ಈಗೀಗ ಹುಡುಗರು (young men) ತಮಗಿಂತ ಹಿರಿಯ ವಯಸ್ಸಿನ ಹುಡುಗಿಯನ್ನು ಇಷ್ಟಪಡೋದು, ಮದುವೆಯಾದೋದು ಟ್ರೆಂಡ್ ಆಗಿದೆ. ಹೌದು ಯುವತಿಯರು ತಮಗಿಂತ ಹತ್ತು ಹನ್ನೆರಡು ವರ್ಷ ದೊಡ್ಡವರನ್ನು ಮದುವೆಯಾಗಲು ಬಯಸುವಂತೆ, ಯುವಕರು ಹೆಚ್ಚಾಗಿ ತಮಗಿಂತ ಹೆಚ್ಚಿನ ಮಹಿಳೆಯರತ್ತ ಆಕರ್ಷಿತರಾಗುತ್ತಿದ್ದಾರೆ. ಹೀಗೆ ಯುವಕರು ತಮಗಿಂತ ವಯಸ್ಸಿನಲ್ಲಿ ದೊಡ್ಡ ಮಹಿಳೆಯನ್ನು ಇಷ್ಟಪಡೋದಕ್ಕೆ, ಅವರತ್ತ ಆಕರ್ಷಿತರಾಗಲು ಸ್ಪಷ್ಟವಾದ ಮಾನಸಿಕ ಕಾರಣಗಳಿವೆ. ಇದು ಕೇವಲ ಆಕರ್ಷಣೆಯಲ್ಲ, ಗುಪ್ತ ಭಾವನೆಗಳು, ಅನುಭವಗಳು ಆಧರಿಸಿವೆಯಂತೆ. ಯುವಕರು ತಮಗಿಂತ ದೊಡ್ಡ ವಯಸ್ಸಿನ ಮಹಿಳೆಯರನ್ನೇಕೆ ಇಷ್ಟಪಡೋದು ಎಂಬುದರ ಪೂರ್ಣ ಮಾಹಿತಿಯನ್ನು ತಿಳಿಯೋಣ.
ಯುವಕರು ತಮಗಿಂತ ವಯಸ್ಸಿನಲ್ಲಿ ದೊಡ್ಡ ಮಹಿಳೆಯರನ್ನೇಕೆ ಇಷ್ಟಪಡೋದು?
ಪ್ರಬುದ್ಧತೆ ಮತ್ತು ವಿಶ್ವಾಸ:
ಯುವಕರು ಮಹಿಳೆಯರತ್ತ ಆಕರ್ಷಿತರಾಗಲು ಮಹಿಳೆಯರ ಭಾವನಾತ್ಮಕ ಪರಿಪಕ್ವತೆ ಮತ್ತು ಆಳವಾದ ಜೀವನ ಅನುಭವವೇ ದೊಡ್ಡ ಕಾರಣ. ಹಿರಿಯ ವಯಸ್ಸಿನ ಮಹಿಳೆಯರು ಹೆಚ್ಚಾಗಿ ಆತ್ಮವಿಶ್ವಾಸದಿಂದ ತುಂಬಿರುತ್ತಾರೆ ಮತ್ತು ಜೀವನದ ಬಗ್ಗೆ ಸ್ಪಷ್ಟ ದೃಷ್ಟಿಕೋನ ಹೊಂದಿರುತ್ತಾರೆ. ಅವರು ಸಂಬಂಧಗಳನ್ನು ಬಹಳ ಪ್ರಾಯೋಗಿಕ ವಿಧಾನದಿಂದ ನಿರ್ವಹಿಸುತ್ತಾರೆ. ಮಹಿಳೆಯರಲ್ಲಿರುವ ಈ ಬುದ್ಧಿವಂತಿಕೆಯು ಯುವಕರನ್ನು ಹೆಚ್ಚಾಗಿ ಆಕರ್ಷಿಸುತ್ತದೆ.
ಭಾವನಾತ್ಮಕ ಭದ್ರತೆ ಮತ್ತು ಮಾನಸಿಕ ಶಾಂತಿ:
ಯುವಕರು ತಮ್ಮ ವೈಯಕ್ತಿಕ ಅಥವಾ ಸಾಮಾಜಿಕ ಅನುಭವಗಳಿಂದಾಗಿ, ಭಾವನಾತ್ಮಕ ಭದ್ರತೆಯನ್ನು ಬಯಸುತ್ತಾರೆ, ಇದನ್ನು ಅವರು ತಮಗಿಂತ ಹಿರಿಯ ವಯಸ್ಸಿನ ಮಹಿಳೆಯೊಂದಿಗೆ ಸುಲಭವಾಗಿ ಕಂಡುಕೊಳ್ಳುತ್ತಾರೆ. ಇದಲ್ಲದೆ, ಪ್ರಬುದ್ಧ ಮಹಿಳೆಯರು ಸಂಭಾಷಣೆ ಮತ್ತು ಸಂವಹನದಲ್ಲಿ ಹೆಚ್ಚು ಉತ್ತಮರಾಗಿರುತ್ತಾರೆ. ಅವರು ಸಂಬಂಧಗಳಲ್ಲಿ ಅನಗತ್ಯ ಜಗಳ, ಮನಸ್ತಾಪ ಅಥವಾ ಉದ್ವಿಗ್ನತೆಯನ್ನು ಸೃಷ್ಟಿಸುವುದಿಲ್ಲ. ಈ ಶಾಂತ ಮತ್ತು ಸಂಯೋಜಿತ ವರ್ತನೆ ಯುವಕರಿಗೆ ತುಂಬಾ ಇಷ್ಟವಾಗುತ್ತದೆ. ಅಲ್ಲದೆ ಸಣ್ಣ ವಯಸ್ಸಿನ ಹುಡುಗಿಯರಂತೆ ದೊಡ್ಡ ವಯಸ್ಸಿನ ಮಹಿಳೆಯರು ನಾಟಕೀಯವಾಗಿ ವರ್ತಿಸುವುದಿಲ್ಲ.
