ಜುಲೈ ತಿಂಗಳಲ್ಲಿ ತುಲಾ ಮತ್ತು ವೃಶ್ಚಿಕ ರಾಶಿಗಳಿಗೆ ಈ ತಿಂಗಳಿನಲ್ಲಿ ಕಂಡುಬರುವ ಹಾಗೂ ಎದುರಾಗಬಹುದಾದ ಪ್ರಮುಖ ಸಮಸ್ಯೆಗಳನ್ನು ಮತ್ತು ಜಾಗ್ರತೆ ವಹಿಸಬೇಕಾಗುವುದು.
ಪ್ರಸ್ತುತ ಗ್ರಹಗಳ ಗೋಚಾರವು ಮಿಶ್ರಫಲ ನೀಡುತ್ತಿದ್ದು, ಕೆಲವು ಪ್ರಮುಖ ಭಾವಗಳಲ್ಲಿ ಗ್ರಹಗಳ ಸಂಚಾರದಿಂದಾಗಿ ತೊಂದರೆಗಳು ಎದುರಾಗುವ ಸಾಧ್ಯತೆಯಿದೆ.
ಎದುರಾಗಬಹುದಾದ ಪ್ರಮುಖ ಸಮಸ್ಯೆಗಳು:
10ನೇ ಭಾವದಲ್ಲಿ ಸೂರ್ಯ-ಗುರು ಯುತಿ :
ತುಲಾ ರಾಶಿಗೆ ೧೦ನೇ ಮನೆಯಲ್ಲಿ ಸೂರ್ಯ ಮತ್ತು ಉಚ್ಚ ಗುರು ಅಸ್ತಂಗತನಾಗಿ ಸ್ಥಿತರಾಗಿದ್ದಾನೆ. ಉದ್ಯೋಗ ಮತ್ತು ಕಾರ್ಯಕ್ಷೇತ್ರದಲ್ಲಿ ಜವಾಬ್ದಾರಿಗಳು ಹೆಚ್ಚಾಗಲಿವೆ. ಮೇಲಾಧಿಕಾರಿಗಳೊಂದಿಗೆ ಅಥವಾ ಹಿರಿಯ ಅಧಿಕಾರಿಗಳೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮೂಡಬಹುದು. ಕಷ್ಟಪಟ್ಟು ಕೆಲಸ ಮಾಡಿದರೂ ತಕ್ಷಣಕ್ಕೆ ಸರಿಯಾದ ಶ್ರೇಯಸ್ಸು ಸಿಗದೆ ಮನಸ್ಸಿಗೆ ಕಿರಿಕಿರಿ ಉಂಟಾಗಬಹುದು.
8ನೇ ಭಾವದಲ್ಲಿ ಮಂಗಳ :
ಅಷ್ಟಮ ಸ್ಥಾನದಲ್ಲಿ ಮಂಗಳನ ಉಪಸ್ಥಿತಿಯು ತುಲಾ ರಾಶಿಯವರಿಗೆ ಶಾರೀರಿಕ ಆಯಾಸ, ಹಠಾತ್ ಆರೋಗ್ಯ ಸಮಸ್ಯೆಗಳು ಅಥವಾ ಗಾಯಗಳಾಗುವ ಸೂಚನೆ ನೀಡುತ್ತದೆ. ಪ್ರಯಾಣದ ಸಮಯದಲ್ಲಿ ವಿಶೇಷವಾಗಿ ವಾಹನ ಚಾಲನೆ ಮಾಡುವಾಗ ಮತ್ತು ತೀಕ್ಷ್ಣವಾದ ವಸ್ತುಗಳನ್ನು ಬಳಸುವಾಗ ಹೆಚ್ಚಿನ ಜಾಗ್ರತೆ ಅಗತ್ಯ. ಹಠಾತ್ ಧನವ್ಯಯ ಅಥವಾ ಹಣಕಾಸಿನ ನಷ್ಟದ ಸಾಧ್ಯತೆಯಿದೆ.
