ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಮ್ಯಾಚ್ನಲ್ಲೇ ಭಾರತ ತಂಡ ಭರ್ಜರಿ ಜಯ ಸಾಧಿಸಿದೆ. ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ ಸ್ಡೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 258 ರನ್ ಕಲೆಹಾಕಿತು. ಈ ಗುರಿಯನ್ನು ಟೀಮ್ ಇಂಡಿಯಾ 45.2 ಓವರ್ಗಳಲ್ಲಿ ಚೇಸ್ ಮಾಡಿ 6 ವಿಕೆಟ್ಗಳ ಗೆಲುವು ದಾಖಲಿಸಿದೆ.
- ಇಂಗ್ಲೆಂಡ್: 258/10 (47.5 ಓವರ್ಗಳು) – ಜೋ ರೂಟ್ 76*, ಲಿಯಾಮ್ ಡಾಸನ್ 68; ಅಕ್ಷರ್ ಪಟೇಲ್ 4/62.
- ಭಾರತ: 262/4 (45.2 ಓವರ್ಗಳು) – ಶುಬ್ಮನ್ ಗಿಲ್ 80, ಅಕ್ಷರ್ ಪಟೇಲ್ 57*, ವಾಷಿಂಗ್ಟನ್ ಸುಂದರ್ 52*.
ಅಜೇಯ ನಾಗಾಲೋಟಕ್ಕೆ ಬ್ರೇಕ್!
ಎಡ್ಜ್ಬಾಸ್ಟನ್ ಮೈದಾನದಲ್ಲಿ ಇಂಗ್ಲೆಂಡ್ ತಂಡ ಕೊನೆಯ ಬಾರಿಗೆ ಏಕದಿನ ಪಂದ್ಯದಲ್ಲಿ ಸೋತಿದ್ದು 2014 ರ ಸೆಪ್ಟೆಂಬರ್ 2 ರಂದು. ಅಂದು ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಭಾರತ ತಂಡವೇ ಇಂಗ್ಲೆಂಡ್ ತಂಡವನ್ನು ಮಣಿಸಿತ್ತು. ಆ ಬಳಿಕ ಕಳೆದ 12 ವರ್ಷಗಳಲ್ಲಿ ಇಲ್ಲಿ ನಡೆದ ಸತತ 7 ಏಕದಿನ ಪಂದ್ಯಗಳಲ್ಲಿ ಇಂಗ್ಲೆಂಡ್ ಸೋಲಿಲ್ಲದ ಸರದಾರರಾಗಿ ಮುಂದುವರೆದಿದ್ದರು.
ಆದರೆ, ಇಂಗ್ಲೆಂಡ್ನ ಈ ಸುದೀರ್ಘ ವಿಜಯಯಾತ್ರೆಗೆ ಮತ್ತೆ ಬ್ರೇಕ್ ಹಾಕಲು ಮತ್ತೆ ಟೀಮ್ ಇಂಡಿಯಾವೇ ಬರಬೇಕಾಯಿತು. ಎಡ್ಜ್ಬಾಸ್ಟನ್ನಲ್ಲಿ ಇಂಗ್ಲೆಂಡ್ ತಂಡಕ್ಕೆ ಸೋಲುಣಿಸುವ ಮೂಲಕ ಭಾರತ ಆಂಗ್ಲರ 12 ವರ್ಷಗಳ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿದೆ.
ಸತತ 6ನೇ ಗೆಲುವು:
ಈ ಐತಿಹಾಸಿಕ ಜಯದೊಂದಿಗೆ ಇಂಗ್ಲೆಂಡ್ ವಿರುದ್ಧ ಏಕದಿನ ಕ್ರಿಕೆಟ್ನಲ್ಲಿ ಭಾರತ ತಂಡವು ಸತತ 6ನೇ ಗೆಲುವು ದಾಖಲಿಸಿದಂತಾಗಿದೆ.
- 1ನೇ ಗೆಲುವು (ಜುಲೈ 12, 2022 – ಓವಲ್): ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತಕ್ಕೆ 10 ವಿಕೆಟ್ಗಳ ಭರ್ಜರಿ ಜಯ.
- 2ನೇ ಗೆಲುವು (ಜುಲೈ 17, 2022 – ಮ್ಯಾಂಚೆಸ್ಟರ್): ರಿಷಭ್ ಪಂತ್ ಶತಕದ ನೆರವಿನಿಂದ ಭಾರತಕ್ಕೆ 5 ವಿಕೆಟ್ಗಳ ಜಯ.
- 3ನೇ ಗೆಲುವು (ಅಕ್ಟೋಬರ್ 29, 2023 – ಲಕ್ನೋ): ಏಕದಿನ ವಿಶ್ವಕಪ್ ಪಂದ್ಯದಲ್ಲಿ ಭಾರತಕ್ಕೆ 100 ರನ್ಗಳ ಬೃಹತ್ ಜಯ.
- 4ನೇ ಗೆಲುವು (ಫೆಬ್ರವರಿ 2025 – ಇಂದೋರ್): ಚಾಂಪಿಯನ್ಸ್ ಟ್ರೋಫಿ ಸಿದ್ಧತಾ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಜಯ.
- 5ನೇ ಗೆಲುವು (ಮಾರ್ಚ್ 2, 2025 – ರಾವಲ್ಪಿಂಡಿ): ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಗ್ರೂಪ್ ಹಂತದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಗೆಲುವು.
- 6ನೇ ಗೆಲುವು (ಜುಲೈ 14, 2026 – ಎಡ್ಜ್ಬಾಸ್ಟನ್): ಪ್ರಸ್ತುತ ಸರಣಿಯ ಮೊದಲ ಪಂದ್ಯದಲ್ಲಿ ಶುಭ್ಮನ್ ಗಿಲ್ ನಾಯಕತ್ವದಲ್ಲಿ ಭಾರತ ತಂಡ 6 ವಿಕೆಟ್ಗಳ ಐತಿಹಾಸಿಕ ಜಯ ಸಾಧಿಸಿದೆ.
ಭಾರತ ಪ್ಲೇಯಿಂಗ್ 11: ಶುಭ್ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್.
ಇದನ್ನೂ ಓದಿ: ಸಚಿನ್ ದಾಖಲೆ ಧೂಳೀಪಟ: ಕಿಂಗ್ ಕೊಹ್ಲಿ ಹೆಸರಿಗೆ ವಿಶ್ವ ದಾಖಲೆ
ಇಂಗ್ಲೆಂಡ್ ಪ್ಲೇಯಿಂಗ್ 11: ಜೇಕಬ್ ಬೆಥೆಲ್, ಬೆನ್ ಡಕೆಟ್, ಜೋ ರೂಟ್, ಹ್ಯಾರಿ ಬ್ರೂಕ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ಸ್ಯಾಮ್ ಕರನ್, ವಿಲ್ ಜ್ಯಾಕ್ಸ್, ಜೋಫ್ರಾ ಆರ್ಚರ್, ಲಿಯಾಮ್ ಡಾಸನ್, ಜೋಶ್ ಟಂಗ್, ಆದಿಲ್ ರಶೀದ್.