ಜವಾಬ್ದಾರಿಯನ್ನು ನಿರ್ವಹಿಸುವ ಸಾಮರ್ಥ್ಯ:
ವಯಸ್ಸಿನಲ್ಲಿ ದೊಡ್ಡವರಾಗಿರುವ ಮಹಿಳೆಯರು ಸಂಬಂಧಗಳನ್ನು ಹೆಚ್ಚು ಗಂಭೀರವಾಗಿ ಪರಿಗಣಿಸುತ್ತಾರೆ ಮತ್ತು ಹೆಚ್ಚು ಜವಾಬ್ದಾರಿಯುತವಾಗಿರುತ್ತಾರೆ ಎಂದು ಕಿರಿಯ ಯುವಕರು ನಂಬುತ್ತಾರೆ. ಅವರು ಕ್ಷುಲ್ಲಕ ವಿಷಯಗಳಿಗೆ ಬ್ರೇಕಪ್ ಮಾಡಿಕೊಂಡು ದೂರವಾಗುವುದಿಲ್ಲ, ಬದಲಾಗಿ ವಿಷಯಗಳನ್ನು ಸರಿಪಡಿಸಲು ಪ್ರಯತ್ನಿಸುತ್ತಾರೆ.
ದೈಹಿಕ ಆಕರ್ಷಣೆ:
ಕೆಲವು ಸಂದರ್ಭಗಳಲ್ಲಿ, ದೈಹಿಕ ಆಕರ್ಷಣೆಯೂ ಒಂದು ಕಾರಣ. ಅನೇಕ ಮಹಿಳೆಯರು ವಯಸ್ಸಾದಂತೆ ಹೆಚ್ಚು ಆಕರ್ಷಿತರಾಗಿ ಕಾಣಿಸುತ್ತಾರೆ. ಈ ದೈಹಿಕ ಸೌಂದರ್ಯಕ್ಕೂ ಯುವಕರು ಆಕರ್ಷಿತರಾಗುತ್ತಾರೆ.
ಇದನ್ನೂ ಓದಿ: ಅತ್ತೆ-ಸೊಸೆ ಈ ನಿಮಯಮಗಳನ್ನು ಪಾಲಿಸಿದರೆ ಮನೆಯಲ್ಲಿ ಯಾವುದೇ ಜಗಳ ಇರೋದಿಲ್ಲ
ಸ್ಪಷ್ಟ ತಿಳುವಳಿಕೆ:
ಇನ್ನೊಂದು ಕಾರಣ ಸ್ಪಷ್ಟತೆ. ಹಿರಿಯ ಮಹಿಳೆಯರು ಸಾಮಾನ್ಯವಾಗಿ ತಮ್ಮ ಜೀವನದ ಬಗ್ಗೆ ಸ್ಪಷ್ಟ ತಿಳುವಳಿಕೆಯನ್ನು ಹೊಂದಿರುತ್ತಾರೆ. ಅವರಿಗೆ ಏನು ಬೇಕು ಮತ್ತು ಏನು ಬೇಡ ಎಂದು ತಿಳಿದಿರುತ್ತದೆ. ಈ ಆತ್ಮವಿಶ್ವಾಸವು ಯುವರಕನ್ನು ಹೆಚ್ಚು ಆಕರ್ಷಿಸುತ್ತದೆ.
ವಿಚಾರಗಳನ್ನು ನೇರವಾಗಿ ಹೇಳುತ್ತಾರೆ:
ಹಿರಿಯ ವಯಸ್ಸಿನ ಮಹಿಳೆಯರು ಯಾವುದೇ ವಿಚಾರದಲ್ಲೂ ಮುಜುಗರ ವ್ಯಕ್ತಪಡಿಸುವುದಿಲ್ಲ. ತುಂಬಾನೇ ಬೋಲ್ಡ್ ಆಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅಲ್ಲದೆ ಇವರು ಮೆಚ್ಯೂರ್ಡ್ ಆಗಿ ವರ್ತಿಸುತ್ತಾರೆ. ಇದಕ್ಕಾಗಿಯೇ ಯುವಕರಿಗೆ ತಮಗಿಂತ ಹೆಚ್ಚಿನ ವಯಸ್ಸಿನ ಮಹಿಳೆಯರು ಇಷ್ಟವಾಗೋದು.
ಹೆಚ್ಚಿನ ಪ್ರೀತಿ:
ದೊಡ್ಡ ವಯಸ್ಸಿನ ಮಹಿಳೆಯರು ಹೆಚ್ಚಿನ ಪ್ರೀತಿ ನೀಡುತ್ತಾರೆ ಜೊತೆಗೆ ಅವರಲ್ಲಿ ಕೇರಿಂಗ್ ಗುಣವೂ ಇರುತ್ತದೆ. ಈ ಗುಣ ಯುವಕರಿಗೆ ಹೆಚ್ಚು ಇಷ್ಟವಾಗುತ್ತದೆ. ಅಲ್ಲದೆ ಹೆಚ್ಚಿನ ವಯಸ್ಸಿನ ಮಹಿಳೆಯರು ಸಣ್ಣಪುಟ್ಟ ವಿಚಾರಗಳಿಗೆ ಜಗಳವಾಡುವುದಿಲ್ಲ, ಪ್ರಬುದ್ಧತೆಯಿಂದ ವರ್ತಿಸುತ್ತಾರೆ. ಈ ಗುಣವೂ ಯುವಕರಿಗೆ ಇಷ್ಟವಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