Headlines

IPL 2027: ಮುಂಬೈ ಯುವ ಪ್ರತಿಭೆಗಳೇ ಟಾರ್ಗೆಟ್: ಡೆಲ್ಲಿ ಕ್ಯಾಪಿಟಲ್ಸ್ ಟ್ರಯಲ್ಸ್ ಶುರು! – Kannada News | IPL 2027: Delhi Capitals Begin Player Trials in Bengaluru

ಇಂಡಿಯನ್ ಪ್ರೀಮಿಯರ್ ಲೀಗ್ (IPL) 2027ರ ಸೀಸನ್‌ಗಾಗಿ ಎಲ್ಲಾ ಫ್ರಾಂಚೈಸಿಗಳು ಈಗಿನಿಂದಲೇ ತೆರೆಮರೆಯ ಸಿದ್ಧತೆಗಳನ್ನು ಆರಂಭಿಸಿವೆ. ಇದರ ಭಾಗವಾಗಿ, ಡೆಲ್ಲಿ ಕ್ಯಾಪಿಟಲ್ಸ್ ತಂಡವು ದೇಶಿ ಕ್ರಿಕೆಟ್‌ನ ಯುವ ಮತ್ತು ಸ್ಫೋಟಕ ಆಟಗಾರರನ್ನು ಶೋಧಿಸಲು ಇಂದಿನಿಂದ ಬೆಂಗಳೂರಿನಲ್ಲಿ ಪ್ರಾಯೋಗಿಕ ಪಂದ್ಯಗಳು ಹಾಗೂ ಟ್ರಯಲ್ಸ್‌ಗಳನ್ನು ಹಮ್ಮಿಕೊಂಡಿದೆ.

ವೆಸ್ಟ್ ಝೋನ್ (ಪಶ್ಚಿಮ ವಲಯ) ಮತ್ತು ಸೌತ್ ಝೋನ್ (ದಕ್ಷಿಣ ವಲಯ) ವ್ಯಾಪ್ತಿಯ ಪ್ರತಿಭಾವಂತ ಯುವ ಆಟಗಾರರನ್ನು ಈ ಕ್ಯಾಂಪ್‌ಗೆ ಆಹ್ವಾನಿಸಲಾಗಿದೆ. ಇದರಲ್ಲಿ ಮುಂಬೈ ದೇಶಿ ಕ್ರಿಕೆಟ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಮೂವರು ಯುವ ಆಟಗಾರರಾದ ಆಯುಷ್ ವರ್ತಕ್, ಅಯಾಝ್ ಖಾನ್ ಮತ್ತು ದಿವ್ಯಾಂಶ್ ಸಕ್ಸೇನಾ ಪ್ರಮುಖ ಆಕರ್ಷಣೆಯಾಗಿದ್ದಾರೆ.

ಮುಂಬೈ ಬ್ಯಾಟರ್‌ಗಳ ಮೇಲೆ ಕಣ್ಣಿಟ್ಟ ಡಿಸಿ:

ಇತ್ತೀಚೆಗೆ ಮುಂಬೈನ ಸ್ಥಳೀಯ ಕ್ರಿಕೆಟ್ ಟೂರ್ನಿಗಳಾದ ‘ಟೈಮ್ಸ್ ಶೀಲ್ಡ್’ ಹಾಗೂ ವಿವಿಧ ವಯೋಮಿತಿ ಕ್ರಿಕೆಟ್‌ನಲ್ಲಿ ಈ ಮೂವರು ಆಟಗಾರರು ರನ್ ಮಳೆ ಹರಿಸಿದ್ದಾರೆ.

  • ದಿವ್ಯಾಂಶ್ ಸಕ್ಸೇನಾ: ಎಡಗೈ ಬ್ಯಾಟರ್ ಆಗಿರುವ ದಿವ್ಯಾಂಶ್ ಈಗಾಗಲೇ ಭಾರತದ ಅಂಡರ್-19 ತಂಡವನ್ನು ಪ್ರತಿನಿಧಿಸಿದ ಅನುಭವ ಹೊಂದಿದ್ದಾರೆ. ಇತ್ತೀಚಿನ ಪಂದ್ಯಗಳಲ್ಲಿ ಭರ್ಜರಿ ಶತಕಗಳನ್ನು ಸಿಡಿಸಿ ಮಿಂಚಿದ್ದರು.
  • ಆಯುಷ್ ವರ್ತಕ್ ಹಾಗೂ ಅಯಾಝ್ ಖಾನ್: ಇವರಿಬ್ಬರು ತಮ್ಮ ಸ್ಫೋಟಕ ಬ್ಯಾಟಿಂಗ್ ಶೈಲಿ ಹಾಗೂ ಬಿಗ್ ಹಿಟ್ಟಿಂಗ್ ಸಾಮರ್ಥ್ಯಕ್ಕೆ ಹೆಸರಾಗಿದ್ದಾರೆ. ಟಿ20 ಕ್ರಿಕೆಟ್‌ಗೆ ಬೇಕಾದ ಅದ್ಭುತ ಸ್ಟ್ರೈಕ್ ರೇಟ್ ಹೊಂದಿರುವುದು ಡೆಲ್ಲಿ ಫ್ರಾಂಚೈಸಿಯ ಗಮನ ಸೆಳೆಯಲು ಪ್ರಮುಖ ಕಾರಣವಾಗಿದೆ.

ಮುಂಚಿತವಾಗಿಯೇ ಸಿದ್ಧತೆ ಏಕೆ?

ಐಪಿಎಲ್‌ನ ಮುಂದಿನ ಆವೃತ್ತಿಗೆ ಇನ್ನು ಸಾಕಷ್ಟು ಸಮಯವಿದ್ದರೂ, ಫ್ರಾಂಚೈಸಿಗಳು ಯುವ ಆಟಗಾರರ ಫಿಟ್‌ನೆಸ್, ತಾಂತ್ರಿಕ ಕೌಶಲ್ಯ ಮತ್ತು ಒತ್ತಡದ ಸಂದರ್ಭಗಳನ್ನು ನಿಭಾಯಿಸುವ ಸಾಮರ್ಥ್ಯವನ್ನು ಹತ್ತಿರದಿಂದ ನೋಡಲು ಬಯಸುತ್ತವೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಟ್ರಯಲ್ಸ್‌ನಲ್ಲಿ ತರಬೇತುದಾರರು ಮತ್ತು ಸ್ಕೌಟಿಂಗ್ ತಂಡವು ಆಟಗಾರರ ಪ್ರದರ್ಶನವನ್ನು ಸೂಕ್ಷ್ಮವಾಗಿ ಗಮನಿಸಲಿದೆ. ಇಲ್ಲಿ ಮಿಂಚುವ ಆಟಗಾರರಿಗೆ ಮುಂಬರುವ ಐಪಿಎಲ್ ಹರಾಜಿನಲ್ಲಿ ಕೋಟಿ ಮೊತ್ತದ ಅದೃಷ್ಟ ಖುಲಾಯಿಸುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: ಟೀಮ್ ಇಂಡಿಯಾಗೆ ಜಮ್ಮು-ಕಾಶ್ಮೀರ ವೇಗಿ ಎಂಟ್ರಿ

ಡೆಲ್ಲಿ ಕ್ಯಾಪಿಟಲ್ಸ್ ತಂಡ: ನಿತೀಶ್ ರಾಣಾ, ಅಭಿಷೇಕ್ ಪೊರೆಲ್, ಅಜಯ್ ಮಂಡಲ್, ಅಶುತೋಷ್ ಶರ್ಮಾ, ಅಕ್ಷರ್ ಪಟೇಲ್, ದುಷ್ಮಂತ ಚಮೀರಾ, ಕರುಣ್ ನಾಯರ್, ಕೆಎಲ್ ರಾಹುಲ್, ಕುಲದೀಪ್ ಯಾದವ್, ಮಾಧವ್ ತಿವಾರಿ, ಮಿಚೆಲ್ ಸ್ಟಾರ್ಕ್, ಸಮೀರ್ ರಿಝ್ವಿ, ಟಿ ನಟರಾಜನ್, ತ್ರಿಪುರಾಣ ವಿಜಯ್, ಟ್ರಿಸ್ಟನ್ ಸ್ಟಬ್ಸ್, ವಿಪ್ರಾಜ್ ನಿಗಮ್, ಡೇವಿಡ್ ಮಿಲ್ಲರ್, ಬೆನ್ ಡಕೆಟ್, ಆಖಿಬ್ ನಬಿ, ಪಾತುಮ್ ನಿಸ್ಸಾಂಕಾ, ಲುಂಗಿ ಎನ್‌ಗಿಡಿ, ಸಾಹಿಲ್ ಪರಾಖ್, ಪೃಥ್ವಿ ಶಾ, ಕೈಲ್ ಜೇಮಿಸನ್.

Source link

Leave a Reply

Your email address will not be published. Required fields are marked *