ಭಾರತ ಹಾಗೂ ಜಿಂಬಾಬ್ವೆ ನಡುವಿನ ಎರಡನೇ ಟಿ20 ಪಂದ್ಯ ಇಂದು ಅಂದರೆ ಜುಲೈ 25 ರಂದು ನಡೆಯಲಿದೆ. ಹರಾರೆಯಲ್ಲಿ ನಡೆಯಲಿರುವ ಈ ಪಂದ್ಯವನ್ನು ಗೆದ್ದುಕೊಳ್ಳುವ ಮೂಲಕ ಟೀಂ ಇಂಡಿಯಾ ಸರಣಿ ಕೈವಶ ಮಾಡಿಕೊಳ್ಳುವ ತವಕದಲ್ಲಿದೆ. ಇತ್ತ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಇಶಾನ್ ಕಿಶನ್ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಮಹತ್ವದ ಮೈಲಿಗಲ್ಲನ್ನು ದಾಟಲಿದ್ದಾರೆ(PC-PTI).
ಮೇಲೆ ಹೇಳಿದಂತೆ ಎರಡನೇ ಟಿ20 ಪಂದ್ಯದಲ್ಲಿ ಇಶಾನ್ ಕಿಶನ್ ಪ್ರಮುಖ ಮೈಲಿಗಲ್ಲು ಸಾಧಿಸುವ ಅವಕಾಶವನ್ನು ಹೊಂದಿದ್ದಾರೆ. ಈ ಪಂದ್ಯದಲ್ಲಿ ಕಿಶನ್ ಎರಡು ರನ್ ಗಳಿಸಿದರೆ, ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ 1,500 ರನ್ ಪೂರೈಸಿಲಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ 11 ನೇ ಭಾರತೀಯ ಆಟಗಾರನೆನಿಸಿಕೊಳ್ಳಲಿದ್ದಾರೆ(PC-PTI).
ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ 1,500 ಕ್ಕೂ ಹೆಚ್ಚು ರನ್ ಗಳಿಸಿದ ಇತರ ಭಾರತೀಯರಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್, ಶಿಖರ್ ಧವನ್, ಅಭಿಷೇಕ್ ಶರ್ಮಾ, ಮಹೇಂದ್ರ ಸಿಂಗ್ ಧೋನಿ, ಸುರೇಶ್ ರೈನಾ, ಮತ್ತು ತಿಲಕ್ ವರ್ಮಾ ಕೂಡ 1,500ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ(PC-PTI).
ಇದರಲ್ಲಿ ರೋಹಿತ್ ಶರ್ಮಾ ಅತ್ಯಧಿಕ ಅಂದರೆ 4,231 ರನ್ ಕಲೆ ಹಾಕಿದ್ದರೆ, ವಿರಾಟ್ ಕೊಹ್ಲಿ 4,188 ರನ್ ಗಳಿಸಿದ್ದಾರೆ. ಸೂರ್ಯಕುಮಾರ್ ಯಾದವ್ 3,272 ರನ್ ಗಳಿಸಿದ್ದು, ಹಾರ್ದಿಕ್ ಪಾಂಡ್ಯ 2,288 ರನ್ ಗಳಿಸಿದ್ದಾರೆ. ಕನ್ನಡಿಗ ಕೆಎಲ್ ರಾಹುಲ್ ಕೂಡ 2,265 ರನ್ ಗಳಿಸಿದ್ದಾರೆ(PC-PTI).
ಶಿಖರ್ ಧವನ್ 1759 ರನ್ ಗಳಿಸಿದ್ದರೆ, ಅಭಿಷೇಕ್ ಶರ್ಮಾ 1619 ರನ್, ಮಹೇಂದ್ರ ಸಿಂಗ್ ಧೋನಿ 1617 ರನ್, ಸುರೇಶ್ ರೈನಾ 1605 ರನ್ ಗಳಿಸಿದ್ದಾರೆ. ಪ್ರಸ್ತುತ ಇಶಾನ್ ಕಿಶನ್ 1498 ರನ್ ಗಳಿಸಿದ್ದಾರೆ. ಇಶಾನ್ 53 ಪಂದ್ಯಗಳ 53 ಇನ್ನಿಂಗ್ಸ್ಗಳಲ್ಲಿ ಈ ರನ್ ಗಳಿಸಿದ್ದಾರೆ. ಅವರ ಸರಾಸರಿ 28.80 ಮತ್ತು ಸ್ಟ್ರೈಕ್ ರೇಟ್ 145.57 ಆಗಿದೆ. ಇದರಲ್ಲಿ 1 ಶತಕ ಮತ್ತು 11 ಅರ್ಧಶತಕಗಳು ಸೇರಿವೆ(PC-PTI).




