟ್ ಪಡೆದರು. ಆಕಿಬ್ ನಬಿ ಅಂಜಲಾ ಬಂಡಾರ, ರವಿಂದು ಫರ್ನಾಂಡೊ, ಚಾಮಿಕಾ ಗುಣಶೇಖರ ಮತ್ತು ದುಲಾಜ್ ಸಮುದಿತ ಅವರನ್ನು ಔಟ್ ಮಾಡಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 5:46 pm, Sat, 27 June 26