
ಬೆಂಗಳೂರು, (ಆಗಸ್ಟ್ 15): ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ಸಿದ್ದರಾಮಯ್ಯನವರು ಸೈಲೆಂಟ್ ಆಗಿದ್ದಾರೆ. ಬಹಿರಂವಾಗಿ ಯಾವುದೇ ಹೇಳಿಕೆಗಳನ್ನು ನೀಡದೇ ಸೈಲೆಂಟ್ ಮೂಡ್ಗೆ ಜಾರಿದ್ದಾರೆ. ಇಂದು (ಆಗಸ್ಟ್ 15) ಮಾಧ್ಯಮದವರು ಸಿದ್ದರಾಮಯ್ಯನವರನ್ನು ಮಾತನಾಡಿಸುವ ಪ್ರಯತ್ನ ಮಾಡಿದ್ದಾರೆ. ಆದ್ರೆ, ಸಿದ್ದರಾಂಯ್ಯ ಮಾತ್ರ, ನಾನು ಎಲ್ಲಿ ಸೈಲೆಂಟ್ ಆಗಿದ್ದೇನೆ. ನಾನು ಹೆಚ್ಚು ಮಾತಾಡುತ್ತಿಲ್ಲ ಅಷ್ಟೇ . ನಾನು ಮುಖ್ಯಮಂತ್ರಿ ಅಲ್ಲ, ಹಾಗಾಗಿ ಜವಾಬ್ದಾರಿ ಇಲ್ಲ. ನಿನ್ನೆ ಅಧಿವೇಶನದಲ್ಲಿ ಭಾಗಿ ಆಗಿದ್ದೇನೆ. ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ಎಂದಿದ್ದಾರೆ.
ಮಹಿಳಾ ಕೋಟಾ ಭರ್ತಿ ಆಗಿಲ್ಲ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ್ದು, ಬಿಜೆಪಿಯವರಿಗೆ ಯಾವ ನೈತಿಕತೆ ಇದೆ. ಅವರ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಅವಕಾಶ ಕೊಟ್ಟಿಲ್ಲ. ಮಹಿಳೆಯರಿಗೆ ಸ್ಥಾನ ಕೊಡಬೇಕೆಂದು ನಾನು ಹೇಳಿದ್ದೇನೆ ಎಂದು ಹೇಳಿದರು.