ಐಸಿಸಿ ಬಿಡುಗಡೆ ಮಾಡಿರುವ ನೂತನ ಟಿ20 ಬ್ಯಾಟ್ಸ್ಮನ್ಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ಟೀಂ ಇಂಡಿಯಾದ ಯುವ ಆರಂಭಿಕ ಬ್ಯಾಟರ್ ವೈಭವ್ ಸೂರ್ಯವಂಶಿ ದಾಖಲೆಯ 230 ಸ್ಥಾನಗಳನ್ನು ಮೇಲೇರಿ 48ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿ ಸರಣಿ ಶ್ರೇಷ್ಠ ಗೆದ್ದಿದ್ದ ವೈಭವ್ಗೆ ಇದೀಗ ಐಸಿಸಿ ಕಡೆಯಿಂದಲೂ ಬಹುಮಾನ ಸಿಕ್ಕಿದೆ(PC-PTI).
ಜಿಂಬಾಬ್ವೆ ವಿರುದ್ಧದ ಟಿ20 ಸರಣಿಗೂ ಮೊದಲು ವೈಭವ್ ಸೂರ್ಯವಂಶಿ 278 ನೇ ಸ್ಥಾನದಲ್ಲಿದ್ದರು. ಆದರೆ ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳಲ್ಲಿ ವೈಭವ್ ಎರಡು ಅರ್ಧಶತಕಗಳು ಸೇರಿದ್ದಂತೆ ಬರೋಬ್ಬರಿ 151 ರನ್ ಕಲೆಹಾಕಿದ್ದರು. ಇದರ ಫಲವಾಗಿ ವೈಭವ್ 536 ರೇಟಿಂಗ್ ಪಾಯಿಂಟ್ಗಳೊಂದಿಗೆ 48ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ(PC-PTI).
ವೈಭವ್ ಸೂರ್ಯವಂಶಿ ಇದುವರೆಗೆ ಕೇವಲ ಎರಡು ಟಿ20 ಸರಣಿಗಳನ್ನು ಆಡಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಹೆಚ್ಚಿನ ಪಂದ್ಯಗಳನ್ನು ಆಡಿದರೆ ಶೀಘ್ರದಲ್ಲೇ ಟಾಪ್ 10 ರೊಳಗೆ ಪ್ರವೇಶಿಸುತ್ತಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದಾಗ್ಯೂ, ಈ 15 ವರ್ಷದ ಆಟಗಾರ ಫಿಟ್ನೆಸ್ ಸೇರಿದಂತೆ ನಂಬರ್ 1 ಆಟಗಾರನಾಗಲು ಶ್ರಮಿಸಬೇಕಾಗುತ್ತದೆ(PC-PTI).
ವೈಭವ್ ಸೂರ್ಯವಂಶಿ ಕೂಡ ಐಸಿಸಿ ಶ್ರೇಯಾಂಕದಲ್ಲಿ ಪ್ರಮುಖ ದಾಖಲೆಯನ್ನು ಮುರಿಯುವ ಅವಕಾಶವನ್ನು ಹೊಂದಿದ್ದಾರೆ. ಐಸಿಸಿ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದ ಅತ್ಯಂತ ಕಿರಿಯ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದಾರೆ. 1994 ರಲ್ಲಿ ಟೆಸ್ಟ್ ಶ್ರೇಯಾಂಕದಲ್ಲಿ ಸಚಿನ್ ಅಗ್ರಸ್ಥಾನವನ್ನು ತಲುಪಿದಾಗ ಅವರಿಗೆ ಕೇವಲ 21 ವರ್ಷ ಮತ್ತು 7 ತಿಂಗಳುಗಳಾಗಿತ್ತು(PC-PTI).
ವೈಭವ್ ಕೇವಲ 15 ವರ್ಷ ವಯಸ್ಸಿನವರಾಗಿದ್ದಾರೆ ಮತ್ತು ನಂಬರ್ ಒನ್ ಸ್ಥಾನವನ್ನು ತಲುಪಲು ಇನ್ನೂ ಸಾಕಷ್ಟು ಸಮಯವಿದೆ. ಈಗ, ಅವರು ಅದನ್ನು ಸಾಧಿಸಬಹುದೇ ಎಂದು ಕಾದು ನೋಡಬೇಕಾಗಿದೆ. ಟೀಂ ಇಂಡಿಯಾ ಟಿ20 ಮಾದರಿಯಲ್ಲಿ ಏಷ್ಯನ್ ಕ್ರೀಡಾಕೂಟದಲ್ಲಿ ಕಣಕ್ಕಿಳಿಯಲಿದೆ. ಅದಕ್ಕೂ ಮೊದಲು ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನದ ವಿರುದ್ಧ ಟಿ20 ಸರಣಿ ಆಡುವ ಅವಕಾಶವಿದೆ. ಆ ಸರಣಿಯಲ್ಲಿ ವೈಭವ್ ಮಿಂಚಿದರೆ ಅವರ ಸ್ಥಾನ ಮತ್ತಷ್ಟು ಸುಧಾರಿಸಲಿದೆ(PC-PTI).




