Headlines

ಈ ಪೋಸ್ಟ್ ಆಫೀಸ್ ಸ್ಕೀಮ್​ನಲ್ಲಿ 30 ಲಕ್ಷ ರೂ ಹೂಡಿಕೆಯಿಂದ 20,000 ರೂಗೂ ಹೆಚ್ಚು ಮಾಸಿಕ ವರಮಾನ – Kannada News | Post Office SCSS Senior Citizen Savings Scheme, invest upto Rs 30 lakh to get regular income

ಹಿರಿಯ ನಾಗರಿಕರ ಉಳಿತಾಯ ಯೋಜನೆ (Senior Citizens Savings Scheme – SCSS) ಮೂಲಕ ನಿವೃತ್ತರು ತಮ್ಮ 30 ಲಕ್ಷ ರೂ ಉಳಿತಾಯದಿಂದ ಪ್ರತಿ ತಿಂಗಳು ಸುಮಾರು ₹20,500 ನಿಯಮಿತ ಆದಾಯವನ್ನು ಹೇಗೆ ಪಡೆಯಬಹುದು. ಪ್ರಸ್ತುತ ಜಾಗತಿಕ ರಾಜಕೀಯ ಉದ್ವಿಗ್ನತೆ ಮತ್ತು ಹಣದುಬ್ಬರ ಹೆಚ್ಚುತ್ತಿರುವ ಈ ಸಮಯದಲ್ಲಿ, ಮಾರುಕಟ್ಟೆಯ ಏರಿಳಿತಗಳಿಂದ ದೂರವಿದ್ದು, ಸುರಕ್ಷಿತ ಹಾಗೂ ಸ್ಥಿರ ಆದಾಯ ಬಯಸುವ ಹಿರಿಯ ನಾಗರಿಕರಿಗೆ (60 ವರ್ಷ ಮೇಲ್ಪಟ್ಟವರಿಗೆ) ಈ ಸರ್ಕಾರಿ ಯೋಜನೆ ಅತ್ಯುತ್ತಮವಾಗಿದೆ. ನಿಮ್ಮ ಮನೆಯಲ್ಲಿ ಹಿರಿಯರಿದ್ದರೆ ಅವರ ಹೆಸರಿನಲ್ಲಿ (ಅಕೌಂಟ್) ಈ ಸ್ಕೀಮ್ ಆರಂಭಿಸಿ ಲಾಭ ಪಡೆಯಬಹುದು.

ಹಿರಿಯ ನಾಗರಿಕರ ಉಳಿತಾಯ ಯೋಜನೆ ವಿವರ

  • ಅರ್ಹತೆ: 60 ವರ್ಷ ಮೇಲ್ಪಟ್ಟ ವಯೋಮಾನದ ಭಾರತೀಯ ನಾಗರಿಕರು
  • ಹೂಡಿಕೆ ಮಿತಿ: ಕನಿಷ್ಠ 1,000 ರೂನಿಂದ ಹಿಡಿದು 30,00,000 ರೂವರೆಗೂ ಹೂಡಿಕೆ ಮಾಡಬಹುದು.
  • ಹೂಡಿಕೆ ಅವಧಿ: ಐದು ವರ್ಷ. ಇನ್ನೂ 3 ವರ್ಷ ವಿಸ್ತರಣೆ ಅವಕಾಶ ಇರುತ್ತದೆ.
  • ಬಡ್ಡಿದರ: ವಾರ್ಷಿಕ ಶೇ. 8.2 ಬಡ್ಡಿ ಸದ್ಯಕ್ಕೆ (ಪ್ರತೀ ಕ್ವಾರ್ಟರ್​ಗೆ ಸರ್ಕಾರದಿಂದ ಬಡ್ಡಿ ಪರಿಷ್ಕರಣೆ ಇರುತ್ತದೆ.)
  • ಬಡ್ಡಿ ಹಣ ಸಂದಾಯ: ಪ್ರತೀ ಕ್ವಾರ್ಟರ್​ಗೆ ಬಡ್ಡಿ ಆದಾಯ ನೀಡಲಾಗುತ್ತದೆ.

ಇದನ್ನೂ ಓದಿ: ಜಾಗತಿಕ ವ್ಯಾಪಾರ ವರ್ಷಕ್ಕೆ ಶೇ. 5 ಏರುತ್ತದೆ, ನೀವು ಶೇ. 5-10 ಹೆಚ್ಚಳಕ್ಕೆ ತೃಪ್ತರಾಗಬೇಡಿ: ಭಾರತೀಯ ಉದ್ಯಮಗಳಿಗೆ ಪಿಯೂಶ್ ಗೋಯಲ್ ಕರೆ

30 ಲಕ್ಷ ರೂ ಹೂಡಿಕೆ ಮಾಡಿದರೆ ಎಷ್ಟು ಆದಾಯ?

