Headlines

Income Tax Dept: ಸಂಶಯಾಸ್ಪದ ವಿದೇಶಿ ಹಣ ರವಾನೆ: ದೇಶಾದ್ಯಂತ ಪರಿಶೀಲನೆ ಆರಂಭಿಸಿದ ಆದಾಯ ತೆರಿಗೆ ಇಲಾಖೆ | Income Tax Department launches nationwide verification drive into suspicious foreign remittances

ನವದೆಹಲಿ, ಆಗಸ್ಟ್ 18: ವಿದೇಶಗಳಿಗೆ ಅನುಮಾನಾಸ್ಪದ ರೀತಿಯಲ್ಲಿ ಹಣ ರವಾನೆ (Foreign Remittances) ಮಾಡುತ್ತಿರುವ ಪ್ರಕರಣಗಳನ್ನು ತಡೆಯಲು ಆದಾಯ ತೆರಿಗೆ ಇಲಾಖೆಯು (Income Tax Department) ದೇಶಾದ್ಯಂತ ವ್ಯಾಪಕ ಪರಿಶೀಲನಾ ಅಭಿಯಾನವನ್ನು (Nationwide Verification Drive) ಪ್ರಾರಂಭಿಸಿದೆ. ದತ್ತಾಂಶ ವಿಶ್ಲೇಷಣೆ ಹಾಗೂ ರಹಸ್ಯ ಮಾಹಿತಿಯ ಆಧಾರದ ಮೇಲೆ, ಆದಾಯ ತೆರಿಗೆ ಇಲಾಖೆಯು ಸುಮಾರು 394 ನಕಲಿ ಸಂಸ್ಥೆಗಳು (Shell Entities) ಮತ್ತು ಅವುಗಳಿಗೆ ದೃಢೀಕರಣ ಪತ್ರಗಳನ್ನು (Form 15CB/Form 146) ನೀಡಿದ 36 ಚಾರ್ಟರ್ಡ್ ಅಕೌಂಟೆಂಟ್‌ಗಳನ್ನು (CA) ಪರಿಶೀಲನೆಗೆ ಒಳಪಡಿಸಿದೆ.

ದೇಶದ ಭೂಗಡಿ ಪ್ರದೇಶಗಳಿಗೆ ಹೊಂದಿಕೊಂಡಿರುವ ಜಿಲ್ಲೆಗಳಲ್ಲಿ ಕಾರ್ಯಾಚರಿಸುತ್ತಿದ್ದು, ವಿದೇಶಗಳಿಗೆ ಭಾರಿ ಮೊತ್ತದ ಹಣವನ್ನು ರವಾನಿಸಿರುವ ಸುಮಾರು 117 ಸಂಸ್ಥೆಗಳನ್ನು ಸಹ ಈ ಪರಿಶೀಲನೆಯ ವ್ಯಾಪ್ತಿಗೆ ತರಲಾಗಿದೆ.

ಇದನ್ನೂ ಓದಿ: ‘ಪಿಎಂ ಕೇರ್ಸ್ ನಿಧಿ’ ವಿವರ ಬಹಿರಂಗ: ಫಂಡ್​ನಲ್ಲಿರುವ ಹಣ 8,452 ಕೋಟಿ ರೂಗೆ ಏರಿಕೆ

ಷೆಲ್ ಕಂಪನಿಗಳ ಜಾಲ: ಇತ್ತೀಚೆಗೆ ಬೋಗಸ್ ದೇಣಿಗೆಯ ಹೆಸರಿನಲ್ಲಿ ಕಾರ್ಯಾಚರಿಸುತ್ತಿದ್ದ ನಕಲಿ ಚಾರಿಟೇಬಲ್ ಟ್ರಸ್ಟ್‌ಗಳ ಮೇಲೆ ನಡೆದ ದಾಳಿಯ ವೇಳೆ ಈ ಅಕ್ರಮ ಹಣ ರವಾನೆ ಜಾಲ ಬೆಳಕಿಗೆ ಬಂದಿತ್ತು. ಅತ್ಯಲ್ಪ ಆದಾಯ ಅಥವಾ ತೆರಿಗೆ ರಿಟರ್ನ್ಸ್ (ITR) ಸಲ್ಲಿಸದ ಸಂಸ್ಥೆಗಳು, ಸಾಫ್ಟ್‌ವೇರ್ ಆಮದು ಅಥವಾ ಸಾಗಣೆ ವೆಚ್ಚದ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವಿದೇಶಕ್ಕೆ ಕಳುಹಿಸಿರುವುದು ಕಂಡುಬಂದಿದೆ.

ವಿಳಾಸಗಳೇ ಇಲ್ಲ: ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ, ಈ ಹಣ ರವಾನಿಸಿದ ಹಲವು ಸಂಸ್ಥೆಗಳು ತಾವು ನೀಡಿದ ಕಚೇರಿ ವಿಳಾಸಗಳಲ್ಲಿ ಅಸ್ತಿತ್ವದಲ್ಲೇ ಇಲ್ಲದಿರುವುದು ಪತ್ತೆಯಾಗಿದೆ.

ಸಿಎಗಳಿಗೆ ಸೂಚನೆ: ಚಾರ್ಟರ್ಡ್ ಅಕೌಂಟೆಂಟ್‌ಗಳು ವಿದೇಶಿ ಹಣ ರವಾನೆಗೆ ಸಂಬಂಧಿಸಿದಂತೆ ‘ಫಾರ್ಮ್ 15CB/146’ ನೀಡುವ ಮುನ್ನ ಸೂಕ್ತ ದಾಖಲೆಗಳನ್ನು ಮತ್ತು ವಹಿವಾಟುಗಳನ್ನು ಸರಿಯಾಗಿ ಪರಿಶೀಲಿಸಿ, ವೃತ್ತಿಪರ ಎಚ್ಚರಿಕೆಯಿಂದ ಪ್ರಮಾಣಪತ್ರ ನೀಡಬೇಕು ಎಂದು ಇಲಾಖೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ಅನಿವಾಸಿ ಭಾರತೀಯರ ಎಫ್​ಸಿಎನ್​ಆರ್ ಠೇವಣಿಗಳು: ಗಡುವನ್ನು ಒಂದು ತಿಂಗಳು ಹಿಂದೂಡಿದ ಆರ್​ಬಿಐ

ಅಕ್ರಮವಾಗಿ ದೇಶದ ಹಣವನ್ನು ವಿದೇಶಗಳಿಗೆ ವರ್ಗಾಯಿಸುವ ಷೆಲ್ ಕಂಪನಿಗಳು ಮತ್ತು ಅವುಗಳ ಹಿಂದೆ ಇರುವ ಸೂತ್ರಧಾರರ ವಿರುದ್ಧ ಆದಾಯ ತೆರಿಗೆ ಇಲಾಖೆ ತನಿಖೆಯನ್ನು ತೀವ್ರಗೊಳಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *