Headlines

ಹೀಗಾದ್ರೆ ಮಾತ್ರ ಟೀಮ್ ಇಂಡಿಯಾ ಸೆಮಿಫೈನಲ್​ಗೇರಲಿದೆ..! – Kannada News | How Can India Qualify For Womens T20 World Cup 2026 Semi Final

ಮಹಿಳಾ ಟಿ20 ವಿಶ್ವಕಪ್​ ಟೂರ್ನಿಯ ಮೊದಲ ಸುತ್ತಿನ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಸೆಮಿಫೈನಲ್​ಗೇರಿದರೆ, ಇತ್ತ ಆಸ್ಟ್ರೇಲಿಯಾ, ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳ ನಡುವೆ ಸೆಮಿಫೈನಲ್ ರೇಸ್ ಮುಂದುವರೆದಿದೆ. ಇದರಲ್ಲಿ ಆಸ್ಟ್ರೇಲಿಯಾ ತಂಡವು ಸೆಮಿಫೈನಲ್​ ಆಡುವುದು ಬಹುತೇಕ ಖಚಿತ.

ಆದರೆ ಅತ್ತ ಟೀಮ್ ಇಂಡಿಯಾ ಸೆಮಿಫೈನಲ್​ಗೇರಬೇಕಿದ್ದರೆ ಆಸ್ಟ್ರೇಲಿಯಾ ವಿರುದ್ಧ ಗೆಲ್ಲಲೇಬೇಕು. ಒಂದು ವೇಳೆ ಸೋತರೆ ಸೌತ್ ಆಫ್ರಿಕಾ ತಂಡದ ಫಲಿತಾಂಶವನ್ನು ಎದುರು ನೋಡಬೇಕಾದ ಪರಿಸ್ಥಿತಿ ಎದುರಾಗಲಿದೆ. ಹಾಗಿದ್ರೆ ಟೀಮ್ ಇಂಡಿಯಾಗೆ ಸೆಮಿಫೈನಲ್​ಗೇರಲು ಇರುವ ಹಾದಿಗಳಾವುವು ಎಂದು ನೋಡುವುದಾದರೆ…

ಆಸ್ಟ್ರೇಲಿಯಾ ವಿರುದ್ಧ ನೇರ ಗೆಲುವು:

ಭಾರತ ಇಂದು ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿದರೆ ನೇರವಾಗಿ 8 ಅಂಕಗಳನ್ನು ಪಡೆಯುತ್ತದೆ.ಇದೇ ದಿನ ನಡೆಯಲಿರುವ ಮತ್ತೊಂದು ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡ ಬಾಂಗ್ಲಾದೇಶ್ ವಿರುದ್ಧ ಸೋತರೆ, ಭಾರತ ತಂಡದ ಸೆಮಿಫೈನಲ್​ ಎಂಟ್ರಿ ಅಧಿಕೃತವಾಗಲಿದೆ.

ಒಂದು ವೇಳೆ ಸೌತ್ ಆಫ್ರಿಕಾ ಕೂಡ ಗೆದ್ದರೆ, ಭಾರತ, ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ ಮೂರೂ ತಂಡಗಳು ತಲಾ 8 ಅಂಕಗಳನ್ನು ಹೊಂದಲಿವೆ. ಆಗ ಉತ್ತಮ ನೆಟ್ ರನ್ ರೇಟ್ (NRR) ಹೊಂದಿರುವ ಎರಡು ತಂಡಗಳು ಮುಂದೆ ಹೋಗಲಿವೆ. ಪ್ರಸ್ತುತ ಭಾರತ (+2.268) ತಂಡದ ನೆಟ್​ ರನ್ ರೇಟ್ ಸೌತ್​ ಆಫ್ರಿಕಾ (+0.734) ಕ್ಕಿಂತ ಉತ್ತಮ ಸ್ಥಿತಿಯಲ್ಲಿದೆ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧ ಗೆಲ್ಲುವ ಮೂಲಕ ಟೀಮ್ ಇಂಡಿಯಾ ತನ್ನ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಳ್ಳಬಹುದು.

ಆಸ್ಟ್ರೇಲಿಯಾ ವಿರುದ್ಧ ಸೋತರೆ ಏನಾಗುತ್ತೆ?