ಒಬ್ಬ ವ್ಯಕ್ತಿ 30 ಲಕ್ಷ ರೂವರೆಗೂ ಹೂಡಿಕೆ ಮಾಡಲು ಅವಕಾಶ ಇರುತ್ತದೆ. ಈ ಗರಿಷ್ಠ ಹೂಡಿಕೆ ಮಾಡಿದರೆ ಎಷ್ಟು ಬಡ್ಡಿ ಆದಾಯ ಸಿಗುತ್ತದೆ ಎನ್ನುವ ಲೆಕ್ಕಾಚಾರ ಇಲ್ಲಿದೆ. ಪ್ರಸ್ತುತ ಇರುವ ವಾರ್ಷಿಕ ಶೇ. 8.2 ಬಡ್ಡಿದರವೇ ಮುಂದುವರಿದಿದ್ದೇ ಆದಲ್ಲಿ ಈ ಕೆಳಕಂಡಂತೆ ಆದಾಯ ಸಿಗುತ್ತದೆ:

30 ಲಕ್ಷ ರೂಗೆ ವಾರ್ಷಿಕ ಶೇ. 8.2 ಬಡ್ಡಿ ಎಂದರೆ ವರ್ಷಕ್ಕೆ 2.46 ಲಕ್ಷ ರೂ ಆಗುತ್ತದೆ.

ಪ್ರತೀ ಕ್ವಾರ್ಟರ್​ಗೆ 61,500 ರೂ. ಪ್ರತೀ ತಿಂಗಳಿಗೆ ಸುಮಾರು 20,500 ರೂ ಆದಾಯ ಸಿಕ್ಕಂತಾಗುತ್ತದೆ.

ಹಿರಿಯ ನಾಗರಿಕರಾದ ಪತಿ ಮತ್ತು ಪತ್ನಿ ಇಬ್ಬರೂ ತಲಾ ₹30 ಲಕ್ಷದಂತೆ ಒಟ್ಟು ₹60 ಲಕ್ಷ ಹೂಡಿಕೆ ಮಾಡಬಹುದು. ಆಗ ವಾರ್ಷಿಕವಾಗಿ ಒಟ್ಟು ₹4,92,000 ಬಡ್ಡಿ ಸಿಗುತ್ತದೆ. ಇದು ತಿಂಗಳಿಗೆ ಸರಾಸರಿ ಸುಮಾರು ₹41,000 ಆದಾಯ ಸಿಕ್ಕಂತಾಗುತ್ತದೆ.

ಎಸ್​ಸಿಎಸ್​ಎಸ್ ಯೋಜನೆಯಿಂದ ತೆರಿಗೆ ಸೌಲಭ್ಯಗಳು

ಈ ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್ ಯೋಜನೆಯಲ್ಲಿ ಹೂಡಿಕೆ ಮಾಡುವ ಹಣಕ್ಕೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ (ಹಳೆಯ ತೆರಿಗೆ ಪದ್ಧತಿಯ ಪ್ರಕಾರ) ವಿನಾಯಿತಿ (Tax deduction) ಪಡೆಯಬಹುದು. ಆದರೆ, ಈ ಯೋಜನೆಯಿಂದ ಬರುವ ಬಡ್ಡಿ ಹಣಕ್ಕೆ ಹೂಡಿಕೆದಾರರ ವೈಯಕ್ತಿಕ ತೆರಿಗೆ ಸ್ಲ್ಯಾಬ್ (Tax Slab) ಪ್ರಕಾರ ತೆರಿಗೆ ಅನ್ವಯವಾಗುತ್ತದೆ.

ಇದನ್ನೂ ಓದಿ: ಕೊರಿಯಾದ ಶೇರು ಮಾರುಕಟ್ಟೆ ಧೂಳೀಪಟ; ಮಹಾಕುಸಿತಕ್ಕೆ ಕೋಸ್ಪಿ ಕಕ್ಕಾಬಿಕ್ಕಿ; ಜಪಾನ್, ಚೀನಾ ಮಾರುಕಟ್ಟೆಗಳೂ ತತ್ತರ

ಒಟ್ಟಾರೆ, ಅಸಲು ಹಣಕ್ಕೆ ಸಂಪೂರ್ಣ ಗ್ಯಾರಂಟಿ ಹಾಗೂ ಯಾವುದೇ ರಿಸ್ಕ್ ಇಲ್ಲದೆ ಪ್ರತಿ ತಿಂಗಳು ಸ್ಥಿರ ಆದಾಯ ಬಯಸುವ ಹಿರಿಯ ನಾಗರಿಕರಿಗೆ SCSS ಒಂದು ಉತ್ತಮ ಆಸರೆಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *