Headlines

‘ಆ ಚಿತ್ರದಲ್ಲಿ ಕೆಲಸ ಮಾಡಿದ್ದು ನನ್ನ ಜೀವನದ ದೊಡ್ಡ ತಪ್ಪು’: ಪ್ರಭಾಸ್ ಸಿನಿಮಾ ಬಗ್ಗೆ ಬೇಸರ – Kannada News | Manoj Muntashir said working in Adipursh movie is biggest mistake of his life

ದೊಡ್ಡ ಬಜೆಟ್​​, ದೊಡ್ಡ ಸ್ಟಾರ್ ನಟರ ಸಿನಿಮಾಗಳಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕರೆ ಸಾಕೆಂದು ಕಾದು ಕುಳಿತಿರುವ ಹಲವಾರು ನಟ-ನಟಿಯರು, ತಂತ್ರಜ್ಞರು ಇದ್ದಾರೆ. ಆದರೆ ಇಲ್ಲೊಬ್ಬರು, ಅತಿ ದೊಡ್ಡ ಬಜೆಟ್​​ನ, ದೊಡ್ಡ ನಿರ್ಮಾಣ ಸಂಸ್ಥೆಯ ಮತ್ತು ಪ್ರಭಾಸ್ ಅಂಥಹಾ ದೊಡ್ಡ ಸ್ಟಾರ್ ನಟನ ಸಿನಿಮಾನಲ್ಲಿ ಕೆಲಸ ಮಾಡಿ, ಈಗ ಆ ಸಿನಿಮಾನಲ್ಲಿ ಕೆಲಸ ಮಾಡಿದ್ದು ನಾನು ಮಾಡಿದ ದೊಡ್ಡ ತಪ್ಪು, ಆ ಸಿನಿಮಾನಲ್ಲಿ ನಾನ ಮಾಡಿದ ಕೆಲಸಕ್ಕೆ ನಾಚಿಕೆ ಆಗುತ್ತಿದೆ’ ಎಂದಿದ್ದಾರೆ.

ಪ್ರಭಾಸ್ ನಟನೆಯ ‘ಆದಿಪುರುಷ್’ ಸಿನಿಮಾ 2023 ರಲ್ಲಿ ರಿಲೀಸ್ ಆಗಿತ್ತು. ರಾಮಾಯಣ ಕತೆ ಆಧರಿಸಿದ ಈ ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆಗಳಿದ್ದವು. ಆದರೆ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಹೀನಾಯವಾಗಿ ಫ್ಲಾಫ್ ಆಯ್ತು. ಸಿನಿಮಾ ನೋಡಿದವರು ಇನ್ನಿಲ್ಲದಂತೆ ಟೀಕೆ ಮಾಡಿದರು. ಸಿನಿಮಾದ ವಿರುದ್ಧ ಹಲವಾರು ಕಡೆ ದೂರುಗಳು ದಾಖಲಾದವು. ನ್ಯಾಯಾಲಯ ಸಹ ಸಿನಿಮಾ ಅನ್ನು ಟೀಕೆ ಮಾಡಿತು. ವಿಶೇಷವಾಗಿ ಸಿನಿಮಾದ ಸಂಭಾಷಣೆಗಳ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗಿತ್ತು. ಇದೀಗ ಆ ಸಿನಿಮಾಕ್ಕೆ ಸಂಭಾಷಣೆ ಬರೆದಿದ್ದ ಮನೋಜ್ ಮುಂತಶೀರ್, ‘ಆ ಸಿನಿಮಾನಲ್ಲಿ ಕೆಲಸ ಮಾಡಿದ್ದು ನನ್ನ ಜೀವನದ ದೊಡ್ಡ ತಪ್ಪು’ ಎಂದಿದ್ದಾರೆ.

ಪಾಡ್‌ಕಾಸ್ಟ್‌ ಒಂದರಲ್ಲಿ ಮಾತನಾಡಿರುವ ಮನೋಜ್, ‘ಆದಿಪುರುಷ್’ ಬಿಡುಗಡೆಯಾಗಲು ಸುಮಾರು ಆರು ತಿಂಗಳ ಮುಂಚೆಯೇ, ಜನರು ನಿರ್ಮಾಪಕರನ್ನು ಪ್ರಶ್ನಿಸಲು ಮತ್ತು ಈ ಪ್ರಾಜೆಕ್ಟ್ ಅನ್ನು ಟ್ರೋಲ್ ಮಾಡಲು ಪ್ರಾರಂಭಿಸಿದ್ದರು ಎಂಬುದನ್ನು ಅವರು ನೆನಪಿಸಿಕೊಂಡರು. ಈ ಆಕ್ರೋಶದ ಮುಖವಾಗಿ ತಾನೇ ನಿಲ್ಲಬೇಕಾಗುತ್ತದೆ ಎಂದು ನನ್ನ ಪತ್ನಿ ಭಯಪಟ್ಟಿದ್ದರು. ಹಿಂದಿನದನ್ನು ಸಿಂಹಾವಲೋಕನ ಮಾಡುವಾಗ, ತಾನು ಪತ್ನಿಯ ಮಾತನ್ನು ಕೇಳಲಿಲ್ಲವಲ್ಲ ಎಂದು ಪಶ್ಚಾತಾಪಪಡುವುದಾಗಿ ಮನೋಜ್ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ:ಪ್ರಭಾಸ್ ಜೊತೆಗಿರುವ ಆ ಒಬ್ಬರನ್ನು ಕದಿಯುವಾಸೆ ನಟಿ ಪೂಜಾ ಹೆಗ್ಡೆಗೆ

‘ಆದಿಪುರುಷ್’ ಸಿನಿಮಾಕ್ಕೆ ವ್ಯಕ್ತವಾದ ಟೀಕೆಯ ಬಗ್ಗೆ ಮಾತನಾಡಿದ ಮನೋಜ್, ‘ಮೊದಲಿಗೆ ನಾನು ಸ್ವಲ್ಪ ನಿರ್ಲಕ್ಷ್ಯದಿಂದ ವರ್ತಿಸಿದೆ. ಅರ್ಥಮಾಡಿಕೊಳ್ಳಲು ನನಗೆ ಎರಡು ದಿನಗಳು ಬೇಕಾಯಿತು. ಆದಿಪುರುಷ್ ನನ್ನ ಜೀವನದ ಅತ್ಯಂತ ದೊಡ್ಡ ತಪ್ಪು, ಮತ್ತು ಆ ಚಿತ್ರವನ್ನು ಸಮರ್ಥಿಸಿದ್ದು ಅದಕ್ಕಿಂತಲೂ ದೊಡ್ಡ ತಪ್ಪು. ಚಿತ್ರದ ಸುತ್ತ ಏನೆಲ್ಲಾ ನಡೆಯಿತೋ, ಅದಕ್ಕೆ ನನಗೆ ಬಹಳ ನಾಚಿಕೆಯಾಗುತ್ತದೆ ಮತ್ತು ನಡೆದ ಎಲ್ಲ ಘಟನೆಗಳಿಗಾಗಿ ನಾನು ಈ ದೇಶದ ಕ್ಷಮೆ ಯಾಚಿಸುತ್ತೇನೆ. ಭಗವಾನ್ ಶ್ರೀರಾಮ ಮತ್ತು ಭಗವಾನ್ ಹನುಮಂತನಿಗೆ ತಾನು ನ್ಯಾಯ ಒದಗಿಸಲು ವಿಫಲನಾಗಿರುವುದಕ್ಕೆ ತನಗೆ ನಿರಾಶೆಯಾಗಿದೆ’ ಎಂದು ಒಪ್ಪಿಕೊಂಡಿದ್ದಾರೆ.

‘ಆದಿಪುರುಷ್’ ಸಿನಿಮಾವನ್ನು ಓಂ ರಾವತ್ ನಿರ್ದೇಶಿಸಿದ್ದರು. ಸಿನಿಮಾಕ್ಕೆ ಭೂಷಣ್ ಕುಮಾರ್ ಹಾಗೂ ಇತರರು ಬಂಡವಾಳ ಹೂಡಿದ್ದರು. ಸಿನಿಮಾನಲ್ಲಿ ರಾಮನಾಗಿ ಪ್ರಭಾಸ್, ಸೀತೆಯಾಗಿ ಕೃತಿ ಸನೋನ್ ನಟಿಸಿದ್ದರು. ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್ ನಟಿಸಿದ್ದರು. ಸಿನಿಮಾ ಇನ್ನಿಲ್ಲದಂತೆ ಮುಗ್ಗರಿಸಿತು. ಸಿನಿಮಾದ ವಿಎಫ್​​ಎಕ್ಸ್ ಅತ್ಯಂತ ಕೆಟ್ಟದಾಗಿತ್ತು. ರಾಮನ ಪಾತ್ರಕ್ಕೆ ಪ್ರಭಾಸ್ ಸೂಟ್ ಆಗಲಿಲ್ಲ. ಸಂಭಾಷಣೆಯ ಬಗ್ಗೆಯೂ ಸಹ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು. ಒಟ್ಟಾರೆ ಸಿನಿಮಾ ಸೋತಿತು. ಈಗ ಬಾಲಿವುಡ್​​ನಲ್ಲಿ ಮತ್ತೊಂದು ರಾಮಾಯಣ ಆಧರಿಸಿದ ಕತೆ ಸಿನಿಮಾ ಆಗಿದ್ದು, ನವೆಂಬರ್​​​ನಲ್ಲಿ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *