ಆರೋಗ್ಯಕರ ಜೀವನಕ್ಕೆ ಸಕ್ಕರೆ ನಿಯಂತ್ರಣImage Credit source: Getty Images
ಇತ್ತೀಚಿನ ದಿನಗಳಲ್ಲಿ ಚಹಾ, ಕಾಫಿ, ಸಿಹಿತಿಂಡಿ, ತಂಪು ಪಾನೀಯಗಳು, ಪ್ಯಾಕೇಜ್ಡ್ ಜ್ಯೂಸ್ ಹಾಗೂ ಪ್ರೊಸೆಸ್ಡ್ ಆಹಾರಗಳ ಮೂಲಕ ಅಗತ್ಯಕ್ಕಿಂತ ಹೆಚ್ಚು ಸಕ್ಕರೆ ಸೇವಿಸುವವರ ಸಂಖ್ಯೆ ಹೆಚ್ಚಾಗಿದೆ. ಅಧಿಕ ಸಕ್ಕರೆ ಸೇವನೆಯು ದೀರ್ಘಾವಧಿಯಲ್ಲಿ ದೇಹದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ವಿಶ್ವ ಆರೋಗ್ಯ ಸಂಸ್ಥೆ (WHO) ಸಕ್ಕರೆ ಸೇವನೆ ಮಾಡುವುದಕ್ಕೆ ಒಂದು ಮಿತಿಯನ್ನು ನಿಗದಿ ಪಡಿಸಿಕೊಳ್ಳಬೇಕು ಎಂದು ಹೇಳಿದೆ. ಹಾಗಾದರೆ ಪ್ರತಿನಿತ್ಯ ಎಷ್ಟು ಪ್ರಮಾಣದಲ್ಲಿ ಸಕ್ಕರೆ ಸೇವನೆ ಮಾಡಬಹುದು ಮತ್ತು ಸಕ್ಕರೆ ಸೇವನೆಯನ್ನು ಕಡಿಮೆ ಮಾಡಿದರೆ ಯಾವ ರೀತಿಯ ಪ್ರಯೋಜನವಾಗುತ್ತದೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಡಬ್ಲ್ಯೂಎಚ್ಓ ನೀಡಿರುವ ಸಲಹೆಗಳು;
ಸಾಮಾನ್ಯವಾಗಿ ಡಬ್ಲ್ಯೂಎಚ್ಓ (WHO) ಪ್ರಕಾರ, ದಿನದ ಒಟ್ಟು ಕ್ಯಾಲೊರಿಗಳಲ್ಲಿ 10% ಕ್ಕಿಂತ ಕಡಿಮೆ ಮಾತ್ರ ಹೆಚ್ಚುವರಿ ಸಕ್ಕರೆಯಿಂದ ಬರಬೇಕು. ಉತ್ತಮ ಆರೋಗ್ಯಕ್ಕಾಗಿ ಇದನ್ನು 5% (ಸುಮಾರು 25 ಗ್ರಾಂ ಅಥವಾ 6 ಟೀ ಚಮಚ) ಒಳಗೆ ಮಿತಿಗೊಳಿಸುವುದು ಸೂಕ್ತ. ಈ ಪ್ರಮಾಣವು ಸಿಹಿ ಪಾನೀಯಗಳು, ಸಿಹಿತಿಂಡಿಗಳು ಮತ್ತು ಪ್ರೊಸೆಸ್ಡ್ ಆಹಾರಗಳಲ್ಲಿ ಇರುವ ಹೆಚ್ಚುವರಿ ಸಕ್ಕರೆಗೆ ಅನ್ವಯಿಸುತ್ತದೆ. ಹಣ್ಣು ಮತ್ತು ಹಾಲಿನಲ್ಲಿರುವ ನೈಸರ್ಗಿಕ ಸಕ್ಕರೆ ಇದಕ್ಕೆ ಅನ್ವಯವಾಗಿಲ್ಲ.
ಇದನ್ನೂ ಓದಿ: ಮೈಗ್ರೇನ್ ಮತ್ತು ರಕ್ತಹೀನತೆಗೆ ಸಂಬಂಧವಿದೆಯೇ? ಅಧ್ಯಯನದ ತಿಳಿದುಬಂದ ಅಚ್ಚರಿ ಮಾಹಿತಿ ಇಲ್ಲಿದೆ
ಸಕ್ಕರೆ ಸೇವನೆಯನ್ನು ಕಡಿಮೆ ಮಾಡಿದರೆ ಏನು ಪ್ರಯೋಜನ?
ಸಾಮಾನ್ಯವಾಗಿ ಸಕ್ಕರೆ ಸೇವನೆ ಕಡಿಮೆ ಮಾಡಿದರೆ ತೂಕ ನಿಯಂತ್ರಣಕ್ಕೆ ಸಹಕಾರಿಯಾಗುತ್ತದೆ. ರಕ್ತದಲ್ಲಿನ ಸಕ್ಕರೆಯ ಮಟ್ಟ ಸಮತೋಲನದಲ್ಲಿದ್ದು, ಮಧುಮೇಹದ ಅಪಾಯ ಕಡಿಮೆಯಾಗಬಹುದು. ಹೃದಯದ ಆರೋಗ್ಯ ಸುಧಾರಿಸುವುದರ ಜೊತೆಗೆ ಹಲ್ಲುಗಳಲ್ಲಿ ಕ್ಯಾವಿಟಿ ಉಂಟಾಗುವ ಸಾಧ್ಯತೆಯೂ ಕಡಿಮೆಯಾಗುತ್ತದೆ. ದಿನವಿಡೀ ಶಕ್ತಿ ಸ್ಥಿರವಾಗಿದ್ದು, ಚರ್ಮದ ಆರೋಗ್ಯ ಮತ್ತು ನಿದ್ರೆಯ ಗುಣಮಟ್ಟವೂ ಚೆನ್ನಾಗಿರುತ್ತದೆ.
ಯಾವ ಆಹಾರಗಳಲ್ಲಿ ಹೆಚ್ಚು ಸಕ್ಕರೆ ಅಡಗಿದೆ?
ಕೋಲ್ಡ್ ಡ್ರಿಂಕ್ಸ್, ಪ್ಯಾಕೇಜ್ಡ್ ಜ್ಯೂಸ್, ಎನರ್ಜಿ ಡ್ರಿಂಕ್ಸ್, ಬಿಸ್ಕತ್, ಕೇಕ್, ಚಾಕೊಲೇಟ್, ಸಿಹಿತಿಂಡಿಗಳು, ಫ್ಲೇವರ್ಡ್ ಮೊಸರು, ಬ್ರೇಕ್‌ಫಾಸ್ಟ್ ಸೀರಿಯಲ್ಸ್, ಕೆಚಪ್, ಸಾಸ್ ಹಾಗೂ ರೆಡಿ-ಟು-ಈಟ್ ಆಹಾರಗಳಲ್ಲಿ ಸಕ್ಕರೆ ಪ್ರಮಾಣ ಹೆಚ್ಚಿರುತ್ತದೆ. ಆರೋಗ್ಯ ಕಾಪಾಡಿಕೊಳ್ಳಲು ಆಹಾರ ಖರೀದಿಸುವಾಗ ಪ್ಯಾಕೆಟ್‌ನ ಲೇಬಲ್ ಓದುವ ಅಭ್ಯಾಸ ಬೆಳೆಸಿಕೊಳ್ಳಿ. ಕಡಿಮೆ ಸಕ್ಕರೆ ಇರುವ ಆಹಾರಗಳನ್ನು ಆಯ್ಕೆ ಮಾಡಿ ಹಾಗೂ ಸಮತೋಲನ ಆಹಾರ ಪದ್ಧತಿ ಅನುಸರಿಸುವುದರಿಂದ ದೀರ್ಘಾವಧಿಯಲ್ಲಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