ಕನ್ನಡ, ಬಾಲಿವುಡ್ ಸೇರಿದಂತೆ ಎಲ್ಲಾ ಚಿತ್ರರಂಗಕ್ಕೂ ಪೈರಸಿ ದೊಡ್ಡ ಪಿಡುಗಾಗಿ ಪರಿಣಮಿಸಿದೆ. ನಿರ್ಮಾಪಕರು ಮತ್ತು ಆ್ಯಂಟಿ ಪೈರಸಿ ತಂಡಗಳು ಎಷ್ಟೇ ಪ್ರಯತ್ನಿಸಿದರೂ ಸಿನಿಮಾಗಳು ಆನ್ಲೈನ್ ಅಲ್ಲಿ ಲೀಕ್ ಆಗುತ್ತಿವೆ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಈಗ ಹೊಸ ಅಸ್ತ್ರದೊಂದಿಗೆ ಬರಲು ರೆಡಿ ಆಗಿದೆ. ಪೈರಸಿ ತಡೆಗಟ್ಟಲು ಕೇಂದ್ರ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರು ಈ ಬಗ್ಗೆ ದೊಡ್ಡ ಸೂಚನೆ ನೀಡಿದ್ದಾರೆ.
ಈಗಾಗಲೇ ಕೇಂದ್ರ ಸರ್ಕಾರವು ಪೈರಸಿಗೆ ಸಂಬಂಧಿಸಿದ 7,393 ಲಿಂಕ್ಗಳನ್ನು ನಿಷ್ಕ್ರಿಯಗೊಳಿಸಿದೆ. ಇದರಲ್ಲಿ 1,263 ವೆಬ್ಸೈಟ್ಗಳು ಹಾಗೂ 4,996 ಟೆಲಿಗ್ರಾಂ ಚಾನಲ್ಗಳು ಸೇರಿವೆ. ದೂರುಗಳನ್ನು ದಾಖಲಿಸಲು ಕೇಂದ್ರ ಸರ್ಕಾರವು ಪ್ರತ್ಯೇಕ ಆ್ಯಂಟಿ-ಪೈರಸಿ ಪೋರ್ಟಲ್ ಅನ್ನು ಸಿದ್ಧಪಡಿಸುತ್ತಿದೆ. ಇದರಿಂದಾಗಿ ಕಾನೂನು ಜಾರಿ ಪ್ರಕ್ರಿಯೆ ಇನ್ನುಮುಂದೆ ವೇಗವಾಗಿ ನಡೆಯಲಿದೆ.
ಸರ್ಕಾರದ ಕ್ರಮ ಚಿತ್ರರಂಗಕ್ಕೆ ದೊಡ್ಡ ಆನೆಬಲ ತಂದಿದೆ. ಇತ್ತೀಚೆಗಷ್ಟೇ ಪೊಲೀಸರು ‘ಐಬೊಮ್ಮ’ ರವಿಯನ್ನು ಬಂಧಿಸಿರುವುದು ಇದಕ್ಕೆ ಉತ್ತಮ ಉದಾಹರಣೆ. ದೇಶೀಯ ಪೊಲೀಸ್ ಇಲಾಖೆಯೂ ಈ ನಿಟ್ಟಿನಲ್ಲಿ ಚುರುಕಾಗಿ ಕೆಲಸ ಮಾಡುತ್ತಿದೆ.
ಇದನ್ನೂ ಓದಿ: ‘ಜನ ನಾಯಗನ್’ ಪೈರಸಿ ಕಾಪಿ ಡೌನ್ಲೋಡ್ ಮಾಡಿದವರಿಗೂ ಎದುರಾಗಲಿದೆ ಸಂಕಷ್ಟ
ಗಲ್ಫ್ ದೇಶಗಳಲ್ಲಿ ಪ್ರದರ್ಶನಗೊಳ್ಳುವ ಪ್ರಿಂಟ್ಗಳಿಂದ ಪೈರಸಿ ಆಗುತ್ತಿದೆ ಎಂದು ಕೆಲವು ನಿರ್ಮಾಪಕರು ಅಭಿಪ್ರಾಯ ಹೊರಹಾಕಿದ್ದಾರೆಬ. ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬರುವುದು ಕಡಿಮೆಯಾಗುತ್ತಿರುವ ಈ ಸಮಯದಲ್ಲಿ ಸರ್ಕಾರದ ಈ ನಡೆ ಚಿತ್ರರಂಗಕ್ಕೆ ಹೊಸ ಆಶಾಕಿರಣ ಮೂಡಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.