Headlines

Aadhar Card: ಆಧಾರ್ ಕಾರ್ಡ್‌ನಲ್ಲಿ ಮೊಬೈಲ್ ನಂಬರ್‌ನ್ನು ಹೀಗೆ ತಿದ್ದುಪಡಿ ಮಾಡಿ – Kannada News | Aadhaar card: How to change the mobile number on an Aadhaar card

ಆಧಾರ್‌ ಕಾರ್ಡ್‌ (Aadhaar Card) ಭಾರತದ ಪ್ರತಿಯೊಬ್ಬ ನಿವಾಸಿಗೆ ನೀಡುವ 12 ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆ ಇದಾಗಿದೆ. ಆಧಾರ್ ಕಾರ್ಡ್ ಕೇವಲ ಗುರುತಿನ ಚೀಟಿಯಾಗಿರದೇ, ಸರ್ಕಾರದ ಯಾವುದೇ ಸೌಲಭ್ಯಗಳಿಗೆ ಈ ದಾಖಲೆ ಕಡ್ಡಾಯವಾಗಿ ಬೇಕು. ಆಧಾರ್ ಕಾರ್ಡ್‌ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ಇರಲೇ ಬೇಕು. ಬೇರೆಯವರ ಮೊಬೈಲ್ ಸಂಖ್ಯೆಯಿದ್ದರೆ ನೀವು ಆದಷ್ಟು ಬೇಗ ಬದಲಾವಣೆ ಮಾಡಿಕೊಳ್ಳುವುದು ಅಗತ್ಯ. ಆಧಾರ್ ಕಾರ್ಡ್‌ನಲ್ಲಿ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಲು ಅಥವಾ ತಿದ್ದುಪಡಿ ಯಾವುದೇ ಆನ್‌ಲೈನ್ ವಿಧಾನದಲ್ಲಿ ಸಾಧ್ಯವಿಲ್ಲ.

ಆಧಾರ್ ಕಾರ್ಡ್‌ನಲ್ಲಿ ಮೊಬೈಲ್ ಸಂಖ್ಯೆ ಬದಲಿಸುವುದು ಹೇಗೆ?

ಹಂತ 1: ನೀವು ನೇರವಾಗಿ ನಿಮ್ಮ ಹತ್ತಿರದ ಆಧಾರ್ ಸೇವಾ ಕೇಂದ್ರಕ್ಕೆ ಅಥವಾ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಿ.

ಹಂತ 2: UIDAI ನ ಅಫೀಷಿಯಲ್ ಆಧಾರ್ ವೆಬ್‌ ಸೈಟ್‌ ಮೂಲಕ ಮೊಬೈಲ್ ಸಂಖ್ಯೆ ಬದಲಾವಣೆ ಮಾಡಿಕೊಳ್ಳಬಹುದು.

ಹಂತ 3: ಆಧಾರ್ ಸೇವಾ ಕೇಂದ್ರದಲ್ಲಿ ಲಭ್ಯವಿರುವ ಆಧಾರ್ ತಿದ್ದುಪಡಿ ಫಾರ್ಮ್‌ನಲ್ಲಿ ನೀವು ಪ್ರಸ್ತುತ ಬಳಸುತ್ತಿರುವ ಮೊಬೈಲ್‌ ಸಂಖ್ಯೆಯನ್ನು ನಮೂದಿಸಿ.

ಹಂತ 4: ನಿಮ್ಮ ಬೆರಳಚ್ಚು ಅಥವಾ ಕಣ್ಣಿನ ಗುಡ್ಡೆಯನ್ನು (ಬಯೋಮೆಟ್ರಿಕ್) ಸ್ಕ್ಯಾನ್ ಮಾಡಿ ಪರಿಶೀಲಿಸಲಾಗುತ್ತದೆ.

ಹಂತ 5: ಈ ಸೇವೆಗಾಗಿ ನೀವು 50 ರೂ ಶುಲ್ಕವನ್ನು ಪಾವತಿಸಬೇಕು.

ಹಂತ 6: ಪ್ರಕ್ರಿಯೆ ಬಳಿಕ ಯೂನಿಕ್ ರಿಫೆರೆನ್ಸ್ ನಂಬರ್ ಇರುವ ರಸೀದಿಯನ್ನು ನೀಡಲಾಗುತ್ತದೆ.

ಇದನ್ನೂ ಓದಿ: Aadhaar Card: ಆಧಾರ್ ಕಾರ್ಡ್​ನಲ್ಲಿ ಹೆಸರು, ವಿಳಾಸ ತಿದ್ದುಪಡಿ ಮಾಡುವ ಮುನ್ನ ಈ ವಿಷ್ಯ ತಿಳಿದಿರಲಿ

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ಆಧಾರ್ ಕಾರ್ಡ್‌ನಲ್ಲಿ ಮೊಬೈಲ್ ಸಂಖ್ಯೆ ತಿದ್ದುಪಡಿ ಮಾಡೋದು ಹೇಗೆ?

ಉತ್ತರ: ನಿಮ್ಮ ಹತ್ತಿರದ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ತಿದ್ದುಪಡಿ ಮಾಡಿಕೊಳ್ಳಬಹುದು.

ಪ್ರಶ್ನೆ: ಆಧಾರ್ ಕಾರ್ಡ್‌ನಲ್ಲಿ ಮೊಬೈಲ್ ಸಂಖ್ಯೆ ತಿದ್ದುಪಡಿಗೆ ಎಷ್ಟು ಶುಲ್ಕ ವಿಧಿಸಲಾಗುತ್ತದೆ?

ಉತ್ತರ: ಆಧಾರ್ ಕಾರ್ಡ್ ನಲ್ಲಿ ಮೊಬೈಲ್ ಸಂಖ್ಯೆ ತಿದ್ದುಪಡಿಗೆ ಮಾಡಲು 50 ರೂ ಶುಲ್ಕವನ್ನು ಪಾವತಿಸಬೇಕು.

ಪ್ರಶ್ನೆ: ಆಧಾರ್ ಕಾರ್ಡ್‌ನಲ್ಲಿ ಮೊಬೈಲ್ ಸಂಖ್ಯೆಯನ್ನು ತಿದ್ದುಪಡಿ ಮಾಡಲು ಆನ್ಲೈನ್ ವಿಧಾನದಿಂದ ಸಾಧ್ಯವೇ?

ಉತ್ತರ: ಆಧಾರ್ ಕಾರ್ಡ್‌ನಲ್ಲಿ ಮೊಬೈಲ್ ಸಂಖ್ಯೆಯನ್ನು ತಿದ್ದುಪಡಿ ಮಾಡಲು ಆನ್ಲೈನ್ ವಿಧಾನ ಲಭ್ಯವಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *