ನವದೆಹಲಿ, ಜುಲೈ 15: ಡೇಟಾ ಸೆಂಟರ್ಗಳಲ್ಲಿ ಹೂಡಿಕೆ ಹೆಚ್ಚು, ಉದ್ಯೋಗ ಕಡಿಮೆ ಎನ್ನುವ ಆರೋಪಗಳ ನಡುವೆ ಹೊಸ ವರದಿಯೊಂದು ಬೇರೆಯದೇ ಕಥೆ ಹೇಳುತ್ತಿದೆ. ಡೇಟಾ ಸೆಂಟರ್ (Data Centre) ಭಾರತದಲ್ಲಿ ಬಹಳ ವೇಗವಾಗಿ ಬೆಳೆಯುತ್ತಿರುವ ಉದ್ಯಮವಾಗಿದ್ದು, ಇದು ಅತಿ ಉದ್ಯೋಗ ಸೃಷ್ಟಿಯಲ್ಲೂ ಪ್ರಮುಖ ಎನಿಸಿದೆ. ಎನ್ಎಲ್ಬಿ ಸರ್ವಿಸಸ್ ಕಲೆಹಾಕಿದ ದತ್ತಾಂಶದ ಪ್ರಕಾರ, ಭಾರತದಲ್ಲಿ ಅತಿಹೆಚ್ಚು ಉದ್ಯೋಗ ಸೃಷ್ಟಿಸುವ ಉದ್ಯಮಗಳಲ್ಲಿ ಡೇಟಾ ಸೆಂಟರ್ ಕೂಡ ಒಂದೆನಿಸುತ್ತಿದೆ. 2030ರ ವೇಳೆಗೆ ಈ ವಲಯದಲ್ಲಿ ಸುಮಾರು 1 ಲಕ್ಷ ಎಂಜಿನಿಯರುಗಳಿಗೆ ಬೇಡಿಕೆ ಸೃಷ್ಟಿಯಾಗಲಿದೆ.
ಪ್ರಸ್ತುತ ಭಾರತದಲ್ಲಿರುವ ಡೇಟಾ ಸೆಂಟರ್‌ಗಳ ಸಾಮರ್ಥ್ಯ ಸುಮಾರು 1.5 ಗಿಗಾವ್ಯಾಟ್ (GW) ಇದ್ದು, ಇದು ಈ ದಶಕದ ಅಂತ್ಯದ ವೇಳೆಗೆ (2030) 6.5 GW ಗೆ ಏರಿಕೆಯಾಗುವ ಅಂದಾಜಿದೆ. ಭಾರತದ ಈ ಮಾರುಕಟ್ಟೆಯು 22 ಬಿಲಿಯನ್ ಡಾಲರ್ ದಾಟುವ ನಿರೀಕ್ಷೆಯಿದೆ. ಈಗಾಗಲೇ ಈ ವಲಯದಲ್ಲಿ ಜಾಗತಿಕವಾಗಿ ಸುಮಾರು 126 ಬಿಲಿಯನ್ ಡಾಲರ್‌ಗೂ ಹೆಚ್ಚು ಹೂಡಿಕೆ ಮಾಡಲು ಒಪ್ಪಂದಗಳಾಗಿವೆ.
ಇದನ್ನೂ ಓದಿ: ಮ್ಯಾನುಫ್ಯಾಕ್ಚರಿಂಗ್ಗೆ ಇದೆ ಸೂಚ್ಯಂಕ; ಈಗ ಸೇವಾ ವಲಯದ ಉತ್ಪಾದನೆಗೂ ಸರ್ಕಾರ ತಂದಿದೆ ಹೊಸ ಸೂಚ್ಯಂಕ
ಡೇಟಾ ಸೆಂಟರ್ ಉದ್ಯಮದಲ್ಲಿ ಕೌಶಲ್ಯದ ಕೊರತೆ
ಡೇಟಾ ಸೆಂಟರ್ ಉದ್ಯಮವು ಇಷ್ಟು ವೇಗವಾಗಿ ಬೆಳೆಯುತ್ತಿದ್ದರೂ, ಮಾರುಕಟ್ಟೆಯಲ್ಲಿ ಅಗತ್ಯವಿರುವ ತಾಂತ್ರಿಕ ಕೌಶಲ್ಯ ಹೊಂದಿದ ಉದ್ಯೋಗಿಗಳ ಕೊರತೆಯಿದೆ ಎನ್ನುವ ಸಂಗತಿಯನ್ನು ಎನ್ಎಲ್ಬಿ ಸರ್ವಿಸಸ್ನ ವರದಿಯಲ್ಲಿ ಎತ್ತಿ ತೋರಿಸಲಾಗಿದೆ. ಶಿಕ್ಷಣ ಸಂಸ್ಥೆಗಳು, ಕೈಗಾರಿಕೆಗಳು ಮತ್ತು ನೀತಿ ನಿರೂಪಕರು ಒಟ್ಟಾಗಿ ಕೆಲಸ ಮಾಡಿ ಮುಂದಿನ ಪೀಳಿಗೆಯನ್ನು ಈ ತಂತ್ರಜ್ಞಾನಕ್ಕೆ ಸಜ್ಜುಗೊಳಿಸದಿದ್ದರೆ, ಈ ಬೆಳವಣಿಗೆಗೆ ಹಿನ್ನಡೆಯಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಯಾವ ರೀತಿಯ ಉದ್ಯೋಗಗಳಿಗೆ ಬೇಡಿಕೆ ಇದೆ?
ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಅಳವಡಿಕೆ ಹೆಚ್ಚಾಗುತ್ತಿರುವುದರಿಂದ, ಡೇಟಾ ಸೆಂಟರ್‌ಗಳ ಒಟ್ಟು ಸಾಮರ್ಥ್ಯದ ಶೇ. 30 ರಷ್ಟು ಭಾಗ ಕೇವಲ AI ಕೆಲಸಗಳಿಗೇ ಬಳಕೆಯಾಗಲಿದೆ. ಹಾಗಾಗಿ ಈ ಕೆಳಗಿನ ಕ್ಷೇತ್ರಗಳಲ್ಲಿ ತಾಂತ್ರಿಕ ನುರಿತವರಿಗೆ ಭಾರಿ ಬೇಡಿಕೆ ಇರಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಆ ಕ್ಷೇತ್ರಗಳು ಈ ಕೆಳಕಾಣಿಸಿದಂತಿವೆ:
ಡಿಜಿಟಲ್ ಮತ್ತು ಸಾಫ್ಟ್‌ವೇರ್ ವಿಭಾಗ:
- AI ಇನ್ಫ್ರಾಸ್ಟ್ರಕ್ಚರ್ ಎಂಜಿನಿಯರಿಂಗ್ (AI ಮೂಲಸೌಕರ್ಯ ಎಂಜಿನಿಯರಿಂಗ್)
- ಕ್ಲೌಡ್ ಆಪರೇಷನ್ಸ್ (Cloud Operations)
- ಪ್ಲಾಟ್‌ಫಾರ್ಮ್ ಎಂಜಿನಿಯರಿಂಗ್, DevOps ಮತ್ತು MLOps
- ಡೇಟಾ ಸೆಂಟರ್ ಆಟೊಮೇಷನ್ (ಸ್ವಯಂಚಾಲಿತ ತಂತ್ರಜ್ಞಾನ)
ಇದನ್ನೂ ಓದಿ: ಭಾರತ-ಯುಕೆ ಮುಕ್ತ ವ್ಯಾಪಾರ ಒಪ್ಪಂದ ಇಂದಿನಿಂದ ಜಾರಿ: ಸಾಮಾನ್ಯ ಜನರಿಗೆ ಹಬ್ಬ, ಕಾರು, ವಿಸ್ಕಿ, ಚಾಕೊಲೇಟ್ ಭಾರಿ ಅಗ್ಗ
ಭೌತಿಕ ಮೂಲಸೌಕರ್ಯ (Physical Infrastructure) ವಿಭಾಗ:
- ಲಿಕ್ವಿಡ್ ಕೂಲಿಂಗ್ ಎಂಜಿನಿಯರ್‌ಗಳು (ಡೇಟಾ ಸೆಂಟರ್‌ಗಳನ್ನು ತಂಪಾಗಿಡುವ ತಂತ್ರಜ್ಞಾನ)
- ಇಂಧನ ದಕ್ಷತೆ ತಜ್ಞರು (Energy Optimisation Specialists)
- ಪವರ್ ಸಿಸ್ಟಮ್ಸ್ ಎಕ್ಸ್‌ಪರ್ಟ್ಸ್
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
