ಇನ್ನು ಗಾಲೆಯಲ್ಲಿ ರನ್‌ಗಳ ವಿಷಯದಲ್ಲಿ ಅತಿದೊಡ್ಡ ಗೆಲುವು ಸಾಧಿಸಿದ ದಾಖಲೆಯನ್ನು ಟೀಂ ಇಂಡಿಯಾ ಹೊಂದಿದೆ. 2017 ರಲ್ಲಿ ನಡೆದಿದ್ದ ಆ ಪಂದ್ಯದಲ್ಲಿ ಟೀಂ ಇಂಡಿಯಾ, ಶ್ರೀಲಂಕಾವನ್ನು 304 ರನ್‌ಗಳಿಂದ ಸೋಲಿಸಿತು. ಆ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 600 ರನ್‌ಗಳನ್ನು ಗಳಿಸಿದರೆ, ಶ್ರೀಲಂಕಾ 291 ರನ್ ಬಾರಿಸಿತ್ತು. ನಂತರ ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ 240 ರನ್ ಕಲೆಹಾಕಿದರೆ, ಇತ್ತ ಈ ಗುರಿ ಬೆನ್ನಟ್ಟಿದ ಶ್ರೀಲಂಕಾ 245 ರನ್‌ಗಳಿಗೆ ಆಲೌಟ್ ಆಯಿತು.