Headlines

ಲಕ್ಷ್ಮೀ ನಿವಾಸ ; ಜಯಂತ್ ಕೈಗೇ ತಾಳಿ ಬಿಚ್ಚಿಟ್ಟು ಹೊರಟ ಜಾಹ್ನವಿ; ಮುರಿದು ಬಿತ್ತಾ ಒಲವ ಬಂಧ? – Kannada News | Lakshmi Nivasa Twist: Jahnavi Returns Mangalsutra to Jayanth, Walks Out of Marriage

ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ‘ಲಕ್ಷ್ಮೀ ನಿವಾಸ’ ಈಗ ಅತ್ಯಂತ ರೋಚಕ ಹಂತಕ್ಕೆ ಬಂದು ತಲುಪಿದೆ. ಜಯಂತ್ ಹಾಗೂ ಜಾಹ್ನವಿ ಜೋಡಿಯ ಬದುಕಿನಲ್ಲಿ ಈಗ ದೊಡ್ಡ ಬಿರುಗಾಳಿಯೇ ಎದ್ದಿದೆ. ಇಷ್ಟು ದಿನ ಜಯಂತ್‌ನ ಅತಿಯಾದ ಪೊಸೆಸಿವ್ ಗುಣವನ್ನು ಸಹಿಸಿಕೊಂಡಿದ್ದ ಜಾಹ್ನವಿ, ಈಗ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾಳೆ. ಕೈ ಹಿಡಿದ ಗಂಡನ ಕೈಗೇ ತಾಳಿ ಬಿಚ್ಚಿಟ್ಟು ಆಕೆ ಮನೆಯಿಂದ ಹೊರನಡೆದಿದ್ದಾಳೆ.

ಪ್ರೋಮೋದಲ್ಲಿ ಏನಿದೆ?

ಧಾರಾವಾಹಿಯ ಹೊಸ ಪ್ರೋಮೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಪ್ರೇಕ್ಷಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಜೀ ಕನ್ನಡ ವಾಹಿನಿ ತನ್ನ ಅಧಿಕೃತ ಪುಟದಲ್ಲಿ ಈ ಪ್ರೋಮೋ ಹಂಚಿಕೊಂಡಿದ್ದು, ಅದಕ್ಕೆ ನೀಡಿರುವ ಕ್ಯಾಪ್ಶನ್ ಕಥೆಯ ಗಾಂಭೀರ್ಯವನ್ನು ತಿಳಿಸುತ್ತಿದೆ.

‘ಕರುನಾಡು ಮೆಚ್ಚಿದ ಜೋಡಿಯ ಬದುಕಲ್ಲಿ ಬಿರುಗಾಳಿ. ಕೈ ಹಿಡಿದವನ ಕೈಗೇ ತಾಳಿ ಕೊಟ್ಟು ಹೊರಟ್ಲು ಚಿನ್ನುಮರಿ. ಮುರಿದು ಬಿತ್ತಾ ಏಳು ಜನ್ಮಗಳ ಜಯಂತ್- ಜಾಹ್ನವಿಯ ಬಂಧ?
ಅಂತ್ಯವಾಯ್ತಾ ಒಲವ ಸಾಕ್ಷಾತ್ಕಾರ’ ಎಂದು ಬರೆಯಲಾಗಿದೆ.

ಜಾಹ್ನವಿ ದಟ್ಟ ನಿರ್ಧಾರಕ್ಕೆ ಕಾರಣವೇನು?

ಜಯಂತ್ ಜಾಹ್ನವಿಯನ್ನು ಅಪಾರವಾಗಿ ಪ್ರೀತಿಸುತ್ತಿದ್ದರೂ ಆತನಲ್ಲಿ ಅತಿಯಾದ ಪೊಸೆಸಿವ್‌ನೆಸ್ ಇತ್ತು. ಆತನ ಈ ವರ್ತನೆಯಿಂದ ಬೇಸತ್ತು ಜಾಹ್ನವಿ ಒಮ್ಮೆ ಮನೆಯಿಂದ ತಪ್ಪಿಸಿಕೊಂಡು ಹೋಗಿದ್ದಳು. ಕಾಣೆಯಾಗಿದ್ದ ಅವಳನ್ನು ಜಯಂತ್ ಹೇಗೋ ಹುಡುಕಿಕೊಂಡು ಬಂದಿದ್ದ. ಆ ಬಳಿಕ ಜಯಂತ್‌ಗೆ ಬುದ್ಧಿ ಕಲಿಸಲು ಜಾಹ್ನವಿ ಆತನದೇ ಶೈಲಿಯಲ್ಲಿ ನಡೆದುಕೊಂಡು ಸರಿಯಾದ ತಿರುಗೇಟು ನೀಡಿದ್ದಳು.

ಆದರೆ ಜಯಂತ್‌ನ ಮಾನಸಿಕ ಕಿರುಕುಳ ಮತ್ತು ಪೊಸೆಸಿವ್ ಗುಣಕ್ಕೆ ಈಗ ಸಂಪೂರ್ಣ ಬ್ರೇಕ್ ಹಾಕಲು ನಿರ್ಧರಿಸಿರುವ ಜಾಹ್ನವಿ, ಹೆಣ್ಣಿನ ತಾಳ್ಮೆಗೂ ಒಂದು ಎಲೆಯಿದೆ ಎಂಬುದನ್ನು ತೋರಿಸಿದ್ದಾಳೆ. ಎಲ್ಲರ ಸಮ್ಮುಖದಲ್ಲೇ ತನ್ನ ಕೊರಳಿನ ತಾಳಿಯನ್ನು ಬಿಚ್ಚಿ ಜಯಂತ್ ಕೈಗೇ ಇಟ್ಟು ಅಲ್ಲಿಂದ ಹೊರಟಿದ್ದಾಳೆ.

ಇದನ್ನೂ ಓದಿ: ಲಕ್ಷ್ಮೀ ನಿವಾಸ ಸೀರಿಯಲ್‌ನಿಂದ ಹೊರ ಬಂದಿದ್ದೇಕೆ? ಕಾರಣ ಬಿಚ್ಚಿಟ್ಟ ಭವಿಷ್‌

ಮುರಿದು ಬಿತ್ತಾ ಏಳು ಜನ್ಮಗಳ ಬಂಧ?

ಈ ಜೋಡಿಯ ಸಂಸಾರದಲ್ಲಿ ಈಗ ಬಿರುಕು ಮೂಡಿದೆ. ಜಾಹ್ನವಿ ತಾಳಿ ಬಿಚ್ಚಿಕೊಟ್ಟಿರುವುದನ್ನು ನೋಡಿ ಜಯಂತ್ ಮಾತ್ರವಲ್ಲದೆ ಇಡೀ ಕುಟುಂಬವೇ ಶಾಕ್ ಆಗಿದೆ. ಜಯಂತ್‌ನ ಅತಿಯಾದ ಪ್ರೀತಿಯೇ ಈಗ ಇವರ ಸಂಸಾರ ಮುರಿಯಲು ಕಾರಣವಾಯಿತಾ? ಇವರಿಬ್ಬರ ನಡುವಿನ ಒಲವಿನ ಸಾಕ್ಷಾತ್ಕಾರ ಇಲ್ಲಿಗೆ ಅಂತ್ಯವಾಯಿತಾ? ಅಥವಾ ಜಯಂತ್ ತನ್ನ ತಪ್ಪನ್ನು ಅರಿತುಕೊಂಡು ಬದಲಾಗುತ್ತಾನಾ ಎಂಬುದನ್ನು ಮುಂದಿನ ಸಂಚಿಕೆಗಳಲ್ಲಿ ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *