Headlines

ಭಾರತದಲ್ಲಿ ಬೆಳೆಯುತ್ತಿರುವ ಡೇಟಾ ಸೆಂಟರ್​ಗಳಿಂದ ಭರ್ಜರಿ ಉದ್ಯೋಗ ಸೃಷ್ಟಿ; 4 ವರ್ಷದಲ್ಲಿ 1 ಲಕ್ಷ ಎಂಜಿನಿಯರುಗಳಿಗೆ ಉದ್ಯೋಗಾವಕಾಶ – Kannada News | Data Centre industry fast growing in India, may have demand 1 lakh engineering jobs in 4 years

ನವದೆಹಲಿ, ಜುಲೈ 15: ಡೇಟಾ ಸೆಂಟರ್​ಗಳಲ್ಲಿ ಹೂಡಿಕೆ ಹೆಚ್ಚು, ಉದ್ಯೋಗ ಕಡಿಮೆ ಎನ್ನುವ ಆರೋಪಗಳ ನಡುವೆ ಹೊಸ ವರದಿಯೊಂದು ಬೇರೆಯದೇ ಕಥೆ ಹೇಳುತ್ತಿದೆ. ಡೇಟಾ ಸೆಂಟರ್ (Data Centre) ಭಾರತದಲ್ಲಿ ಬಹಳ ವೇಗವಾಗಿ ಬೆಳೆಯುತ್ತಿರುವ ಉದ್ಯಮವಾಗಿದ್ದು, ಇದು ಅತಿ ಉದ್ಯೋಗ ಸೃಷ್ಟಿಯಲ್ಲೂ ಪ್ರಮುಖ ಎನಿಸಿದೆ. ಎನ್​ಎಲ್​ಬಿ ಸರ್ವಿಸಸ್ ಕಲೆಹಾಕಿದ ದತ್ತಾಂಶದ ಪ್ರಕಾರ, ಭಾರತದಲ್ಲಿ ಅತಿಹೆಚ್ಚು ಉದ್ಯೋಗ ಸೃಷ್ಟಿಸುವ ಉದ್ಯಮಗಳಲ್ಲಿ ಡೇಟಾ ಸೆಂಟರ್ ಕೂಡ ಒಂದೆನಿಸುತ್ತಿದೆ. 2030ರ ವೇಳೆಗೆ ಈ ವಲಯದಲ್ಲಿ ಸುಮಾರು 1 ಲಕ್ಷ ಎಂಜಿನಿಯರುಗಳಿಗೆ ಬೇಡಿಕೆ ಸೃಷ್ಟಿಯಾಗಲಿದೆ.

ಪ್ರಸ್ತುತ ಭಾರತದಲ್ಲಿರುವ ಡೇಟಾ ಸೆಂಟರ್‌ಗಳ ಸಾಮರ್ಥ್ಯ ಸುಮಾರು 1.5 ಗಿಗಾವ್ಯಾಟ್ (GW) ಇದ್ದು, ಇದು ಈ ದಶಕದ ಅಂತ್ಯದ ವೇಳೆಗೆ (2030) 6.5 GW ಗೆ ಏರಿಕೆಯಾಗುವ ಅಂದಾಜಿದೆ. ಭಾರತದ ಈ ಮಾರುಕಟ್ಟೆಯು 22 ಬಿಲಿಯನ್ ಡಾಲರ್ ದಾಟುವ ನಿರೀಕ್ಷೆಯಿದೆ. ಈಗಾಗಲೇ ಈ ವಲಯದಲ್ಲಿ ಜಾಗತಿಕವಾಗಿ ಸುಮಾರು 126 ಬಿಲಿಯನ್ ಡಾಲರ್‌ಗೂ ಹೆಚ್ಚು ಹೂಡಿಕೆ ಮಾಡಲು ಒಪ್ಪಂದಗಳಾಗಿವೆ.

ಇದನ್ನೂ ಓದಿ: ಮ್ಯಾನುಫ್ಯಾಕ್ಚರಿಂಗ್​ಗೆ ಇದೆ ಸೂಚ್ಯಂಕ; ಈಗ ಸೇವಾ ವಲಯದ ಉತ್ಪಾದನೆಗೂ ಸರ್ಕಾರ ತಂದಿದೆ ಹೊಸ ಸೂಚ್ಯಂಕ