ಒಂದು ವೇಳೆ ಟೀಮ್ ಇಂಡಿಯಾ ಇಂದು ಆಸ್ಟ್ರೇಲಿಯಾ ವಿರುದ್ಧ ಸೋತರೆ 6 ಅಂಕಗಳಲ್ಲೇ ಉಳಿಯಲಿವೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ತಂಡವು ಸೌತ್ ಆಫ್ರಿಕಾ ತಂಡದ ಸೋಲನ್ನು ಎದುರು ನೋಡಬೇಕಾಗುತ್ತದೆ. ಅಂದರೆ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಸೋತರೆ, ಬಾಂಗ್ಲಾದೇಶ್ ತಂಡ ಸೌತ್ ಆಫ್ರಿಕಾ ವಿರುದ್ಧ ಗೆಲ್ಲುವುದನ್ನು ಎದುರು ನೋಡಬೇಕು.

ಇನ್ನು ಸರಳವಾಗಿ ಹೇಳಬೇಕೆಂದರೆ ಭಾರತ ತಂಡವು ಇಂದು ಸೋತರೆ, ಸೌತ್ ಆಫ್ರಿಕಾ ತಂಡ ಕೂಡ ಇಂದು ಸೋಲುವುದನ್ನು ನಿರೀಕ್ಷಿಸಬೇಕು. ಆಗ ಭಾರತ ಮತ್ತು ಸೌತ್ ಆಫ್ರಿಕಾ ಎರಡೂ 6 ಅಂಕಗಳಲ್ಲಿ ಸಮಬಲ ಸಾಧಿಸುವುದರಿಂದ, ರನ್ ರೇಟ್ ಆಧಾರದ ಮೇಲೆ ಭಾರತ ಸೆಮಿಗೆ ಲಗ್ಗೆ ಇಡಬಹುದು. ಒಂದು ವೇಳೆ ಭಾರತ ಸೋತು, ಸೌತ್ ಆಫ್ರಿಕಾ ತಂಡ ಗೆದ್ದರೆ ಟೀಮ್ ಇಂಡಿಯಾ ಟೂರ್ನಿಯಿಂದ ಹೊರಬೀಳಲಿದೆ.

ಪಂದ್ಯ ಮಳೆಯಿಂದ ರದ್ದಾದರೆ?

ಲಾರ್ಡ್ಸ್ ಮೈದಾನದಲ್ಲಿ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಈ ಪಂದ್ಯವು ಮಳೆಯಿಂದಾಗಿ ರದ್ದಾದರೆ, ಎರಡೂ ತಂಡಗಳಿಗೆ ತಲಾ 1 ಅಂಕ ಸಿಗಲಿದೆ. ಇದರಿಂದ ಭಾರತ ತಂಡದ ಅಂಕಗಳು 7 ಕ್ಕೆ  ತಲುಪಲಿದೆ. ಈ ಹಂತದಲ್ಲೂ ಭಾರತ ತಂಡ ಸೆಮಿಫೈನಲ್​ಗೇರಬೇಕಿದ್ದರೆ ಬಾಂಗ್ಲಾದೇಶ್ ತಂಡ ಸೌತ್ ಆಫ್ರಿಕಾವನ್ನು ಸೋಲಿಸಲೇಬೇಕು.

ಭಾರತ ಮತ್ತು ಆಸ್ಟ್ರೇಲಿಯಾ ಪಂದ್ಯ ರದ್ದಾಗಿ, ಸೌತ್ ಆಫ್ರಿಕಾ ಗೆದ್ದರೆ 8 ಅಂಕಗಳೊಂದಿಗೆ ಟೀಮ್ ಇಂಡಿಯಾವನ್ನು ಹಿಂದಿಕ್ಕಿ  ಸೆಮಿಫೈನಲ್ ಏರಲಿದೆ.

ಇದನ್ನೂ ಓದಿ: ಫಿಫಾ ವಿಶ್ವಕಪ್ 2026 ನಾಕೌಟ್ ವೇಳಾಪಟ್ಟಿ ಪ್ರಕಟ

ಹೀಗಾಗಿ ಭಾರತ ತಂಡವು ನೇರವಾಗಿ ಸೆಮಿಫೈನಲ್​ಗೇರಬೇಕಿದ್ದರೆ ಆಸ್ಟ್ರೇಲಿಯಾ ವಿರುದ್ಧ ಕನಿಷ್ಠ 1 ರನ್​ನ ಗೆಲುವು ಸಾಧಿಸಿದರೂ ಸಾಕು. ಈ ಮೂಲಕ ಈ ಬಾರಿಯ ವಿಶ್ವಕಪ್​ನಲ್ಲಿ ಸೆಮಿಫೈನಲ್ ಆಡುವುದನ್ನು ಖಚಿತಪಡಿಸಿಕೊಳ್ಳಬಹುದು.

Source link

Leave a Reply

Your email address will not be published. Required fields are marked *