ಬೆಂಗಳೂರು, ಜುಲೈ 24: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ (Bengaluru) ಜನರನ್ನು ಯಾಮಾರಿಸಿ ಕಳ್ಳತನ ಮಾಡೋಕೆ ಖದೀಮರು ನಾನಾ ಮಾರ್ಗಗಳನ್ನು ಹುಡುಕುತ್ತಿದ್ದು, ಬಸ್ ಪ್ರಯಾಣಿಕರನ್ನು ಗುರಿಯಾಗಿಸಿ ಕೈಚಳಕ ತೋರುವ ಕೇಸ್ಗಳು ಹೆಚ್ಚಿವೆ. ಅದರ ಜೊತೆ ಜೊತೆಗೆ ಮನೆ ಕಳ್ಳತನ ಪ್ರಕರಣಗಳೂ ವರದಿಯಾಗುತ್ತಿವೆ. ವಾಂತಿ ಗ್ಯಾಂಗ್, ಮುಸುಕುಧಾರಿ ಕಳ್ಳರ ಹಾವಳಿಗೆ ಸಾರ್ವಜನಿಕರು ಹೈರಾಣಾಗಿದ್ದು, ಈ ಬಗ್ಗೆ ಅದಾಗಲೇ ಅಲರ್ಟ್ ಆಗಿರುವ ಪೊಲೀಸರು ಕೆಲ ಆರೋಪಿಗಳನ್ನೂ ಬಂಧಿಸಿದ್ದಾರೆ.
ಏನಿದು ವಾಂತಿ ಗ್ಯಾಂಗ್?
ಬಿಎಂಟಿಸಿ ಬಸ್ ಪ್ರಯಾಣಿಕರನ್ನೇ ಟಾರ್ಗೆಟ್ ಮಾಡಿ ಕಳ್ಳತನ ನಡೆಸುವ ಗ್ಯಾಂಗ್ ಇದಾಗಿದೆ. ವಿಂಡೋ ಸೀಟ್ ಪ್ರಯಾಣಿಕರನ್ನ ಟಾರ್ಗೆಟ್ ಮಾಡುವ ಆರೋಪಿಗಳು, ವಾಂತಿ ಬರುತ್ತಿದ್ದೆ ಸೀಟ್ ಬಿಡಿ ಎಂದು ಮನವಿ ಮಾಡುತ್ತಾರೆ. ಸೀಟ್ ಬಿಟ್ಟುಕೊಡುವ ವೇಳೆ ತಂಡದ ಸದಸ್ಯರು ರಶ್ ಇರುವಂತೆ ವರ್ತಿಸಿ ಮೈ ಮೇಲೆ ಬೀಳುತ್ತಾರೆ. ಈ ವೇಳೆ ಪ್ರಯಾಣಿಕರ ಜೇಬಿನಲ್ಲಿರುವ ಪರ್ಸ್, ಮೊಬೈಲ್ ಫೋನ್ಗಳನ್ನು ಎಗರಿಸಲಾಗುತ್ತೆ. ಬಳಿಕ ಅನುಮಾನವೇ ಬಾರದಂತೆ ಆರೋಪಿಗಳು ಅಲ್ಲಿ ಎಸ್ಕೇಪ್ ಆಗುತ್ತಾರೆ.
ಇದನ್ನೂ ಓದಿ: ಚಿಕನ್, ಮಟನ್ ತ್ಯಾಜ್ಯ ವಿಲೇವಾರಿಗೆ ಹೊಸ ರೂಲ್ಸ್, ಶುಲ್ಕವೂ ನಿಗದಿ
ಇನ್ನು ಈ ವಾಂತಿ ಗ್ಯಾಂಗ್ ಕೈಚಳಕದ ಬಗ್ಗೆ ನಗರದ ಕೇಂದ್ರ ವಿಭಾಗ ಸೇರಿ ಎರಡು ವಿಭಾಗದಲ್ಲಿ ಕೇಸ್ ದಾಖಲಾಗಿದ್ದು, ಪ್ರಕರಣಗಳ ಸಂಬಂಧ ತಲೆಮರೆಸಿಕೊಂಡಿದ್ದ ಆರೋಪಿಗಳ ಪೈಕಿ ಇಬ್ಬರನ್ನು ಕೇಂದ್ರ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಮುಬಾರಕ್ ಪಾಶಾ ಮತ್ತು ಅನ್ವರ್ ಪಾಶಾ ಬಂಧಿತರಾಗಿದ್ದಾರೆ. ಆರೋಪಿಗಳ ವಿರುದ್ಧ ನಗರದ ಹಲವು ಕಡೆ ಇಂತಹ ದೂರುಗಳು ದಾಖಲಾಗಿರೋದು ಗೊತ್ತಾಗಿದ್ದು, ಸದ್ಯ ಎಲ್ಲ ಪ್ರಕರಣಗಳನ್ನ ವಿಧಾನಸೌಧ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿ ತನಿಖೆ ನಡೆಸಲಾಗುತ್ತಿದೆ. ಎಸ್ಕೇಪ್ ಆಗಿರುವ ಉಳಿದ ಮೂವರು ಪ್ರಮುಖ ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ.
ಮುಸುಕುಧಾರಿ ಕಳ್ಳರ ಓಡಾಟದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ
ಮತ್ತೊಂದೆಡೆ ಮೈ ಮೇಲೆ ಬೆಡ್ಶೀಟ್ ಮತ್ತು ಟವೆಲ್ ಹೊದ್ದು ಬಂದ ಖದೀಮರು ಬೇಗೂರು ಕೊಪ್ಪ, ಮೈಲಸಂದ್ರದಲ್ಲಿ ಮಧ್ಯರಾತ್ರಿ ಕೈಚಳಕ ತೋರಿರುವ ಘಟನೆ ನಡೆದಿದೆ. ‘ಗ್ರೀನ್ ವ್ಯಾಲಿ ಲೇಔಟ್’ ಮನೆಗಳನ್ನ ಟಾರ್ಗೆಟ್ ಮಾಡಿದ್ದ ತಂಡದ ಒಟ್ಟು 8 ಮಂದಿಯ ಓಡಾಟದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ವಿಕಾಸ್, ಟಿವಿ9 ಬೆಂಗಳೂರು
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 3:32 pm, Fri, 24 July 26