ಡೇಟಾ ಸೆಂಟರ್ ಉದ್ಯಮದಲ್ಲಿ ಕೌಶಲ್ಯದ ಕೊರತೆ

ಡೇಟಾ ಸೆಂಟರ್ ಉದ್ಯಮವು ಇಷ್ಟು ವೇಗವಾಗಿ ಬೆಳೆಯುತ್ತಿದ್ದರೂ, ಮಾರುಕಟ್ಟೆಯಲ್ಲಿ ಅಗತ್ಯವಿರುವ ತಾಂತ್ರಿಕ ಕೌಶಲ್ಯ ಹೊಂದಿದ ಉದ್ಯೋಗಿಗಳ ಕೊರತೆಯಿದೆ ಎನ್ನುವ ಸಂಗತಿಯನ್ನು ಎನ್​ಎಲ್​ಬಿ ಸರ್ವಿಸಸ್​ನ ವರದಿಯಲ್ಲಿ ಎತ್ತಿ ತೋರಿಸಲಾಗಿದೆ. ಶಿಕ್ಷಣ ಸಂಸ್ಥೆಗಳು, ಕೈಗಾರಿಕೆಗಳು ಮತ್ತು ನೀತಿ ನಿರೂಪಕರು ಒಟ್ಟಾಗಿ ಕೆಲಸ ಮಾಡಿ ಮುಂದಿನ ಪೀಳಿಗೆಯನ್ನು ಈ ತಂತ್ರಜ್ಞಾನಕ್ಕೆ ಸಜ್ಜುಗೊಳಿಸದಿದ್ದರೆ, ಈ ಬೆಳವಣಿಗೆಗೆ ಹಿನ್ನಡೆಯಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಯಾವ ರೀತಿಯ ಉದ್ಯೋಗಗಳಿಗೆ ಬೇಡಿಕೆ ಇದೆ?

ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಅಳವಡಿಕೆ ಹೆಚ್ಚಾಗುತ್ತಿರುವುದರಿಂದ, ಡೇಟಾ ಸೆಂಟರ್‌ಗಳ ಒಟ್ಟು ಸಾಮರ್ಥ್ಯದ ಶೇ. 30 ರಷ್ಟು ಭಾಗ ಕೇವಲ AI ಕೆಲಸಗಳಿಗೇ ಬಳಕೆಯಾಗಲಿದೆ. ಹಾಗಾಗಿ ಈ ಕೆಳಗಿನ ಕ್ಷೇತ್ರಗಳಲ್ಲಿ ತಾಂತ್ರಿಕ ನುರಿತವರಿಗೆ ಭಾರಿ ಬೇಡಿಕೆ ಇರಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಆ ಕ್ಷೇತ್ರಗಳು ಈ ಕೆಳಕಾಣಿಸಿದಂತಿವೆ:

ಡಿಜಿಟಲ್ ಮತ್ತು ಸಾಫ್ಟ್‌ವೇರ್ ವಿಭಾಗ:

  • AI ಇನ್ಫ್ರಾಸ್ಟ್ರಕ್ಚರ್ ಎಂಜಿನಿಯರಿಂಗ್ (AI ಮೂಲಸೌಕರ್ಯ ಎಂಜಿನಿಯರಿಂಗ್)
  • ಕ್ಲೌಡ್ ಆಪರೇಷನ್ಸ್ (Cloud Operations)
  • ಪ್ಲಾಟ್‌ಫಾರ್ಮ್ ಎಂಜಿನಿಯರಿಂಗ್, DevOps ಮತ್ತು MLOps
  • ಡೇಟಾ ಸೆಂಟರ್ ಆಟೊಮೇಷನ್ (ಸ್ವಯಂಚಾಲಿತ ತಂತ್ರಜ್ಞಾನ)

ಇದನ್ನೂ ಓದಿ: ಭಾರತ-ಯುಕೆ ಮುಕ್ತ ವ್ಯಾಪಾರ ಒಪ್ಪಂದ ಇಂದಿನಿಂದ ಜಾರಿ: ಸಾಮಾನ್ಯ ಜನರಿಗೆ ಹಬ್ಬ, ಕಾರು, ವಿಸ್ಕಿ, ಚಾಕೊಲೇಟ್ ಭಾರಿ ಅಗ್ಗ

ಭೌತಿಕ ಮೂಲಸೌಕರ್ಯ (Physical Infrastructure) ವಿಭಾಗ:

  • ಲಿಕ್ವಿಡ್ ಕೂಲಿಂಗ್ ಎಂಜಿನಿಯರ್‌ಗಳು (ಡೇಟಾ ಸೆಂಟರ್‌ಗಳನ್ನು ತಂಪಾಗಿಡುವ ತಂತ್ರಜ್ಞಾನ)
  • ಇಂಧನ ದಕ್ಷತೆ ತಜ್ಞರು (Energy Optimisation Specialists)
  • ಪವರ್ ಸಿಸ್ಟಮ್ಸ್ ಎಕ್ಸ್‌ಪರ್ಟ್ಸ್

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *