ಟೆಸ್ಟ್ ಕ್ರಿಕೆಟ್ನ ಮದಗಜಗಳ ಕಾಳಗದಲ್ಲಿ ಮತ್ತೊಮ್ಮೆ ಇಂಗ್ಲೆಂಡ್ ತಂಡವನ್ನು ಬಗ್ಗು ಬಡಿಯುವಲ್ಲಿ ಆಸ್ಟ್ರೇಲಿಯಾ ತಂಡ ಯಶಸ್ವಿಯಾಗಿದೆ. ಈ ಬಾರಿ ಕೇವಲ 4719 ಎಸೆತಗಳಲ್ಲಿ ಆಂಗ್ಲರನ್ನು ಕಟ್ಟಿಹಾಕಲಾಗಿದೆ. ಅಂದರೆ 4719 ಎಸೆತಗಳಲ್ಲೇ ಈ ಬಾರಿಯ ಆ್ಯಶಸ್ ಸರಣಿಯ ಫಲಿತಾಂಶ ಹೊರಬಿದ್ದಿದೆ.
ಈ ಸರಣಿಯ ಮೊದಲೆರಡು ಪಂದ್ಯಗಳಲ್ಲಿ 8 ವಿಕೆಟ್ಗಳ ಜಯ ಸಾಧಿಸಿದ್ದ ಆಸ್ಟ್ರೇಲಿಯಾ ತಂಡವು ಮೂರನೇ ಟೆಸ್ಟ್ ಪಂದ್ಯದಲ್ಲಿ 82 ರನ್ಗಳ ಗೆಲುವು ದಾಖಲಿಸಿದೆ. ಈ ಮೂಲಕ 3-0 ಅಂತರದಿಂದ ಆ್ಯಶಸ್ ಸರಣಿಯನ್ನು ವಶಪಡಿಸಿಕೊಂಡಿದೆ.
ಈ ಮೂರು ಪಂದ್ಯಗಳಲ್ಲಿ ಆಡಲಾದ ಒಟ್ಟು ಓವರ್ಗಳ ಸಂಖ್ಯೆ 786.3, ಅಂದರೆ 4719 ಎಸೆತಗಳಲ್ಲಿ ಸರಣಿಯ ಫಲಿತಾಂಶ ನಿರ್ಧಾರವಾಗಿದೆ.
ಶತಮಾನದ ಇತಿಹಾಸ ಹೊಂದಿರುವ ಆ್ಯಶಸ್ 5 ಪಂದ್ಯಗಳ ಸರಣಿಯ ಫಲಿತಾಂಶ ಹೀಗೆ ಅತೀ ಕಡಿಮೆ ಓವರ್ಗಳಲ್ಲಿ ನಿರ್ಧಾರವಾಗುತ್ತಿರುವುದು ಇದು ಎರಡನೇ ಬಾರಿ. ಇದಕ್ಕೂ ಮುನ್ನ 2001 ರಲ್ಲಿ 665.1 ಓವರ್ಗಳಲ್ಲಿ ಮೂರು ಪಂದ್ಯಗಳು ಮುಗಿದಿತ್ತು.
ಇದೀಗ 786.3 ಓವರ್ಗಳ ಮೂಲಕ ಆ್ಯಶಸ್ ಸರಣಿಯನ್ನು ಗೆದ್ದುಕೊಳ್ಳುವಲ್ಲಿ ಆಸ್ಟ್ರೇಲಿಯಾ ತಂಡ ಯಶಸ್ವಿಯಾಗಿದೆ. ಈ ಮೂಲಕ ಇಂಗ್ಲೆಂಡ್ ವಿರುದ್ಧ ಆಸೀಸ್ ಪಡೆ ಮತ್ತೊಮ್ಮೆ ಪಾರುಪತ್ಯ ಮೆರೆದಿದ್ದಾರೆ.