5ನೇ ಭಾವದಲ್ಲಿ ಚಂದ್ರ-ರಾಹು, ೧೧ನೇ ಭಾವದಲ್ಲಿ ಕೇತು-ಶುಕ್ರ ಸಂಯೋಗ:
ಪಂಚಮ ಭಾವದಲ್ಲಿ ಚಂದ್ರ ಮತ್ತು ರಾಹು ಇರುವುದರಿಂದ ಮಾನಸಿಕ ಅಸ್ಥಿರತೆ, ಅನಗತ್ಯ ಚಿಂತೆ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಗೊಂದಲ ಉಂಟಾಗಬಹುದು. ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಕೊರತೆ ಕಾಡಬಹುದು. ಹೂಡಿಕೆ ಅಥವಾ ಶೇರ್ ಮಾರುಕಟ್ಟೆಯಲ್ಲಿ ಹಣ ಹೂಡಿದರೆ ನಷ್ಟವಾಗುವ ಸಂಭವವಿದೆ. ೧೧ನೇ ಭಾವದಲ್ಲಿ ಶುಕ್ರನ ಜೊತೆ ಕೇತು ಇರುವುದರಿಂದ ಸ್ನೇಹಿತರೊಂದಿಗೆ ಅಥವಾ ದೊಡ್ಡ ಸಹೋದರರೊಂದಿಗೆ ಮನಸ್ತಾಪಗಳು ಬರಬಹುದು. ಲಾಭದ ಹರಿವಿನಲ್ಲಿ ವಿಳಂಬ ಉಂಟಾಗಬಹುದು.
6ನೇ ಭಾವದಲ್ಲಿ ವಕ್ರ ಶನಿ :
ಶತ್ರು ಮತ್ತು ಋಣ ಸ್ಥಾನದಲ್ಲಿ ಶನಿ ಇರುವುದರಿಂದ ಹಳೆಯ ಸಾಲಗಳು ಅಥವಾ ರೋಗಗಳು ಮರುಕಳಿಸಬಹುದು. ಕಾನೂನುಬದ್ಧ ವಿಚಾರಗಳಲ್ಲಿ ವಿಳಂಬ ಧೋರಣೆ ಕಂಡುಬರಬಹುದು.
ವೃಶ್ಚಿಕ ರಾಶಿ :
ವೃಶ್ಚಿಕ ರಾಶಿಯವರಿಗೆ ಗ್ರಹಗಳ ಸ್ಥಾನಮಾನವು ಕಾರ್ಯಕ್ಷೇತ್ರ, ಕೌಟುಂಬಿಕ ಜೀವನ ಮತ್ತು ದಾಂಪತ್ಯದಲ್ಲಿ ಹೆಚ್ಚಿನ ಎಚ್ಚರಿಕೆಯನ್ನು ಕಾಯ್ದುಕೊಳ್ಳಲೇಬೇಕು.
7ನೇ ಭಾವದಲ್ಲಿ ಮಂಗಳ:
ಸಪ್ತಮ ಭಾವದಲ್ಲಿ ಮಂಗಳ ಸಂಚರಿಸುತ್ತಿರುವುದರಿಂದ ದಾಂಪತ್ಯ ಜೀವನದಲ್ಲಿ ಅಥವಾ ವ್ಯಾಪಾರ ಪಾಲುದಾರಿಕೆಯಲ್ಲಿ ಘರ್ಷಣೆಗಳು ಉಂಟಾಗಬಹುದು. ಸಣ್ಣ ವಿಷಯಗಳಿಗೂ ಕೋಪ ಅಥವಾ ಆವೇಶ ಹೆಚ್ಚಾಗಿ ಮಾತಿನ ಚಕಮಕಿ ನಡೆಯಬಹುದು. ಸಂಗಾತಿಯ ಆರೋಗ್ಯದ ಕಡೆಗೆ ಗಮನ ಹರಿಸುವುದು ಅಗತ್ಯ.
9ನೇ ಭಾವದಲ್ಲಿ ಸೂರ್ಯ-ಗುರು :
ಭಾಗ್ಯ ಸ್ಥಾನದಲ್ಲಿ ಸೂರ್ಯ ಮತ್ತು ಗುರು ಇರುವುದು ಸಾಮಾನ್ಯವಾಗಿ ಒಳ್ಳೆಯದೇ ಆದರೂ, ಗುರು ಅಸ್ತಂಗತನಾಗಿರುವುದರಿಂದ ತಂದೆಯವರ ಅಥವಾ ಹಿರಿಯರ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಬಹುದು. ಧಾರ್ಮಿಕ ಕಾರ್ಯಗಳಿಗೆ ಅಥವಾ ದೂರದ ಪ್ರಯಾಣಗಳಿಗೆ ಅಡೆತಡೆಗಳು ಎದುರಾಗಬಹುದು. ಕೆಲಸ ಕಾರ್ಯಗಳು ಕೊನೆಯ ಕ್ಷಣದಲ್ಲಿ ಕೈತಪ್ಪುವ ಸಾಧ್ಯತೆ ಇರುತ್ತದೆ.
4ನೇ ಭಾವದಲ್ಲಿ ಚಂದ್ರ-ರಾಹು :
ಚತುರ್ಥ ಭಾವದಲ್ಲಿ ಅಂದರೆ ಮಾತೃ ಮತ್ತು ಸುಖ ಸ್ಥಾನದಲ್ಲಿ ಚಂದ್ರ ಮತ್ತು ರಾಹು ಒಟ್ಟಿಗಿರುವುದರಿಂದ ಗೃಹ ವಾತಾವರಣದಲ್ಲಿ ಅಶಾಂತಿ ಅಥವಾ ಮಾನಸಿಕ ನೆಮ್ಮದಿಯ ಕೊರತೆ ಉಂಟಾಗಬಹುದು.
ತಾಯಿಯವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಆಸ್ತಿ, ಮನೆ ಅಥವಾ ವಾಹನಕ್ಕೆ ಸಂಬಂಧಿಸಿದ ವ್ಯವಹಾರಗಳಲ್ಲಿ ಮೋಸ ಹೋಗುವ ಅಥವಾ ತೊಂದರೆಗೆ ಸಿಲುಕುವ ಸಾಧ್ಯತೆಯಿರುತ್ತದೆ.
10ನೇ ಭಾವದಲ್ಲಿ ಕೇತು-ಶುಕ್ರ, ೫ನೇ ಭಾವದಲ್ಲಿ ವಕ್ರ ಶನಿ:
ಉದ್ಯೋಗ ಸ್ಥಾನದಲ್ಲಿ ಕೇತುವಿನ ಪ್ರಭಾವದಿಂದಾಗಿ ಕೆಲಸದಲ್ಲಿ ನಿರಾಸಕ್ತಿ ಅಥವಾ ಕೆಲಸ ಬದಲಾಯಿಸುವ ಆಲೋಚನೆಗಳು ಬರಬಹುದು. ಪಂಚಮ ಭಾವದಲ್ಲಿ ಶನಿ ವಕ್ರಿಯಾಗಿರುವುದರಿಂದ ಮಕ್ಕಳ ಶಿಕ್ಷಣ ಅಥವಾ ಪ್ರಗತಿಗೆ ಸಂಬಂಧಿಸಿದಂತೆ ಕಳವಳ ಉಂಟಾಗಬಹುದು.
ಇದನ್ನೂ ಓದಿ: ರಾತ್ರಿ ವೇಳೆಯಲ್ಲಿ ಬಟ್ಟೆ ಒಗೆಯಬಾರದು ಏಕೆ? ಜ್ಯೋತಿಷ್ಯ ಮತ್ತು ಧಾರ್ಮಿಕ ಕಾರಣ ಇಲ್ಲಿದೆ
ಜುಲೈ ತಿಂಗಳ ಅಂತ್ಯದ ಈ ಗ್ರಹಚಾರದ ಪ್ರಕಾರ ತುಲಾ ರಾಶಿಯವರು ತಮ್ಮ ಆರೋಗ್ಯ ಹಾಗೂ ಹಣಕಾಸಿನ ವಿಷಯದಲ್ಲಿ ಅಷ್ಟಮ ಮಂಗಳ ಇರುವ ಕಾರಣ ಎಚ್ಚರಿಕೆಯಿಂದಿರಬೇಕು. ವೃಶ್ಚಿಕ ರಾಶಿಯವರು ತಮ್ಮ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಂಡು ದಾಂಪತ್ಯ ಮತ್ತು ಕೌಟುಂಬಿಕ ವಿಚಾರಗಳಲ್ಲಿ ತಾಳ್ಮೆಯಿಂದಿರಬೇಕು.
ಪರಿಹಾರ: ರಾತ್ರಿ ವೇಳೆಯಲ್ಲಿ ಬಟ್ಟೆ ಒಗೆಯಬಾರದು ಏಕೆ? ಜ್ಯೋತಿಷ್ಯ ಮತ್ತು ಧಾರ್ಮಿಕ ಕಾರಣ ಇಲ್ಲಿದೆ
ತುಲಾ ರಾಶಿಯವರು ದಿನನಿತ್ಯ ಸುಬ್ರಹ್ಮಣ್ಯ ಸ್ವಾಮಿ ಅಥವಾ ಹನುಮಾನ್ ಚಾಲೀಸಾ ಪಠಿಸುವುದು ಮತ್ತು ದುರ್ಗಾ ದೇವಿಯ ಆರಾಧನೆ ಮಾಡುವುದು ಶುಭ.
ವೃಶ್ಚಿಕ ರಾಶಿಯವರು ಶಿವನಿಗೆ ಜಲಾಭಿಷೇಕ ಮಾಡುವುದು ಹಾಗೂ ದಿನವೂ ವಿಷ್ಣು ಸಹಸ್ರನಾಮ ಕೇಳುವುದು ಅಥವಾ ಪಠಿಸುವುದು ಮನಸ್ಸಿಗೆ ಶಾಂತಿ ನೀಡುತ್ತದೆ.
– ಲೋಹಿತ್ ಹೆಬ್ಬಾರ್
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 10:46 pm, Wed, 22 July 26